--Ads--

ಕ್ರಿಕೆಟ್ ಪಂದ್ಯಾವಳಿ ಸಂಭ್ರಮ: ವಿಜೇತರಿಗೆ ನಿಸರ್ಗ ನಾರಾಯಣಸ್ವಾಮಿ ಅವರಿಂದ ಬಹುಮಾನ ವಿತರಣೆ

On: April 7, 2026 11:10 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಅಣಿಘಟ್ಟದಲ್ಲಿ ಎಪಿಎಲ್ ಟ್ರೋಫಿ ಸೀಸನ್-2

ಕ್ರಿಕೆಟ್ ಪಂದ್ಯಾವಳಿ ಸಂಭ್ರಮ: ವಿಜೇತರಿಗೆ ನಿಸರ್ಗ ನಾರಾಯಣಸ್ವಾಮಿ ಅವರಿಂದ ಬಹುಮಾನ ವಿತರಣೆ

​ದೇವನಹಳ್ಳಿ: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳ ಆಯೋಜನೆ ಅತ್ಯಗತ್ಯ ಎಂದು ಮಾಜಿ ಶಾಸಕ ಶ್ರೀ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

​ತಾಲ್ಲೂಕಿನ ಅಣಿಘಟ್ಟ ಗ್ರಾಮದಲ್ಲಿ ಈ ತಿಂಗಳ 19 ರಿಂದ 22ರವರೆಗೆ ಆಯೋಜಿಸಲಾಗಿದ್ದ ‘ಎಪಿಎಲ್ ಟ್ರೋಫಿ ಸೀಸನ್-2’ (APL TROPHY SEASON-2) ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನ ವಿತರಿಸಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ,

“ಗ್ರಾಮೀಣ ಭಾಗದ ಯುವಕರಲ್ಲಿ ಅದ್ಭುತವಾದ ಪ್ರತಿಭೆಯಿದೆ. ಇಂತಹ ಟೂರ್ನಮೆಂಟ್‌ಗಳ ಮೂಲಕ ಅವರಲ್ಲಿರುವ ಕೌಶಲ್ಯವನ್ನು ಹೊರತರಲು ಸಾಧ್ಯವಾಗುತ್ತದೆ. ಇಡೀ ರಾಜ್ಯಾದ್ಯಂತ ಹೆಚ್ಚು ಹೆಚ್ಚು ಕ್ರೀಡಾಕೂಟಗಳು ನಡೆದರೆ ನಮ್ಮ ಯುವಕರು ಐಪಿಎಲ್, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಡಲು ಉತ್ತೇಜನ ನೀಡಿದಂತಾಗುತ್ತದೆ. ಅಣಿಘಟ್ಟದ ಯುವಕರು ಅಚ್ಚುಕಟ್ಟಾಗಿ ಈ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಯುವ ಮಿತ್ರರ ಇಂತಹ ಸತ್ಕಾರ್ಯಗಳಿಗೆ ನನ್ನ ಬೆಂಬಲ ಸದಾ ಇರಲಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಈ ಪಂದ್ಯಾವಳಿಯಲ್ಲಿ ಬೀರಸಂದ್ರ ಗ್ರಾಮದ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡರೆ, ಚೀಮಾಚನಹಳ್ಳಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಸಾವಕನಹಳ್ಳಿ ಮತ್ತು ಅಣಿಘಟ್ಟ ತಂಡಗಳು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್, ಯುವ ಘಟಕದ ಅಧ್ಯಕ್ಷ ಟಿ. ರವಿ, ಮಣಿಕಂಠ, ಬೀರಸಂದ್ರ ಹನುಮಾನ್, ಬಿದಲೂರು ಗ್ರಾಮ ಪಂಚಾಯತಿ ಸದಸ್ಯ ಕುಮಾರ್, ಪ್ರಮುಖ ಮುಖಂಡರಾದ ರಾಮಾಂಜಿನಪ್ಪ, ಅಣಿಘಟ್ಟ ಸುಬ್ರಮಣಿ, ಕುಂದಾಣ ಕಿಶೋರ್, ಯಲ್ಲಪ್ಪ, ಶಿವು, ಶ್ರೀನಿವಾಸ್, ನಾಗರಾಜ್, ಪ್ರತಾಪ್, ಮನೋಜ್ ಹಾಗೂ ಪಂದ್ಯಾವಳಿಯ ಆಯೋಜಕ ಅಣಿಘಟ್ಟ ಮನು ಸೇರಿದಂತೆ ಅನೇಕ ಕ್ರೀಡಾಭಿಮಾನಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now