--Ads--

ಕೊತ್ತನೂರು ಎಂ ಪಿ ಸಿ ಎಸ್  ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ

On: April 7, 2026 4:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕೊತ್ತನೂರು ಎಂ ಪಿ ಸಿ ಎಸ್  ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ

ಶಿಡ್ಲಘಟ್ಟ : ತೀವ್ರ ಹಣಾಹಣಿಯಿಂದ ನಡೆದ ಕೊತ್ತನೂರು ಹಾಲು ಉತ್ಪಾದಕ ಸಹಕಾರ ಸಂಘದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 8 ಸ್ಥಾನಗಳಲ್ಲಿ , ಕಾಂಗ್ರೆಸ್ ಬೆಂಬಲಿತರು 5 ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ.

ಸಾಮಾನ್ಯ ಮೀಸಲು ಸ್ಥಾನದಿಂದ ಕೆ.ವಿ.ಜಗದೀಶ್‌ರೆಡ್ಡಿ, ಡಿ.ಎಂ.ರಘುನಾಥರೆಡ್ಡಿ,ಗಿರಿಧರ್ ,ಕೆ.ನಾರಾಯಣಸ್ವಾಮಿ, ಕೆ.ಸಿ.ನಾರಾಯಣಸ್ವಾಮಿ,ಕೆ.ಆರ್.ವೇಣುಗೋಪಾಲರೆಡ್ಡಿ,, ಎಸ್.ಕೆ.ರಾಮಯ್ಯ, ಪ.ಜಾತಿ ಮೀಸಲು ಸ್ಥಾನದಿಂದ ಉತ್ತನಳ್ಳಪ್ಪ, ಕೆ.ಸಿ.ಚಂದ್ರಶೇಖರ್, ಬಿಸಿಎಂ ಎ ವರ್ಗದಿಂದ ಮಂಜುಳಮ್ಮ, ಬಿಸಿಎಂ ಬಿ ವರ್ಗದಿಂದ ರಾಜಣ್ಣ, ಮಹಿಳಾ ಮೀಸಲು ಕ್ಷೇತ್ರದಿಂದ ಎ.ಮಂಜುಳಾ, ಮಂಜುಳಮ್ಮ ವಿಜೇತರಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಕೆ.ಎಸ್.ಭಾಸ್ಕರರೆಡ್ಡಿ ಕಾರ್ಯನಿರ್ವಹಿಸಿದರು.ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಮುಖಂಡರು ಹಾಗುವ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮಇದೇ ವೇಳೆ ಜೆಡಿಎಸ್ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸುವಂತೆ ಮಾತನಾಡಿದ್ದು, ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

WhatsApp

Join Now

Telegram

Join Now

Instagram

Join Now