--Ads--

ದೇವನಹಳ್ಳಿಯಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ: ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ

On: April 21, 2026 11:46 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ದೇವನಹಳ್ಳಿಯಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ: ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ

 

ದೇವನಹಳ್ಳಿ: ಲೋಕಸಭೆಯಲ್ಲಿ 33% ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿ ಹಾಗೂ ಮಹಿಳೆಯರಿಗೆ ಅಗೌರವ ತೋರುತ್ತಿರುವ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ವತಿಯಿಂದ ದೇವನಹಳ್ಳಿ ವಿಧಾನ ಕ್ಷೇತ್ರದ ಮಾಜಿ ಶಾಸಕ ಶ್ರೀ ನಿಸರ್ಗ ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಖಂಡಿಸಿದ ಪ್ರತಿಭಟನಾಕಾರರು, ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಬಳಿಕ ದೇವನಹಳ್ಳಿ ತಾಲ್ಲೂಕು ತಹಶೀಲ್ದಾರರ ಮುಖಾಂತರ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ತಾಲ್ಲೂಕು ಕಚೇರಿ ಆವರಣದಲ್ಲಿ ಶಿರಸ್ತೇದಾರ್ ಸಂತೋಷ್ ಅವರು ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು, “ಇಂದಿನ ಕಾಲದಲ್ಲಿ ಮಹಿಳೆಯರು ಸರ್ವ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿ ಒಕ್ಕೂಟ’ ಮಹಿಳೆಯರಿಗೆ ಸಿಗಬೇಕಾದ ಶೇ. 33ರಷ್ಟು ಮೀಸಲಾತಿಯನ್ನು ವಿರೋಧಿಸುವ ಮೂಲಕ ಅವರ ಪ್ರಗತಿಗೆ ಅಡ್ಡಿಪಡಿಸುತ್ತಿದೆ. ಕಾಂಗ್ರೆಸ್‌ನ ಈ ದ್ವಂದ್ವ ನೀತಿಯ ವಿರುದ್ಧ ಇಂದು 150ಕ್ಕೂ ಹೆಚ್ಚು ಮಹಿಳಾ ಸಂಘಟನಾಕಾರರು ಒಗ್ಗೂಡಿ ಧ್ವನಿ ಎತ್ತಿದ್ದೇವೆ” ಎಂದು ತಿಳಿಸಿದರು.

​ಈ ಪ್ರತಿಭಟನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ವಿ. ಮಂಜುನಾಥ್, ತಾಲ್ಲೂಕು ಅಧ್ಯಕ್ಷ  ಸಾದಹಳ್ಳಿ ಮಹೇಶ್, ಗೌರವಾಧ್ಯಕ್ಷ ಸಂಪಂಗಪ್ಪ, ಕಾರ್ಯಾಧ್ಯಕ್ಷ ಗುಟ್ಟಹಳ್ಳಿ ರವೀಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಗೋಣೂರು ಮನೋಹರ್ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ತಾಲ್ಲೂಕು ಸೊಸೈಟಿ ಉಪಾಧ್ಯಕ್ಷೆ ಕಾಂತಮ್ಮ  ಹಾಗೂ ಮಹಿಳಾ ಮುಖಂಡರಾದ ವೆಂಕಟಗಿರಿಕೋಟೆ ಶ್ವೇತ ಅವರ ನೇತೃತ್ವದಲ್ಲಿ ನೂರಾರು ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದರು.

​ಕಾರ್ಯಕ್ರಮದಲ್ಲಿ ಪ್ರಮುಖ ಮುಖಂಡರಾದ ಹನುಮಪ್ಪ, ಚಿಕ್ಕನಹಳ್ಳಿ ಸುಬ್ಬಣ್ಣ, ದೇವನಹಳ್ಳಿ ಟೌನ್ ಮುನಿನಂಜಪ್ಪ, ಗಂಗಾಧರ್, ಶಿವಣ್ಣನ, ಮಂಜುನಾಥ್, ಮುನಿರಾಜ್, ಬಸವರಾಜ್, ರವಿ, ಲೋಕೇಶ್,  ಗೋಣೂರು ಹೊಸಳ್ಳಿ ಪ್ರಭಾಕರ್, ಶಿವಾನಂದ್ ಹಾಗೂ ರಂಗಸ್ವಾಮಿ ಉಪಸ್ಥಿತರಿದ್ದರು. ಯುವ ಘಟಕದ ಅಧ್ಯಕ್ಷ ಟಿ. ರವಿ, ಮುಖಂಡ ರಾಜಾನಂದಗೌಡ ಸೇರಿದಂತೆ ಯುವ ನಾಯಕರಾದ ಹರ್ಷವರ್ಧನ್, ಗೋಪಿ, ಚೇತನ್, ಅಭಿಷೇಕ್, ಹರೀಶ್, ಗಿರೀಶ್, ಕಿರಣ್, ಮಂಜುನಾಥ್, ವೆಂಕಟೇಗೌಡ ಹಾಗೂ ಪಕ್ಷದ ವಿವಿಧ  ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಈ ಹೋರಾಟದಲ್ಲಿ ಕೈಜೋಡಿಸಿದ್ದರು.

WhatsApp

Join Now

Telegram

Join Now

Instagram

Join Now