--Ads--

ಡಿಸಿಎಂ ಡಿ.ಕೆ.ಶಿವಕುಮಾರ್  ಯುವಕರಿಗೆ ಸ್ಪೂರ್ತಿ, ಪ್ರೇರಣೆಯಾಗಿದ್ದಾರೆ: ಮಂಜುನಾಥಗೌಡ 

On: May 15, 2026 10:15 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಡಿಸಿಎಂ, ಡಿ.ಕೆ.ಶಿವಕುಮಾರ್  ಯುವಕರಿಗೆ ಸ್ಪೂರ್ತಿ, ಪ್ರೇರಣೆಯಾಗಿದ್ದಾರೆ: ಮಂಜುನಾಥಗೌಡ 

ಕೆಪಿಸಿಸಿ ಕಛೇರಿ, ಭಾರತ್ ಜೋಡೋ ಭವನದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ರಕ್ತದಾನ ಶಿಬಿರ ಮತ್ತು ಪೌರ ಕಾರ್ಮಿಕರು, ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ರವರು, ವಿಧಾನಪರಿಷತ್ ಸದಸ್ಯ ಸಲೀಮ್ ಅಹಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣರವರು ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಹೆಚ್.ಎಸ್.ರವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ, ದಿನಸಿ ಕಿಟ್ ಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಂಜುನಾಥಗೌಡ ಹೆಚ್.ಎಸ್.ರವರು ಮಾತನಾಡಿ ಡಿ.ಕೆ.ಶಿವಕುಮಾರ್ ರವರ ಹೋರಾಟ , ಸಂಘಟನೆ, ನಾಯಕತ್ವ ಗುಣಗಳು ಕೊಟ್ಯಂತರ ಯುವಕರಿಗೆ ಸ್ಪೂರ್ತಿ ಪ್ರೇರಣೆಯಾಗಿದೆ. 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದರೆ ಜನರ ಪ್ರೀತಿ ಎಷ್ಟು ಗಳಿಸಿದ್ದಾರೆ ಎಂಬುದು ಅರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷ ನನ್ನ ರಕ್ತದಲ್ಲಿ ಇದೆ ಹೆಮ್ಮೆಯಿಂದ ಹೇಳುತ್ತಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ರವರ ಅಧ್ಯಕ್ಷತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣ ಜಾರಿಗೆ ತಂದರು. ಶಕ್ತಿ ಯೋಜನೆ ಮಹಿಳೆಯರಿಗೆ ಬಸ್ ಪ್ರಯಾಣ 500ಕೋಟಿಗಿಂತ ಹೆಚ್ಚು ಮಹಿಳೆಯರು ಉಚಿತ ಬಸ್ ಪ್ರಯಾಣ, ಅನ್ನ ಭಾಗ್ಯ, ಯುವ ನಿಧಿ, ಮನೆಯ ಯಾಜಮಾನಿಗೆ 2 ಸಾವಿರ, 200ಯುನಿಟ್ ವಿದ್ಯುತ್ ಉಚಿತ ಇಂದು ಈ ಯೋಜನೆಯ ರಾಜ್ಯದ ಪ್ರತಿ ಕುಟುಂಬಗಳಿಗೆ ತಲುಪಿದೆ.

ಬೆಂಗಳೂರುನಗರ ಅಭಿವೃದ್ಧಿಗೆ ವಿಶೇಷ ಯೋಜನೆ, ಯೋಚನೆ ಇಟ್ಟಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನಗರಾಭಿವೃದ್ಧಿ ಸಚಿವರಾಗಿ ಹೊಣೆ ಹೊತ್ತ ಮೇಲೆ ಬೆಂಗಳೂರುನಗರ ಅಭಿವೃದ್ಧಿಗೆ ವೇಗ ಹೆಚ್ಚಿದೆ. ಸಂಚಾರ ಸುಮಗಮಕ್ಕೆ ಟನಲ್ ರಸ್ತೆ ಯೋಜನೆ ಕಾಯಕಲ್ಪ ಕೊಟ್ಟಿದ್ದಾರೆ.

ಬೆಂಗಳೂರುನಗರ 7ಲಕ್ಷ ಆಸ್ತಿ ಮಾಲೀಕರಿಗೆ ಬಿ.ಖಾತೆಯಿಂದ ಎ.ಖಾತ ಪರಿವರ್ತನಾ ಯೋಜನೆ ಭೂ ಗ್ಯಾರಂಟಿ 6ನೇ ಗ್ಯಾರಂಟಿ ಯೋಜನೆ ಜಾರಿಗೆ ತಂದು ಆಸ್ತಿ ಮಾಲೀಕರಿಗೆ ಆಸರೆಯಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸ್ತ್ರೀ ಶಕ್ತಿಯ ಮತ ಒಲಿಸಿಕೊಂಡರೆ ಗೆಲುವು ಸುಲಭ: ಡಾ.ಬೈರಮಂಗಲ ರಾಮೇಗೌಡ

ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯ ಮತ್ತು ಮಾಹೆಯ ಡ್ಯುಯಲ್ ಪಿಎಚ್ಡಿ ಕಾರ್ಯಕ್ರಮ ಮತ್ತು ಸಂಶೋಧನಾ ಶ್ರೇಷ್ಠತೆಯ ಉಪಕ್ರಮದೊಂದಿಗೆ ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ

Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ. 

ಬಿಟ್‌ಡೆಲ್ಟಾ ಇಂಡಿಯಾ ವಿಶ್ವದ ಅತಿದೊಡ್ಡ ಕ್ರಿಪ್ಟೋ ಮಾರುಕಟ್ಟೆಗಾಗಿ ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ (VDA) ಮೂಲಸೌಕರ್ಯವನ್ನು ಪ್ರಾರಂಭಿಸಿದೆ.

ಭಾರತದಲ್ಲಿನ ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಗಳು ಮೊಬೈಲ್ ನಾವೀನ್ಯತೆಯ ಭವಿಷ್ಯವನ್ನು ಸಹ-ಸೃಷ್ಟಿಸಲು ಸ್ಟಾರ್ಟ್ಅಪ್ಗಳನ್ನು ಆಹ್ವಾನಿಸುತ್ತವೆ.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ         ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ