--Ads--

ಶ್ರೀಯೋಗಿ ದ್ಯಾವಪ್ಪ ತಾತನವರ ಗುಡಿಯ ಬಳಿ  ಒತ್ತುವರಿಯಾಗಿರುವ ಸರ್ಕಾರಿ ಜಾಗ ತೆರವಾಗಲಿ: ಕೋಟಹಳ್ಳಿ ವೀರೇಗೌಡ

On: May 25, 2026 3:19 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀಯೋಗಿ ದ್ಯಾವಪ್ಪ ತಾತನವರ ಗುಡಿಯ ಬಳಿ  ಒತ್ತುವರಿಯಾಗಿರುವ ಸರ್ಕಾರಿ ಜಾಗ ತೆರವಾಗಲಿ :ಕೋಟಹಳ್ಳಿ ವೀರೇಗೌಡ

ಶಿಡ್ಲಘಟ್ಟ : ಶ್ರೀಯೋಗಿ ದ್ಯಾವಪ್ಪ ತಾತ ಅವರ ಗುಡಿಯ ಬಳಿ 12 ಎಕರೆ ಜಮೀನಿದ್ದು ಇಲ್ಲಿ ಅನೇಕ ವರ್ಷಗಳಿಂದಲೂ ತಾತನ ಉತ್ಸವದಂದು ಎತ್ತುಗಳ ಪರಿಷೆ ನಡೆಯುತ್ತಿತ್ತು ಜಿಲ್ಲೆಯ ವಿವಿಧ ಕಡೆಯಿಂದ ನೂರಾರು ಜೋಡಿ ಎತ್ತುಗಳು ಪರಿಷೆಯಲ್ಲಿ ಸೇರುತ್ತಿದ್ದವು ಎತ್ತುಗಳ ಮಾರಾಟ ಮತ್ತು ಖರೀದಿ ಜೋರಾಗಿ ನಡೆಯುತ್ತಿತ್ತು ,ಆದರೆ ಜಾತ್ರೆ ನಡೆಯುತ್ತಿದ್ದ ಸರ್ಕಾರಿ ಜಾಗವನ್ನು ಅದೇ ಗ್ರಾಮದ ಕುಟುಂಬವೊಂದು ಒತ್ತುವರಿ ಮಾಡಿಕೊಂಡಿದೆ ಎಂದು ಕೋಟಹಳ್ಳಿ ವೀರೇಗೌಡ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ದ್ಯಾವಪ್ಪನಗುಡಿಯ ಕೋಟಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ದ್ಯಾವಪ್ಪನಗುಡಿಯ ಶ್ರೀಯೋಗಿ ದ್ಯಾವಪ್ಪ ತಾತನ ಎತ್ತುಗಳ ಜಾತ್ರೆ ನಡೆಯುತ್ತಿದ್ದ ಸರ್ಕಾರಿ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದು, ಶೀಘ್ರವೇ ತೆರವುಗೊಳಿಸಿ ಜಾಗವನ್ನು ಪರಿಷೆಗೆ ಮೀಸಲು ಇಡಬೇಕು ಎಂದು ಶ್ರೀಯೋಗಿ ದ್ಯಾವಪ್ಪ ತಾತನ ಭಕ್ತರು ಆಗ್ರಹಿಸಿದ್ದಾರೆ.

ಈ ಬಗ್ಗೆ ತಹಸೀಲ್ದಾ‌ರ್ ಗಗನಸಿಂಧು ಅವರಿಗೆ ಮನವಿ ಮಾಡಿದ ನಂತರ ಸ್ಥಳಕ್ಕೆ ಭೇಟಿ ನೀಡಿಒತ್ತುವರಿ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು.
ಇದಾದ ನಂತರವು ಒತ್ತುವರಿ ಮುಂದುವರಿಸಿದ್ದಾರಲ್ಲದೆ, ಅಲ್ಲಿ ಇದ್ದ ಮಣ್ಣಿನ ರಸ್ತೆಯನ್ನು ಮುಚ್ಚಿದ್ದಾರೆ ಇದರಿಂದ ಜಮೀನುಗಳಿಗ ತೆರಳಲು ರಸ್ತೆ ಇಲ್ಲದಂತಾಗಿದೆ ಎಂದ ಅವರು ಈ ವಿಷಯವಾಗಿ ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ ದೂರನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಯು ಈರೇಗೌಡೆ, ತಾತಹಳ್ಳಿ ಮಂಜುನಾಥ್ , ಚಿಕ್ಕತೇಕಹಳ್ಳಿ ಮಂಜುನಾಥ್‌, ಚೌಡರೆಡ್ಡಿಹಳ್ಳಿ ರಾಮಕೃಷ್ಣಪ್ಪ, ಕೇಶವ, ಗಿರೀಶ್, ಮಧುಸೂದನ್ ಹಾಜರಿದ್ದರು

WhatsApp

Join Now

Telegram

Join Now

Instagram

Join Now