--Ads--

ಮಾನವ ಸಾಮಾಜಿಕ ಕಾರ್ಯಗಳ ಮೂಲಕ ದೇವರಾಗುತ್ತಾರೆ : ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ

On: May 25, 2026 3:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮಾನವ ಸಾಮಾಜಿಕ ಕಾರ್ಯಗಳ ಮೂಲಕ ದೇವರಾಗುತ್ತಾರೆ : ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ

ಶಿಡ್ಲಘಟ್ಟ : ಮಾನವನಾಗಿ ಜನಿಸಿ ಮಾಡುವ ಪುಣ್ಯದ ಕೆಲಸ, ಸಾಮಾಜಿಕ ಕಾರ್ಯಗಳ ಮೂಲಕ ದೇವರಾಗುತ್ತಾರೆ ಎನ್ನುವುದಕ್ಕೆ ಶ್ರೀ ವೀರಣ್ಣಸ್ವಾಮಿ ಹಾಗೂ ಶ್ರೀ ಕೆಂಪಣ್ಣಸ್ವಾಮಿ ನಮ್ಮ ಮುಂದೆ ಇರುವ ಉದಾಹರಣೆಯಾಗಿದ್ದಾರೆ ಎಂದು ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನ ಶ್ರೀಕ್ಷೇತ್ರ ಪಟ್ಟನಾಯಕನಹಳ್ಳಿ ಹಾಗು ವಿಜಯಪುರದ ಶ್ರೀ ಗುರಪ್ಪಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ ತಿಳಿಸಿದರು.

ಮನುಷ್ಯರಾಗಿ ಹುಟ್ಟಿ ನಂತರ ಅವರು ಬದುಕಿನ ಉದ್ದಕ್ಕೂ ಮಾಡುವ ಕಾರ್ಯಗಳ ಮೂಲಕ ಜನಮಾನಸದಲ್ಲಿ ದೇವರಾಗಿ ಅಜರಾಮರರಾದ ಅನೇಕ ಮಹನೀಯರು ಇದ್ದಾರೆ ಅವರು ಇದ್ದ ಈ ನೆಲದಲ್ಲಿ ಹುಟ್ಟಿದ ನಾವು ಧನ್ಯರು ಎಂದು ಹೇಳಿದರು.

ವಿದ್ಯಾರ್ಥಿಗಳು, ಯುವಜನರ ಮೇಲೆ ಸಮಾಜ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ ಆ ನಿರೀಕ್ಷೆಗಳನ್ನು ಹುಸಿಗೊಳಿಸದೆ ಎಲ್ಲವನ್ನೂ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮ ಬದುಕು ಸಾಗಬೇಕು ಎಂದು ತಿಳಿ ಹೇಳಿದರು.

ಟ್ರಸ್ಟ್‌ನವರು ಮಾಡುತ್ತಿರುವ ಪ್ರತಿಭಾ ಪುರಸ್ಕಾರ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಇಲ್ಲಿ ಪ್ರೇರಣೆ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದವರು ಮತ್ತೆ ಸಮಾಜಕ್ಕೆ ಏನಾದರೂ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಪಡೆದರಷ್ಟೇ ಸಾಲದು, ಕೌಶಲವನ್ನು ಪಡೆದು ಬದುಕು ಕಟ್ಟಿಕೊಳ್ಳಬೇಕು ಹಾಗು ಶಿಕ್ಷಣ ನಮ್ಮೆಲ್ಲರ ಬದುಕನ್ನು ರೂಪಿಸುತ್ತದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯ ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿ, ಅಖಂಡ ಕೋಲಾ ಜಿಲ್ಲೆಯು ಈ ದೇಶಕ್ಕೆ ಇಬ್ಬರು ಭಾರತ ರತ್ನಗಳನ್ನು ಕೊಟ್ಟಂತು ಜಿಲ್ಲೆ ಅತಿ ಹೆಚ್ಚು ಐಎಎಸ್, ಕೆಎಎಸ್, ವಕೀಲರನ್ನು ಕೊಟ್ಟ ಚಿನ್ನದ ನಾಡು ಎಂದು ವಿವರಿಸಿದರು.

ಈ ವೇಳೆ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 120 ವಿದ್ಯಾರ್ಥಿಗಳಿಗೆ ಅಭಿನಂದನ ಪತ್ರ, ನಗದು ನೀಡಿ ಪುರಸ್ಕರಿಸಲಾಯಿತು ಹಾಗು ಪ್ರತಿಭಾ ಪುರಸ್ಕಾರ ಪಡೆದು ಉದ್ಯೋಗಕ್ಕೆ ಸೇರಿ ಮೊದಲ ವೇತನವನ್ನು ಪ್ರತಿವ ಪುರಸ್ಕಾರಕ್ಕೆ ದೇಣಿಗೆ ನೀಡಿದ ಜ್ಯೋತಿಪುರ ಚಿರಾಗ್, ಸಾವುಕನಹಳ್ಳಿ ಲಾವಣ್ಯ, ಮೇಲೂರು ಡಾ.ವರಲಕ್ಷ್ಮೀ ನವೀನ್ ಗೌಡ, ಮಲ್ಲೇನಹಳ್ಳಿ ಡಾ.ದಾಮಿನಿ, ಜಂಗಾಲಹಳ್ಳಿ ಜೆ.ಎಸ್‌.ಮನೀಷ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್‌ ನ ಅಧ್ಯಕ್ಷ ಎನ್.ನಾಗರಾಜ್‌, ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಕಾರ್ಯದರ್ಶಿ ಅಶ್ವತ್ಥಯ್ಯ, ಖಜಾಂಚಿ ಮುನಿಸ್ವಾಮಿಗೌಡ, ರಾಮದಾಸ್, ಸ್ಕೂಲ್ ದೇವರಾಜ್,ಡಾ.ನವೀನ್, ಗೊರಮಡಗು ರಾಜಣ್ಣ ,
ಆನೂರುವಿ ಜಯೇಂದ್ರ,ಕೆಂಪಣ್ಣ,
ನಾರಾಯಣಸ್ವಾಮಿ , ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now