--Ads--

ಕುಟುಂಬಗಳಲ್ಲಿ ಸಾಮರಸ್ಯದ ಕೊರತೆ: ಸಾಮಾಜಿಕ ಕಾರ್ಯಕರ್ತ ಶೇಷಣ್ಣ

On: May 26, 2026 1:57 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕುಟುಂಬಗಳಲ್ಲಿ ಸಾಮರಸ್ಯದ ಕೊರತೆ: ಸಾಮಾಜಿಕ ಕಾರ್ಯಕರ್ತ ಶೇಷಣ್ಣ

ದೇವನಹಳ್ಳಿ: ಪ್ರಸ್ತುತ ಸಮಾಜದಲ್ಲಿನ ಕುಟುಂಬಗಳು ಸಾಮರಸ್ಯದ ಕೊರತೆ ಎದುರಿಸುತ್ತಿರುವುದು ಬೇಸರದ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಶೇಷಣ್ಣ ಹೇಳಿದರು.

ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಗ್ರಾಮದಲ್ಲಿ ರೈತ ಮತ್ತು ಕಾರ್ಮಿಕ ಮಕ್ಕಳ ಸೇವಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಸದ್ಭಾವನ ಮತ್ತು ಕಟುಂಬಗಳ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಕುಟುಂಬ ಜಾತಿ-ಭೇದ ಮರೆತು ಒಂದೆಡೆ ಸೇರಿ ನಾವೆಲ್ಲರೂ ಒಂದೇ ಎಂಬುದನ್ನು ವ್ಯಕ್ತಪಡಿಸಿದಾಗ ಮಾತ್ರ ಸಾಮರಸ್ಯ ಮೂಡಲಿದೆ. ಒಂದೆಡೆ ಸೇರು ವುದರಿಂದ ಸಾಮಾಜಿಕವಾಗಿ ಪ್ರೀತಿ ವಿಶ್ವಾಸ ಗಳಿಸಬಹುದು. ಸಮಾಜದಲ್ಲಿ ಶಾಂತಿಯುತ ಜೀವನಕ್ಕಿದು ಉತ್ತಮ ಮಾರ್ಗ ಎಂದರು.

ಯಾವುದೇ ಜಾತಿಯ ವ್ಯಕ್ತಿ ಸಮಾಜಕ್ಕಿಂತ ದೊಡ್ಡವರಲ್ಲ, ಎಲ್ಲರೂ ಸಹಬಾಳ್ವೆಯ ಭಾವನೆಯಿಂದ ಜೀವನ ಮಾಡಬೇಕಿದೆ ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ರೇಖಾ ವೇಣು ಗೋಪಾಲ್. ಈ ವೇಳೆ ರಾಷ್ಟ್ರೀಯ ಸೇವಾ ಭಾರತಿ ಪ್ರತಿನಿಧಿ ಶಾಮ್ ಪ್ರಸಾದ್, ರೈತ ಮತ್ತು ಕಾರ್ಮಿಕ ಮಕ್ಕಳ ಪ್ರತಿಷ್ಠಾನ ಸಂಚಾಲಕ ಚಂದ್ರಶೇಖರ್, ಕುಂದಾಣ ಹೋಬಳಿಯ ಪ್ರಮುಖರಾದ ವಕೀಲ ಬೇಟ್ಟೇನಹಳ್ಳಿ ಶ್ರೀನಿವಾಸ್, ನೆರಗನಹಳ್ಳಿ ರವಿಕುಮಾರ್, ಯ ರಾಜಣ್ಣ, ರಾಮಣ್ಣ, ರಮೇಶ್, ಸ್ಟುಡಿಯೋ ಬಾಬು, ಅರಸಮ್ಮ ಸೇರಿವೆ.

 

WhatsApp

Join Now

Telegram

Join Now

Instagram

Join Now