--Ads--

ಸಮಯ ಹಾಗು ಅವಕಾಶಗಳ ಸದುಪಯೋಗದಿಂದ ಯಾವ ಮಕ್ಕಳು ದಡ್ಡರಾಗಲ್ಲ: ಡಾ.ಎನ್.ಶಿವರಾಮರೆಡ್ಡಿ

On: May 26, 2026 4:21 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಮಯ ಹಾಗು ಅವಕಾಶಗಳ ಸದುಪಯೋಗದಿಂದ ಯಾವ ಮಕ್ಕಳು ದಡ್ಡರಾಗಲ್ಲ: ಡಾ.ಎನ್.ಶಿವರಾಮರೆಡ್ಡಿ

ಶಿಡ್ಲಘಟ್ಟ : ಮಕ್ಕಳಲ್ಲಿ ಯಾರೂ ದಡ್ಡರಲ್ಲ, ಅವರವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಸಮಯ ಮತ್ತು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು, ಸಾಧನೆಗೆ ಏಕಾಗ್ರತೆ ಮುಖ್ಯ ನಿರಂತರ ಅಧ್ಯಯನ ತಪಸ್ಸಿನಂತೆ ಮಾಡಬೇಕು ಎಂದು ಬಿಜಿಎಸ್‌ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ತಿಳಿಸಿದರು.

ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಹನುಮಂತಪುರ ಗೇಟ್ ಬಳಿಯ BGS ಶಾಲೆಯಲ್ಲಿ ಏರ್ಪಡಿಸಿದ್ದ “ಸ್ವಸ್ತಿ-2026” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳ ಮನಸ್ಸು ಹದಿ ಹರೆಯದ ವಯಸ್ಸಿನಲ್ಲಿ ಎಲ್ಲವನ್ನೂ ಅನುಭವಿಸುವ , ಹಾಗೂ ಪಡೆದುಕೊಳ್ಳುವುದನ್ನು ಬಯಸುತ್ತದೆ ಆದರೆ ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಪೋಷಕರು ಶ್ರದ್ದೆಯಿಂದ ಮಾಡಬೇಕು ಎಂದು ಹೇಳಿದರು.

ಮನುಷ್ಯನ ದೊಡ್ಡ ಶತ್ರು ಅವನ ಸೋಮಾರಿತನ
ಚಂಚಲ ಮನಸ್ದು ಕೇಳಿದಂತೆಲ್ಲಾ ನಡೆದುಕೊಳ್ಳುತ್ತಾರೋ ಅವರು ಖಂಡಿತಾ ಒಂದಲ್ಲ ಒಂದು ದಿನ ಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.

13 ರಿಂದ 18 ರ ವಯಸ್ಸಿನವರೆಗೂ ಮಕ್ಕಳ ದೇಹ ಬೆಳೆದಿರುತ್ತದೆಯೇ ಹೊರತು ಮೆದುಳು ಬೆಳೆದಿರುವುದಿಲ್ಲ ಆ ಕಾರಣದಿಂದ ಅವರನ್ನು ಹತೋಟಿಯಲ್ಲಿಡುವ ಕೆಲಸ ಪೋಷಕರು ಮಾಡಬೇಕು ಎಂದರು.

ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ ಬಿಡಿ ಅಂಕಗಳೇ ಬದುಕಲ್ಲ ಅಂಕಗಳೆ ಬದುಕನ್ನು ಅಳೆಯುವ ಅಂತಿಮ ವಿಧಾನವೂ ಅಲ್ಲ , ಬದುಕಿನಲ್ಲಿ ಅನೇಕ ಅವಕಾಶ ಬರುತ್ತದೆ ಅವೆಲ್ಲವನ್ನೂ ಸದುಪಯೋಗಪಡಿಸಿಕೊಂಡು ಬದುಕನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿದರು.

ವಿದ್ಯಾರ್ಥಿಗಳು ಹಾಗೂ ಯುವ ಜನರು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಉತ್ತಮ ಸನ್ನಡತೆಯ ಸ್ನೇಹಿತರ ಗೆಳೆತನ ಮಾಡಬೇಕು, ಶಿಕ್ಷಕರು ಹೇಳಿದಂತೆ ಕೇಳಬೇಕು, ಗುರು ಹಿರಿಯರ ಮಾತನ್ನು ಆಲಿಸಿ ಪಾಲಿಸಬೇಕು ಎಂದು ನುಡಿದರು.

ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಕುರಿತು ವಿವರಿಸಿದರು.
ಇದೇ ವೇಳೆ SSLC ಮತ್ತು ದ್ವಿತೀಯ PUC ಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜಿಎಸ್‌ ಕಾಲೇಜಿನ ಪ್ರಾಂಶುಪಾಲ ಕೆ.ಮಹದೇವ್‌,ಹಿತ್ತಲಹಳ್ಳಿ ಸುರೇಶ್, ವೈದ್ಯ ಡಾ.ಟಿ.ವಿ.ಅರುಣ್ , ಆ‌ರ್.ಅನುಷ,ಕಾಲೇಜು ಸಿಬ್ಬಂದಿ ಇನ್ನೀತರರು ಹಾಜರಿದ್ದರು.

##############################

ಸೋಬಾನೆ ಗೀತಾ ಗಾಯನ ತರಬೇತಿ ಶಿಬಿರ

ರಾಮನಗರ:,ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನ ಅಂಗ ಸಂಸ್ಥೆ ಇಫ್ರೊ ಜಾನಪದ ಮಹಾವಿದ್ಯಾಲಯವು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಕೆಲವರ್ಷಗಳ ಹಿಂದೆ ಕನಕಪುರದಲ್ಲಿ ಆಯ್ದ ನಲವತ್ತು ಮಂದಿ ಅಭ್ಯರ್ಥಿಗಳಿಗೆ ಸೋಬಾನೆ ಗೀತೆ ಕಲಿಸಿ ಹೊಸದೊಂದು ಪರಂಪರೆಗೆ ನಾಂದಿ ಹಾಡಿತ್ತು. ಈಗ ಇದೇ 2026ರ ಮೇ, ತಿಂಗಳ ನಾಲ್ಕನೇ ವಾರದಲ್ಲಿ ನಾಡಿನ ಹೆಸರಾಂತ ಕಲಾವಿದ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೋಬಾನೆ ಕೃಷ್ಣೇಗೌಡ ಅವರಿಂದ ನಾಲ್ಕು ದಿನಗಳ ಸೋಬಾನೇ ಗೀತಗಾಯನ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.
ಇಫ್ರೊ ಜಾನಪದ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ವ.ನಂ. ಶಿವರಾಮು ಶಿಬಿರ ಉದ್ಘಾಟಿಸುವರು. ಬೆಂಗಳೂರು ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್ ಅಧ್ಯಕ್ಷತೆ ವಹಿಸುವರು. ಇಫ್ರೊ ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ. ಎಂ. ಬೈರೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಅಥಿತಿಗಳಾಗಿ ಹಿರಿಯ ಸಂಸ್ಕೃತಿ ಚಿಂತಕ ಸು.ಚಿ. ಗಂಗಾಧರಯ್ಯ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಡಾ. ಎಂ. ಕೆಂಪಮ್ಮ, ಇಫ್ರೊ ಜಾನಪದ ಮಹಾವಿದ್ಯಾಲಯದ ಸಂಯೋಜಕಿ ವಿದುಷಿ ವಿನುತ ಬೂದಿಹಾಲ್, ಸಂಸ್ಕೃತಿ ಸಂಘಟಕ ಕೀಲಾರ ಕೃಷ್ಣೇಗೌಡ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎನ್. ಮಂಜೇಶ್ ಚನ್ನಾಪುರ ಪಾಲ್ಗೊಳ್ಳುವರು ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.
Dr. M. Byregowda

9448102158

 

 

WhatsApp

Join Now

Telegram

Join Now

Instagram

Join Now