--Ads--

ಬಲಾಡ್ಯರಿಂದ ಭೂಕಬಳಿಕೆ ವಿರೋಧಿಸಿ ಧರಣಿ

On: May 27, 2026 3:16 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಬಲಾಡ್ಯರಿಂದ ಭೂಕಬಳಿಕೆ ವಿರೋಧಿಸಿ ಧರಣಿ

ದೊಡ್ಡಬಳ್ಳಾಪುರ : ತಾಲ್ಲೂಕಿನ ತೂಬಗೆರೆ ಹೋಬಳಿಯ ಮೇಲಿನ ನಾಯಕರಂಡಳ್ಳಿ ಗ್ರಾಮದ ಸರ್ವೆ ನಂಬರ್ 17ರಲ್ಲಿ ಸುಮಾರು 85 ರೈತರಿಗೆ ಭೂಮಿಯನ್ನು ಮಂಜೂರು ಮಾಡಿದ್ದು ಸಂಪರ್ಕ ರಸ್ತೆ ಕಲ್ಪಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ರೈತರ ಕಷ್ಟ ಕೇಳದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತರು ಹಾಗೂ ಕರುನಾಡು ರಾಷ್ಟ್ರೀಯ ಸೇನೆ ಅನಿರ್ದಿಷ್ಟವಾದಿ ಧರಣಿಗೆ ಮುಂದಾಗಿದೆ ಎಂದು ಕರುನಾಡು ರಾಷ್ಟ್ರೀಯ ಸೇನೆಯ ರಾಜ್ಯಾಧ್ಯಕ್ಷ ಬಿ ಶಿವಶಂಕ‌ರ್ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ಕೇವಲ ಒಂದು ಗ್ರಾಮದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಧರಣಿ ಆರಂಭಿಸಿದ್ದೇವೆ ತಾಲ್ಲೂಕಿನಲ್ಲಿ ಹಲವಾರು ಗ್ರಾಮಗಳ ಸರ್ಕಾರಿ ಭೂಮಿಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು ಭೂಕಬಳಿಕೆದಾರರ ಹಾವಳಿ ಹೆಚ್ಚಾಗಿದೆ ಇಲ್ಲಸಲ್ಲದ ನೆಪ ಹೇಳಿಕೊಂಡು ಭೂಮಿ ಕಬಳಿಸಲು ಹುನ್ನಾರ ನಡೆಸಿದ್ದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಆಡಳಿತಕ್ಕೆ ಎಷ್ಟೇ ಮನವಿ ಸಲ್ಲಿಸಿದರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಸುಮಾರು 30 ಕ್ಕೂ ಹೆಚ್ಚು ವರ್ಷಗಳಿಂದ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿರುವ ಮೇಲಿನ ನಾಯಕರಂಡಳ್ಳಿ ಗ್ರಾಮದ ಸರ್ವೆ ನಂಬರ್ 17ರ ಭೂಮಿಯನ್ನು ಇಂದು ಏಕಾಏಕಿ ಖಾಸಗಿ ವ್ಯಕ್ತಿಗಳು ಬಂದು ನಮ್ಮದು ಜಾಗ ಖಾಲಿ ಮಾಡಿ ಎನ್ನುತ್ತಿದ್ದಾರೆ. ರೈತರ ಜೀವನಕ್ಕೆ ಆಧಾರವಾಗಿರುವ ಉಳುಮೆ ಭೂಮಿಯನ್ನು ಕಿತ್ತುಕೊಳ್ಳಲು ಕೆಲ ಪ್ರಭಾವಿಗಳು ಪ್ರಯತ್ನಿಸುತ್ತಿದ್ದು ಸದರಿ ಭೂಮಿ ಉಳಿಸಿಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಗಿತ್ತು ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಮೇಲಿನ ನಾಯಕರಂಡಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ ಮಾತನಾಡಿ ಗ್ರಾಮದ ಹಲವು ರೈತರಿಗೆ ತುಂಡು ಭೂಮಿಗಳನ್ನು ಮಂಜೂರು ಮಾಡಿರುವ ಸರ್ಕಾರ ಈವರೆಗೂ ರಸ್ತೆ ನಿರ್ಮಿಸಿ ಕೊಟ್ಟಿಲ್ಲ ಹೊಲಗಳಿಗೆ ಹೋಗಲು ತುಂಬಾ ತೊಂದರೆಯಾಗಿದ್ದು ಈ ಕುರಿತು 2021 ರಿಂದ ನಿರಂತರವಾಗಿ ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ರೈತರ ಕಷ್ಟಕ್ಕೆ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಹಾಗಾಗಿ ನಮ್ಮ ಹೋರಾಟದ ಮೂಲಕ ನಮ್ಮ ಸಮಸ್ಯೆಯನ್ನು ಅಧಿಕಾರಿಗಳಿಗೆ ತಿಳಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಹೋರಾಟಗಾರರ ಎರಡು ಬೇಡಿಕೆಗಳನ್ನು ತುರ್ತಾಗಿ ಈಡೇರಿಸುವ ಭರವಸೆ ನೀಡಿದ್ದಾರೆ

ಈ ವೇಳೆ  ಕರುನಾಡು ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ಉಪಾಧ್ಯಕ್ಷ ಗಂಗಿರೆಡ್ಡಿ, ಮಾಧ್ಯಮ ಸಲಹೆಗಾರ ಚಂದ್ರಶೇಖರ ಡಿ. ಉಪ್ಪಾರ್ , ಖಜಾಂಚಿ ಕುಮಾರ್, ರಾಜ್ಯ ಕಾರ್ಯದರ್ಶಿ ರಂಜಿತಾ, ಮೇಲಿನ ನಾಯಕರಂಡಳ್ಳಿ ಗ್ರಾಮದ ಮುಖಂಡರಾದ ಉಮೇಶ್, ಶ್ರೀನಿವಾಸ್, ಮಂಜುನಾಥ್, ಗಂಗಾಧರ್, ಸುರೇಶ, ರಾಮಾಂಜಿನಪ್ಪ, ಸೇರಿದಂತೆ ಹಲವು ಪ್ರಮುಖರು ಕರುನಾಡು ರಾಷ್ಟ್ರೀಯ ಸೇನೆ ಪದಾಧಿಕಾರಿಗಳು.

WhatsApp

Join Now

Telegram

Join Now

Instagram

Join Now