--Ads--

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು :  ಪೂಲಕುಂಟಲಹಳ್ಳಿ ರಘುನಾಥ್ ರೆಡ್ಡಿ

On: June 12, 2026 5:37 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು : 
ಪೂಲಕುಂಟಲಹಳ್ಳಿ ರಘುನಾಥ್ ರೆಡ್ಡಿ

ಶಿಡ್ಲಘಟ್ಟ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ಮಾತು ನಡೆಯುತ್ತದೆ ,ವಿಶೇಷ ಅನುದಾನ ತನ್ನಿ, ದರಕಾಸ್ತು ಸಮಿತಿ ರಚಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತಹ ಕೆಲಸ ಮಾಡಿ ಅದು ಬಿಟ್ಟು ಇವರು ಮಂತ್ರಿಗಳ ಬಳಿ ಶಭಾಶ್ ಗಿರಿ ಪಡೆಯಲು ಮಾವಿನ ಕೊಡುತ್ತಿರುವುದು ಏನು ಘನಕಾರ್ಯ ಸಾದಿಸಲು ಇವರು ಮಾಡುತ್ತಿರುವುದು ಎಂದು ಜೆಡಿಎಸ್‌ ಮುಖಂಡ ಹಾಗು ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಅವರು ಕಾಂಗ್ರೆಸ್ ಮುಖಂಡರನ್ನು ಛೇಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ಅವರು ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಬುಟ್ಟಿಗೆ ತುಂಬಿಕೊಂಡು ಮುಖ್ಯಮಂತ್ರಿ ಕೆ.ಶಿವಕುಮಾರ್, ಮಾಜಿ ಸಿ.ಎಂ. ಸಿದ್ದರಾಮಯ್ಯ, ಸಚಿವರಾದ ಕೃಷ್ಣಬೈರೇಗೌಡ ,ಭೈರತಿ ಸುರೇಶ್ ,ಮಾಜಿ ಸಚಿವರು ಹಾಗು ಕೆಲ ಶಾಸಕರಿಗಳಿಗೂ ಕೊಡುತ್ತಿದ್ದಾರೆ ,ಕೊಡಲಿ ನಮ್ಮದೇನು ಅಭ್ಯಂತರವಿಲ್ಲ ಆದರೆ ಅದೇ ಸಿಎಂ, ಡಿಸಿಎಂ, ಸಚಿವರನ್ನು ಭೇಟಿ ಮಾಡಿ ತಾಲ್ಲೂಕಿಗೆ ವಿಶೇಷ ಅನುದಾನ ತರಲಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು 3 ವರ್ಷ ಮುಗಿದಿದೆ ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡರ ಕೊಡುಗೆ ಏನು ,ಏನು ಅನುದಾನ ತಂದಿದ್ದೀರಿ ಎಂದು ವ್ಯಂಗ್ಯವಾಡಿದರು.

ಮುಖ್ಯವಾಗಿ ಕಳೆದ ಹಲವು ವರ್ಷಗಳಿಂದಲೂ ತಾಲ್ಲೂಕಿನಲ್ಲಿ ದರಕಾಸ್ತು ಸಮಿತಿ ರಚನೆಯಾಗಿಲ್ಲ ,ಅನೇಕ ವರ್ಷಗಳಿಂದಲೂ ನಮೂನೆ 51, 53 ಹಾಗೂ 57ನ್ನು ಹಾಕಿಕೊಂಡು ಬಕ ಪಕ್ಷಿಗಳಂತೆ ಸಾವಿರಾರು ರೈತರು ಕಾಯುತ್ತಿದ್ದಾರೆ ,ದರಕಾಸ್ತು ಸಮಿತಿ ಇಲ್ಲದ ಕಾರಣ ಇವರಿಗೆ ಜಮೀನು ಹಕ್ಕು ಪತ್ರ ವಿತರಣೆಯಾಗಿಲ್ಲ ಇದರಿಂದ ಜಮೀನಿನ ಮಾಲೀಕರಾಗುವ ಕನಸು ಕನಸಾಗಿಯೆ ಉಳಿದಿದೆ ಎಂದರು.

ಸಾರ್ವಜನಿರು ತಮ್ಮ ಸಮಸ್ಯೆಗಳಿಗೆ ಪರಿಹಾರ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ರೈತಪರ ಯೋಜನೆಗಳ ಅನುಷ್ಠಾನವನ್ನು ಬಯಸುತ್ತಾರೆ , ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರು ತಾಲ್ಲೂಕು ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ವಿವಿಧ ಕ್ಷೇತ್ರಗಳಿಗೆ ವಿಶೇಷ ಯೋಜನೆಗಳು ಹಾಗು ಅನುದಾನಗಳು ತರಬೇಕು, ಸಚಿವರುಗಳನ್ನು ಭೇಟಿ ಮಾಡುವಾಗ ಬೇಡಿಕೆಗಳ ಪಟ್ಟಿಯನ್ನು ನೀಡಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಮನವಿ ಮಾಡಬೇಕು ಎಂದು ಒತ್ತಾಯಿಸಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ರೈತರಿಗೆ ಹನಿ ನೀರಾವರಿ ಹಾಗು ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು :  ಹಿತ್ತಲಹಳ್ಳಿ ಗೋಪಾಲಗೌಡ ಒತ್ತಾಯ 

ಇಸ್ಕಾನ್ ಗೆ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಪೂರೈಸಲು ಅವಕಾಶ ನೀಡಿರುವುದರ ವಿರುದ್ಧ ಬಿಸಿಯೂಟ ನೌಕರರಿಂದ ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ !

ನರೇಂದ್ರ ಮೋದಿ ಪ್ರದಾನಿಯಾಗಿ ೧೨ ವರ್ಷಗಳು ಪೂರೈಸಿದ್ದರಿಂದ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ರಾಷ್ಟ್ರೀಯ ಮೆರಿಟ್ ಮೀನ್ಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸುಗಟೂರು ಸರ್ಕಾರಿ ಶಾಲೆಯ ಕವನಾ ಅವಿಸ್ಮರಣೀಯ ಸಾಧನೆ

ವಿಶ್ವ ತಂಬಾಕು ರಹಿತ ದಿನಾಚರಣೆ: ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗೆ ಆರೋಗ್ಯ ತಪಾಸಣೆ

ಅಕ್ಷಯಪಾತ್ರೆ ಸಂಸ್ಥೆಯಿಂದ ಅತ್ಯಾಧುನಿಕ ಅಡುಗೆ ಮನೆ ಉದ್ಘಾಟನೆ ಸಾವಿರಾರು ಮಕ್ಕಳಿಗೆ ಸಿಗಲಿದೆ ಬಿಸಿಯೂಟದ ಆಸರೆ