ವಿಜಯ ದರ್ಪಣ ನ್ಯೂಸ್…..
ಕಾಂಗ್ರೆಸ್ ಪಕ್ಷದ ಮುಖಂಡ ಸೂರಜ್ ಹೆಗ್ಡೆ ರವರ ಶ್ರದ್ದಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮ.

ಬೆಂಗಳೂರು: ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಸದಸ್ಯ ಸಲೀಮ್ ಅಹಮದ್, ಮಾಜಿ ಸಭಾಪತಿ ರಮೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ರವರು ಸೂರಜ್ ಹೆಗ್ಡೆರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಚರಣೆ ಸಲ್ಲಿಸಿದರು.
*ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು* ಮಾತನಾಡಿ ಸೂರಜ್ ಹೆಗ್ಡೆ ರವರ ಅಕಾಲಿಕ ಸಾವು ದುಃಖಕರ ಸಂಗತಿ. ನಿಷ್ಟಾವಂತ ಕಾರ್ಯಕರ್ತ.
ಸೂರಜ್ ರವರು ಆದರ್ಶ ಜೀವನ ನಡೆಸಿದರು,ತ್ಯಾಗ, ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿದರು.
ಮಾಜಿ ಮುಖ್ಯಮಂತ್ರಿ ದೇವರಾಜ್ ರವರ ರಕ್ತ ಸೂರಜ್ ರವರಲ್ಲಿ ಹರಿಯುತ್ತಿತು. ಹುಟ್ಟು ಸಾವಿನ ನಡುವೆ ಸಾಧನೆ ಮುಖ್ಯ. ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆ ಮತ್ತು ತ್ಯಾಗ ಮಾಡಿದವರು ಸೂರಜ್ ಹೆಗ್ಡೆರವರು. ರಾಹುಲ್ ಗಾಂಧಿರವರು ಅಂತಿಮ ದರ್ಶನಕ್ಕೆ ಬಂದಿದ್ದರು ಎಂದರೆ ಸೂರಜ್ ರವರ ಸಾಧನೆ ತಿಳಿಯುತ್ತದೆ.
ಯಾವ ಅಧಿಕಾರ ಶಾಶ್ವತವಲ್ಲ ಸಾಧನೆ ಮುಖ್ಯ. ಸೂರಜ್ ಹೆಗ್ಡೆ ರಾಷ್ರ್ರೀಯ ಕಾರ್ಯದರ್ಶಿ ಮತ್ತು ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸೂರಜ್ ರವರು ಜನರ ಹೃದಯ ಗೆದ್ದಿದ್ದಾರೆ. ಅಪಾರ ಸ್ನೇಹ, ವಿಶ್ವಾಸಗಳಿಸಿದ್ದರು. ಧೀಮಂತ ನಾಯಕ ಸೂರಜ್ ಅಗಲಿಕೆಯಿಂದ ಅವರ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬವ ಕೆಲಸವಾಗಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಹೆಚ್.ಎಂ.ರೇವಣ್ಣರವರು ಮಾತನಾಡಿ ಆಲ್ ಇಂಡಿಯಾ ಕುರುಬರ ಸಂಘ ಕಟ್ಟಿದಾಗ ಸೂರಜ್ ಹೆಗ್ಡೆರವರು ದೇಶಾದ್ಯಂತ ಸಂಘಟನೆ ಮಾಡಿದರು.
ವಿಧಾನಪರಿಷತ್ ಗಾಗಿ ಸೂರಜ್ ಹೆಗ್ಡೆರವರಿಗೆ ಕೈತಪ್ಪಿರುವುದು ದುಃಖಕರ ಸಂಗತಿ. ಸೂರಜ್ ಹೆಗ್ಡೆ ನಗುಮುಖದ ನಾಯಕ, ಎಲ್ಲರಿಗೂ ಒಳ್ಳೆಯದನ್ನ ಬಯಸಿಸುತ್ತಿದ್ದರು.ಸೂರಜ್ ಹೆಗ್ಡೆರವರು ಮಗ, ಕುಟುಂಬದವರು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರುಗಳು ಪಾಲ್ಗೊಂಡಿದ್ದರು.









