ವಿಜಯ ದರ್ಪಣ ನ್ಯೂಸ್….
ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ಬೆಸ್ಕಾಂ ನೌಕರರಿಂದ ತೀವ್ರ ವಿರೋಧ

ದೇವನಹಳ್ಳಿ: ವಿದ್ಯುತ್ ಖಾಸಗೀಕರಣ ಮಾಡುವುದು ಎಂದರೆ ಸಾಮಾಜಿಕ ನ್ಯಾಯದ ಹರಣ ಮಾಡಿದಂತೆ. ಇದು ನೂರಾರುವರ್ಷಗಳಿಂದ ಜನಸೇವೆಯಲ್ಲಿ ತೊಡಗಿದ್ದ ಸೇವಾ ವಲಯವನ್ನು ಮುಗಿಸುವ ವ್ಯವಸ್ಥಿತ ಹುನ್ನಾರ ವಾಗಿದೆ. ಈ ಕೂಡಲೇ ಸರ್ಕಾರ ಟಾಟಾ ಪವರ್ ಪ್ರಸ್ತಾವಿತ ಮನವಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ದೇವನಹಳ್ಳಿ ಬೆಸ್ಕಾಂ ಉಪ ವಿಭಾಗ, ಆವತಿ ಬೆಸ್ಕಾಂ ವಿಜಯಪುರ ಬೆಸ್ಕಾಂ ವತಿಯಿಂದ, ಬೆಸ್ಕಾಂ ನೌಕರರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ದೇವನಹಳ್ಳಿ ಬೆಸ್ಕಾಂ ಕಾರ್ಯಪಲಕ ಅಭಿಯಂತರ ಲಕ್ಷ್ಮಿಕಾಂತ್ ಮಾತನಾಡಿ ಮಾತನಾಡಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಅsಸೂಚನೆ ಹೊರಡಿಸಿದ್ದು ಆಕ್ಷೇಪಣೆ ಸಲ್ಲಿಸಲು ಇದೇ ತಿಂಗಳ 23 ರಂದು ಕೊನೆಯ ದಿನವಾಗಿದೆ. ಆದ್ದ-ಕೆಇಆರ್ಸಿಗೆ ಸಾರ್ವಜನಿಕರು, 300 ರೈತರು ಆಕ್ಷೇಪಣೆ ಸಲ್ಲಿಸುವಂತೆ ಮನವಿ ಮಾಡಿದರು.
ನಾವು ಜನರ ಸೇವೆ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಖಾಸಗಿ ಕಂಪನಿಯಾದರೆ ಕೇವಲ ಲಾಭದ ಉದ್ದೇಶದಿಂದ ಕೆಲಸ ಮಾಡುತ್ತವೆ, ಇದರಿಂದಸಾಮಾನ್ಯ ಜನರಿಗೆ ಮತ್ತು ಬಡವರ್ಗದವರಿಗೆ ವಿದ್ಯುತ್ ದರ ಹೆಚ್ಚಾಗುತ್ತದೆ. ಹೊಸ ನೇಮಕಾತಿಯೂ ಮಾಡುವುದಿಲ್ಲ. ಖಾಸಗಿ ಕಂಪನಿಗಳಿಗೆ ಬಡ, ಮಧ್ಯಮ ದೀನ ದಲಿತರಿಗೆ ಮೀಸಲಾತಿ ಸಿಗದಂತಾಗುತ್ತದೆ. ಸಣ್ಣ ಮತ್ತು ಮಧ್ಯಮ ಗುಡಿ ಕೈಗಾರಿಕೆಗಳಿಗೆ ವಿದ್ಯುತ್ ದರ ಹೆಚ್ಚಳವಾದರೆ ಕೈಗಾರಿಕೆ ಬೆಳವಣಿಗೆ ಕುಂಠಿತಾಗುತ್ತದೆ. ಸರ್ಕಾರವು ಹಲವು ವರ್ಷಗಳ ಕಾಲ ಸಾರ್ವಜನಿಕರ ಹಣದಿಂದ ನಿರ್ಮಿಸಿದ ವಿದ್ಯುತ್ ಜಾಲ ಮತ್ತು ಮೂಲ ಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವುದು ನ್ಯಾಯ ಸಮ್ಮತವಲ್ಲ ಎಂದು ಹೇಳಿದರು.ಖಾಸಗಿ ಕಂಪನಿಗಳು ನಗರ ಮತ್ತು ಲಾಭದಾಯಕ ಪ್ರದೇಶಗಳಿಗೆ ಮಾತ್ರ ಸೇವೆ ನೀಡುವ ಸಾಧ್ಯತೆ ಇದ್ದು, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳು ನಿರ್ಲಕ್ಷ್ಯಕ್ಕೊಳಗಾಗುವ ಸಾಧ್ಯತೆ ಇದೆ. ವಿದ್ಯುತ್ ದರಗಳಲ್ಲಿ ಭಾರಿ ಏರಿಕೆ ಆಗುವ ಸಾಧ್ಯತೆ ಇದೆ.
ಖಾಸಗಿ ಸಂಸ್ಥೆಗಳು ಹೆಚ್ಚಿನ ಲಾಭಕ್ಕಾಗಿ ವಿದ್ಯುತ್ ದರಗಳನ್ನು ಹೆಚ್ಚಿಸುವ ಅಪಾಯವಿದೆ. ಇದರಿಂದ ಸಾಮಾನ್ಯ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.ಸಾರ್ವಜನಿಕ ಹಣದಿಂದ ನಿರ್ಮಿಸಿರುವ ವಿದ್ಯುತ್ ಗ್ರಿಡ್, ಕಂಬಗಳು ಮತ್ತು ಮೂಲಸೌಕರ್ಯಗಳನ್ನು ಖಾಸಗಿ ಸಂಸ್ಥೆಗೆ ನೀಡುವುದು ಜನರ ಹಣದ ದುರುಪಯೋಗವಾಗಲಿದೆ.ಗ್ರಾಹಕರಿಗೆ, ರೈತರ ನೀರಾವರಿ ಯೋಜನೆಗಳಿಗೆ ಉಚಿತ ವಿದ್ಯುತ್, ರಿಯಾಯಿತಿ ದರದಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಪೂರೈಸುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿ ಕೃಷಿಗೆ ಅಪಾಯಕಾರಿಯಾಗುತ್ತದೆ. ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತದೆ. ವಿದ್ಯುತ್ ದೇಶದ ಭದ್ರತೆ ಮತ್ತು ಜನರ ಬದುಕಿಗೆ ಅತ್ಯಗತ್ಯವಾಗಿದೆ. ಇದನ್ನು ಖಾಸಗಿ ಲಾಭದ ಉದ್ದೇಶದ ಅsನಕ್ಕೆ ನೀಡುವುದು ರಾಜ್ಯದ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲಭೂತ ಸೌಕರ್ಯಕ್ಕೆ ಮಾರಕವಾಗುತ್ತದೆ.
ಗುರುರಾಯರ ಸನ್ನಿಧಿಯಲ್ಲಿ ಯುವತಿಯರ ಗಾಯನ ಸೇವೆ

ಬೆಂಗಳೂರಿನ ಜಯನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಗುರುವಾರದ ಪ್ರಯುಕ್ತ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನಘಾ ರಾಜಪುರೋಹಿತ್, ಕೀರ್ತನಾ ಶ್ರೀಕಾಂತ್, ಶಾಲಿನಿ ಮತ್ತು ಮನಸ್ವಿನಿ ರಾಜ್ ಇವರುಗಳು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸ ಕೃತಿಗಳನ್ನು ಸುಶ್ರಾವ್ಯವಾಗಿ ಮತ್ತು ತಾರತಮ್ಯವಾಗಿ ಪ್ರಸ್ತುತ ಪಡಿಸಿದರು. ಇವರ ಗಾಯನಕ್ಕೆ ವೀಣಾ ವಾದನದಲ್ಲಿ ಕಾರ್ತೀಕ್ ಶ್ರೀಕಾಂತ್ ಹಾಗೂ ಮೃದಂಗದಲ್ಲಿ ವರದೇಂದ್ರ ಸಿಂಹ ಸಾಥ್ ನೀಡಿದರು. ಈ ಕಾರ್ಯಕ್ರಮವು ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ನೆರವೇರಿತು.











