--Ads--

ಮಂಡ್ಯದಲ್ಲಿ ಮಕ್ಕಳ 17 ನೇ ಸಾಂಸ್ಕೃತಿಕ ಸಮ್ಮೇಳನ. ಕರ್ನಾಟಕದ ಸಾಂಸ್ಕೃತಿಕ ವೈಭವಕ್ಕೆ ಪರಂಪರೆ ಇದೆ : ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರ ಅಭಿಮತ

On: September 9, 2026 1:13 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

ಮಂಡ್ಯದಲ್ಲಿ ಮಕ್ಕಳ 17 ನೇ ಸಾಂಸ್ಕೃತಿಕ ಸಮ್ಮೇಳನ.
ಕರ್ನಾಟಕದ ಸಾಂಸ್ಕೃತಿಕ ವೈಭವಕ್ಕೆ ಪರಂಪರೆ ಇದೆ : ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರ ಅಭಿಮತ

ಮಂಡ್ಯ:  ಕರ್ನಾಟಕ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ನಾಡು ಇಲ್ಲಿ ದೇಶದ ಸಂಸ್ಕೃತಿಕ ಪ್ರತಿಕವಾಗಿ ವೈವಿಧ್ಯಮಯ ಉತ್ಸವಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ
ಇದಕ್ಕೆ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನೂ ಮೊಬೈಲ್ ಗಿಳಿಯಿಂದ ದೂರವಿರಿಸಲು
ವಿನಂತಿಸಿದರು.

ಮೊಬೈಲ್ ಹಾವಳಿಂದ ನಮ್ಮ ಮಕ್ಕಳಲ್ಲಿ ಸಂಸ್ಕೃತಿ ಆಚಾರ ವಿಚಾರಗಳ ಸಂಪ್ರದಾಯಗಳ ಕುರಿತು ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ನಿಂದ ದೂರವಿರಿಸಲು ಪ್ರಯತ್ನಿಸಿ ಮಕ್ಕಳ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕೆಂದು ಕರೆ ನೀಡಿದರು.

ರಾಷ್ಟ್ರೀಯ ಮಕ್ಕಳ ಪ್ರತಿಬಾ ಕೇಂದ್ರ. ಬೆಂಗಳೂರು
ಕರ್ನಾಟಕ ಭಾಲವಿಕಾಸ ಅಕಾಡೆಮಿ ಧಾರವಾಡ
ಜಂಟಿ ಆಶ್ರಯದಲ್ಲಿ ಮಂಡ್ಯದ ಗಾಂಧಿ ಭವನದಲ್ಲಿ ನಡೆದ ಮಕ್ಕಳ 17ನೇ ಸಾಂಸ್ಕೃತಿಕ ಸಮ್ಮೇಳನವನ್ನು ಉದ್ಘಾಟಿಸಿ ಶ್ರೀ ಅಡಿವೆಪ್ಪ ಜಿ ಇಟಗಿ ಅಧ್ಯಕ್ಷರು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ
ಮಾತನಾಡಿದರು.

ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಗಾಂಧಿ ಭವನದವರಿಗೆ 17ನೇ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾದ ಬೆಂಗಳೂರಿನ ಕುಮಾರಿ ದೀಪ್ತಿ ಸಿ ಅವರೊಂದಿಗೆ 150ಕ್ಕೂ ಹೆಚ್ಚು ಬಾಲ ಕಲಾವಿದರು ಮೆರವಣಿಗೆ ಮೂಲಕ ಹೆಜ್ಜೆಗೆ ಜಯಸಿಂಹ ಎಸ್ ರಾಜ್ಯಾಧ್ಯಕ್ಷರು ಕರ್ನಾಟಕ ಸಾಂಸ್ಕೃತಿಕ ಕಲಾವಿದರ ಒಕ್ಕೂಟ ಬೆಂಗಳೂರು ಚಾಲನೆ ನೀಡಿ ಇಂತಹ ಮಕ್ಕಳ ಸಮ್ಮೇಳನಗಳು ನಾಡಿನಾದ್ಯಂತ ನಡೆಯಲಿ ಮುಂದಿನ ಪೀಳಿಗೆಗೆ ನಮ್ಮ ದೇಶಿಯ ಸಂಸ್ಕೃತಿ ಪರಂಪರೆ ಮುಂದುವರೆಯಲಿ ಮಕ್ಕಳಲ್ಲಿಯ ಈ ಸಾಂಸ್ಕೃತಿಕ ಪ್ರಜ್ಞೆ ಮತ್ತು ಪಾಲಕರ ಕಾಳಜಿಯೆ ಅಭಿನಂದನೆಯವೆಂದರು.

ಪತ್ರಕರ್ತರಾದ ಎ ಜಿ ಮಲ್ಲಿಕಾರ್ಜುನ ಬಿಜಾಪುರ್
ಈ ನಂದೀಶ್ ಬೆಂಗಳೂರು ಮಲ್ಲನಗೌಡ ಪಾಟೀಲ್ ಸರ್ಕಾರಿ ಅಭಿಯೋಜಕರು ಕೊಪ್ಪಳ ಶ್ರೀರಾಜಕುಮಾರ ಶಾಸ್ತ್ರಿ ಸೊಲ್ಲಾಪುರ್ ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ 150ಕ್ಕೂ ಹೆಚ್ಚು ಕಲಾವಿದರು ವೈವಿಧ್ಯಮಯ ವೇಷ ಭೂಷಣಗಳೊಂದಿಗೆ ಮಕ್ಕಳು ಭಾಗವಹಿಸಿದ್ದರು.ಮಕ್ಕಳ ಆದಿನೇಳನೇ ಸಾಂಸ್ಕೃತಿಕ ಸಮ್ಮೇಳನದ ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷರಾದ ಕುಮಾರಿ ದೀಪ್ತಿ ಸಿ ಬೆಂಗಳೂರು ಅವರನ್ನ ಶ್ರೀಮತಿ ಗಾಯತ್ರಿ ರಾಜಕುಮಾರ್ ಶಾಸ್ತ್ರಿ ಸೊಲ್ಲಾಪುರ್ ರಾಜ್ಯಾಧ್ಯಕ್ಷರು ಕರ್ನಾಟಕ ಜಾಗೃತಿ ವೇದಿಕೆ ಮಹಾರಾಷ್ಟ್ರ ಅವರುಗೌರವಿಸಿ ಸನ್ಮಾನಿಸಿದರು.

ವಿದುಷಿ ರೇಖಾ ಜಗದೀಶ್ ಬೆಂಗಳೂರು ಅವರಿಗೆ ಪಾದಪೂಜೆ ಮಾಡುವ ಮೂಲಕ ಗುರುವಂದನೆಯನ್ನು ಸಮ್ಮೇಳನ ಅಧ್ಯಕ್ಷರಿಂದ ನರವೇರಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬೆಂಗಳೂರಿ ನಗರದ ಕಾಂಗ್ರೆಸ್ ಮುಖಂಡ ಎಂ ಜೆ ಗಿರೀಶ್ ರವರು ಮಾತನಾಡುತ್ತಾ ನಾಡಿನ ಪ್ರತಿಭಾವಂತ ಮಕ್ಕಳಿಗೆ
ಓದಿನ ಜೊತೆಗೆ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮನಸ್ಸಿಗೆ ಆಹ್ಲಾದಕರವಾದ ವಾತಾವರಣ ವನ್ನ ಉಂಟುಮಾಡುತ್ತದೆ ಇದು ಮಕ್ಕಳ ಸರ್ವಾಗಿನ ಬೆಳೆವಣಿಗೆಗೆ ಉಪಯುಕ್ತ ಈ ರೀತಿಯ ಸಾಂಸ್ಕೃತಿಕ ಸಮ್ಮೇಳನಗಳನ್ನ ಮಾಡುತ್ತಿರುವ ಮಹೇಶ್ ಬಾಬು ಸುರ್ವೆ ಅವರ ಕಾರ್ಯ ಅಭಿನಂದನೆಯ ವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಕುಮಾರ್ ಮನು ರೇಖಾ ಜಗದೀಶ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುರೇಂದ್ರ ಗುಡ್ಡೆ ಹೋಟೆಲ್ ಗೌರವಾಧ್ಯಕ್ಷರು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ
ಡಾ ಮಲ್ಕಪ್ಪ ಹಿರಿಯ ಉಪನ್ಯಾಸಕರು ಶ್ರೀಮತಿ ಭುವನೇಶ್ವರಿ ಮೇಲಿನ್ಮಠ ಕಂಪ್ಯೂಟರ್ ನಿಘಂಟು ತಜ್ಞರು ಚಲನಚಿತ್ರ ನಿರ್ಮಾಪಕ ಆನಂದ್ಮಂಗಲ್ ಸ್ಪೋರ್ಟ್ಸ್ ವಿನೋದ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳ ನೃತ್ಯ ಕಲಾವಿದರು ಭಾಗವಹಿಸಿ ವೈವಿಧ್ಯಮಯ ಸಮೂಹ ನೃತ್ಯ ನೃತ್ಯರೂಪಕ ಜನಪದ ನೃತ್ಯ ಭರತನಾಟ್ಯ ಕುಚುಪುಡಿ ಕಥಕ್ ನೃತ್ಯಗಳ ಪ್ರದರ್ಶನ ಕಲಾವಿದರಿಂದ ನಡೆಸಲಾಯಿತು.

ವಿದುಷಿ ರೇಖಾ ಜಗದೀಶ್ ತಂಡದ ಲಲಿತ ಕಲಾ ನಿಕೇತನದ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಮನಮೋಹಕವಾಗಿತ್ತು.
ಬೆಂಗಳೂರಿನ ಉಮಾಮಹೇಶ್ವರಿ ತಂಡದ ಸಮೂಹ ನೃತ್ಯ ಕೊಡಗಿನ ಪ್ರತಿಕ್ಷ ತಂಡದ ಜಾನಪದ ನೃತ್ಯ
ಬೆಂಗಳೂರಿನ ರುಕ್ಮಿಣಿ ಸುರುವೇ ತಂಡದ ಸಮೂಹ ನೃತ್ಯ
ಮಂಡ್ಯದ ಚಂದನ ತಂಡದ ಜಾನಪದ ನೃತ್ಯ, ಕೊಪ್ಪಳದ ವಿದ್ಯಾ ಮಂಗಳೂರು ತಂಡದ ಸಮೂಹ ನೃತ್ಯಗಳು
ಬೆಂಗಳೂರಿನ ಅನುಷ ಆರ್ ತಂಡದ ನೃತ್ಯರೂಪಕ
ಮನಮೋಹಕವಾಗಿ ಪ್ರದರ್ಶನಗೊಂಡು ನೆರೆದಿದ್ದ ಪ್ರೇಕ್ಷಕರನ್ನ ರಂಜಿಸಿದವು. ಮಕ್ಕಳಾಗೋಷ್ಠಿಯಲ್ಲಿ
ಕೊಪ್ಪಳದ ಜಸ್ವಿಕ ತಳವಾರ ಅವರಿಂದ ಗಾನ್ದಾರಿ ವಿದ್ಯೆ
ಪ್ರದರ್ಶನ ಆಕರ್ಷಣೀಯವಾಗಿತ್ತು.

ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳು ಭಾಗವಹಿಸಿದ್ದರು
ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಸಮಾರಂಭ ಸಮಾರೋಪ ನುಡಿಗಳನ್ನು ವಿದುಷಿ ರೇಖಾ ಜಗದೀಶ್ ಅವರು ನೆರವೇರಿಸಿ ಮಕ್ಕಳ ಸಾಂಸ್ಕೃತಿಕ ಪ್ರಗತಿಗಾಗಿ ಈ ರೀತಿಯ ವೇದಿಕೆಗಳು ಅನಿವಾರ್ಯ ಮತ್ತು ಅವಶ್ಯ ಆ ನಿಟ್ಟಿನಲ್ಲಿ ರಾಷ್ಟ್ರೀಯ ಮಕ್ಕಳ ಪ್ರತಿಭ ಕೇಂದ್ರದ ಇಂತಹ ಸಮ್ಮೇಳನಗಳು ಸಹಕಾರಿಯಾಗಲಿವೆ ಈ ರೀತಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಸರ್ಕಾರ ಮಾಡುವಂತಹ ಆಗಬೇಕು ಅದಕ್ಕೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.

ತಮ್ಮ ನೇತೃತ್ವದಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ರೂಪಗೊಂಡಿದ್ದು ನಾಡಿನ ಅತ್ಯಂತ ಅನೇಕ ರಾಷ್ಟ್ರೀಯ ಉತ್ಸವಗಳಲ್ಲಿ ಕಲಾಪ್ರದರ್ಶನವನ್ನು ಮಾಡಿದ್ದಾರೆ ಅಲ್ಲವೇ ಚೈನಾದಲ್ಲಿ ನಡೆದ ಸಾಂಸ್ಕೃತಿಕ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆ ತಮ್ಮ ತಂಡದ ಮಕ್ಕಳಿಗೆ ಇದೆ ಎಂದು ಅಭಿಮಾನ ಪೂರ್ವಕವಾಗಿ ಹೇಳಿದರು.

ವಿದುಷಿ ಉಮಾ ಮಹೇಶ್ವರಿ,ವಿದುಷಿ ಚಂದನ ಮಂಡ್ಯ
ಕೆಎಂ ಇಂದಿರಾ ಬೆಂಗಳೂರು,ಕುಮಾರಿ ಪ್ರತಿಕ್ಷ ಕೊಡಗು
ಶ್ರೀಮತಿ ಪ್ರಭಾ ಬೆಂಗಳೂರು ಸೇರಿದಂತೆ ಅನೇಕರಿಗೆ ನಾಟ್ಯ ಶಿರೋಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಮಂಡ್ಯದಲ್ಲಿ ನಡೆದ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದ ಪ್ರಸ್ತಾವಿಕ ನುಡಿಗಳನ್ನು ಸಮ್ಮೇಳನದ ಸಂಚಾಲಕ ಮಹೇಶ್ ಬಾಬು ಸುರ್ವೆ ಆಡುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಈ ರೀತಿಯ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಆಗ್ರಹಿಸಿದರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಕಲಾತಂಡಗಳ ಪ್ರಯೋಜನೇ ಮಾಡಲಾಗಿತ್ತು. ಸಂಸ್ಥೆಯ ಸುರೇಂದ್ರ ಗುಡ್ಡೆ ಹೋಟೆಲ್ ಗೌರವ ಅಧ್ಯಕ್ಷರು ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ ಸ್ವಾಗತಿಸಿದರು, ಸುಶೀಲ ಎಂಎಸ್ ವಂದಿಸಿದರು, ಶ್ರೀಮತಿ ರೇಖಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು

— ಮಹೇಶ್ ಬಾಬು ಸುರ್ವೆ 

 

WhatsApp

Join Now

Telegram

Join Now

Instagram

Join Now