ವಿಜಯ ದರ್ಪಣ ನ್ಯೂಸ್ …..
ಮಳ್ಳೂರಿನ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರಕ್ಕೆ ಅಮೇರಿಕಾ ವಿಜ್ಞಾನಿಗಳು ಹಾಗು ಸಚಿವ ಕೆ.ಎಚ್.ಮುನಿಯಪ್ಪ ಭೇಟಿ
ಮಧುಮೇಹ ನಿಯಂತ್ರಣಕ್ಕೆ ಅಮೇರಿಕಾದ ಅಕ್ಕಿ ಬಳಕೆಗೆ ಸಲಹೆ , ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಸಚಿವರ ಭರವಸೆ

ಶಿಡ್ಲಘಟ್ಟ : ಮಳ್ಳೂರಿನ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ನಿರಂತರವಾಗಿ ಉಚಿತ ಆರೋಗ್ಯ ಶಿಬಿರಗಳು ಸೇರಿದಂತೆ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿ, ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು
ಅಮೇರಿಕಾ ದೇಶದ ಖ್ಯಾತ ಪ್ರೊಪೆಸರ್ ಭಾರತ್ಲೋಮ್ ಡೀನ್ ಅವರು ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಮಳ್ಳೂರಿನ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರಕ್ಕೆ ಅಮೇರಿಕಾ (ಯುಎಸ್ಎ) ದೇಶದ ವಿಜ್ಞಾನಿಗಳ ತಂಡ ಭೇಟಿ ನೀಡಿ, ಕೇಂದ್ರದಲ್ಲಿ ನಡೆಯುತ್ತಿರುವ ಆರೋಗ್ಯ ಸೇವೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಶೀಲಿಸಿತು.
ವಿಜ್ಞಾನಿಗಳು ಮಧುಮೇಹ (ಡಯಾಬಿಟಿಸ್) ನಿಯಂತ್ರಣಕ್ಕೆ ಆಹಾರ ಪದ್ಧತಿಯ ಮಹತ್ವವನ್ನು ವಿವರಿಸಿ, ಉತ್ತಮ ಗುಣಮಟ್ಟದ ಅಕ್ಕಿಯನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಮತ್ತು ನಿಯಮಿತ ಆರೋಗ್ಯ ತಪಾಸಣೆಯ ಅಗತ್ಯವನ್ನು ತಿಳಿಸಿ ವಿವರಿಸಿದರು.
ನಮ್ಮ ದೇಶದ ಅಮೆಜಾನ್ ಪ್ರಾಂತ್ಯದಲ್ಲಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ಬೆಳೆಯುತ್ತಿದ್ದು ,ಆ ಅಕ್ಕಿಯ ಸೇವನೆಯಿಂದ ಅಲ್ಲಿ ಸಾಕಷ್ಟು ಜನರಿಗೆ ಡಯಾಬಿಟಿಸ್ ನಿಯಂತ್ರಣಕ್ಕೆ ಬಂದಿದ್ದು ಭಾರತ ದೇಶದಲ್ಲಿಯು ಈ ಅಕ್ಕಿಯನ್ನು ಬಳಸುವುದರಿಂದ ಇಲ್ಲಿನ ಜನರಿಗೆ ಡಯಾಬಿಟಿಸ್ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದರು.
ಸಚಿವ ಕೆ.ಎಚ್.ಮುನಿಯಪ್ಪ ರವರು ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರಕ್ಕೆ ಭೇಟಿ ವೇಳೆ ಅಮೇರಿಕಾ ವಿಜ್ಞಾನಿಗಳ ಜತೆ ಮಾತನಾಡಿ ಮುಂದಿನ ಗುರುವಾರ ಈ ವಿಚಾರವಾಗಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವಂತೆ ಅವರು ಭರವಸೆ ನೀಡಿದರು.
ಎಂ.ಎಸ್.ರಾಮಯ್ಯ ಆಸ್ಪತ್ರೆಯ ಖ್ಯಾತ ವೈದ್ಯ ಹಾಗೂ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ. ಸಂದೀಪ್ ರವರು ಮಾತನಾಡಿ ನಮ್ಮ ಆರೋಗ್ಯ ಕೇಂದ್ರದಲ್ಲಿ 3000ಕ್ಕೂ ಹೆಚ್ಚು ಡಯಾಬಿಟಿಸ್ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅಮೆರಿಕದ ವಿಜ್ಞಾನಿಗಳು ನೀಡುವ ಅಕ್ಕಿಯನ್ನು ಮೊದಲು 100 ರೋಗಿಗಳಿಗೆ ವಿತರಣೆ ಮಾಡಿ ಅವರಲ್ಲಿ ಡಯಾಬಿಟಿಸ್ ಕಡಿಮೆಯಾದರೆ ಅಂತ ಅಂತವಾಗಿ ಎಲ್ಲಾ ಡಯಾಬಿಟಿಸ್ ರೋಗಿಗಳಿಗೂ ವಿತರಣೆ ಮಾಡುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಅಮೇರಿಕಾದ ವಿಜ್ಞಾನಿ ಹಾಗೂ ಖ್ಯಾತ ಪ್ರೊಪೆಸರ್ ಡೇವಿಡ್ ರಾಬಿನ್ಸ್ ,ಪುವ್ವಾಡ ಫೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ಕಲಾವತಿ , ವೀರಕುಮಾರ್ ,
ಡಾ.ಪ್ರಿಯಾಂಕಾ, ಸಮತ್ವಂ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಸ್ವಯಂ ಸೇವಕರಾದ ಮನೋಜ್ ,
ಪ್ರವೀಣ್, ಎನ್.ಶ್ರೇಯಸ್,ನರೇಂದ್ರ, ಮಂಜುನಾಥ್, ಮುರಳಿ ಮುಂತಾದವರು ಹಾಜರಿದ್ದರು.










