--Ads--

ರೇಷ್ಮೆ ಆಧಾರಿತ ಕೈಗಾರಿಕೆಗಳು, ಮಹಿಳೆಯರಿಗೆ ಗಾರ್ಮೆಂಟ್ಸ್ ತಾಲ್ಲೂಕಿನಲ್ಲೇ ಸ್ಥಾಪಿಸಬೇಕು : ಸಾಮಾಜಿಕ ಹೋರಾಟಗಾರ ನವಾಜ್ ಪಾಷ

On: September 18, 2026 4:22 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರೇಷ್ಮೆ ಆಧಾರಿತ ಕೈಗಾರಿಕೆಗಳು, ಮಹಿಳೆಯರಿಗೆ ಗಾರ್ಮೆಂಟ್ಸ್ ತಾಲ್ಲೂಕಿನಲ್ಲೇ ಸ್ಥಾಪಿಸಬೇಕು : ಸಾಮಾಜಿಕ ಹೋರಾಟಗಾರ ನವಾಜ್ ಪಾಷ

ಶಿಡ್ಲಘಟ್ಟ : ರೇಷ್ಮೆ ಉದ್ಯಮವನ್ನೇ ಅವಲಂಬಿಸಿರುವ ಜನರಿಗೆ ಅನುಕೂಲವಾಗುವಂತೆ ರೇಷ್ಮೆ ಆಧಾರಿತ ಕೈಗಾರಿಕೆಗಳನ್ನು ತಾಲ್ಲೂಕಿನಲ್ಲೇ ಸ್ಥಾಪಿಸಬೇಕು , ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಗಾರ್ಮೆಂಟ್ಸ್ ಸೇರಿದಂತೆ ಖಾಸಗಿ ಕಂಪನಿಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ನವಾಜ್ ಪಾಷ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಹೆಸರುವಾಸಿಯಾಗಿದೆ ಆದರೆ ಸಕಾಲದಲ್ಲಿ ಮಳೆಯಾಗದ ಪರಿಣಾಮ ರೇಷ್ಮೆ ಹಾಗೂ ಹಾಲು ಉತ್ಪಾದನೆಯಲ್ಲಿ ಭಾರಿ ಹಿನ್ನಡೆಯಾಗಿದೆ ಎಂದರು.

ಪ್ರತಿನಿತ್ಯ ಸುಮಾರು 1 ಸಾವಿರ ಟನ್ ಬರುತ್ತಿದ್ದ ರೇಷ್ಮೆ ಗೂಡು ವಹಿವಾಟು ಇದೀಗ 200 ಟನ್ ಗೆ ಇಳಿಕೆಯಾಗಿದೆ ರೇಷ್ಮೆ ಉದ್ಯಮವನ್ನೇ ನಂಬಿಕೊಂಡಿದ್ದ ಅನೇಕರು ಕೆಲಸವಿಲ್ಲದೆ ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ತಾಲ್ಲೂಕಿನ ಯುವಕ-ಯುವತಿಯರು ಹಾಗೂ ಮಹಿಳೆಯರು ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದರು.

ರೇಷ್ಮೆ ಉದ್ಯಮವನ್ನೇ ಅವಲಂಬಿಸಿರುವ ಜನರಿಗೆ ಅನುಕೂಲವಾಗುವಂತೆ ರೇಷ್ಮೆ ಆಧಾರಿತ ಕೈಗಾರಿಕೆಗಳನ್ನು ತಾಲ್ಲೂಕಿನಲ್ಲೇ ಸ್ಥಾಪಿಸಬೇಕು ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಗಾರ್ಮೆಂಟ್ಸ್ ಸೇರಿದಂತೆ ಖಾಸಗಿ ಕಂಪನಿಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದು ಕೇವಲ ಬೇಡಿಕೆಯಲ್ಲ ತಾಲ್ಲೂಕಿನ ಯುವಜನತೆಯ ಬದುಕಿನ ಪ್ರಶ್ನೆಯಾಗಿದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಈ ಸಂಬಂಧ ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಇರ್ಫಾನ್‌ಪಾಷ,ಮನ್ಸೂರ, ಹೈದ‌ರ್, ಅಲ್ತಾಪ್,, ಸಾಬೀರ್,ಆದಿಲ್ ಜಭಿ,ಬಾಬಾಜಾನ್ ಹಾಗು ಮೌಲಾ ಅಲಿ ಹಾಜರಿದ್ದರು.

WhatsApp

Join Now

Telegram

Join Now

Instagram

Join Now