--Ads--

ಸಮಸ್ಯೆಗಳನ್ನು ಬಗಹರಿಸಲು ಆಗ್ರಹಿಸಿ ಜಾಂಭವ ಯುವ ಸೇನೆ ಪದಾಧಿಕಾರಿಗಳಿಂದ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ

On: August 6, 2026 4:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಸಮಸ್ಯೆಗಳನ್ನು ಬಗಹರಿಸಲು ಆಗ್ರಹಿಸಿ ಜಾಂಭವ ಯುವ ಸೇನೆ ಪದಾಧಿಕಾರಿಗಳಿಂದ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ 

ಶಿಡ್ಲಘಟ್ಟ : ಭೂಮಿ, ದಾರಿ, ಸ್ಮಶಾನ ಸಂಬಂದಿತ ಸಮಸ್ಯೆಗಳನ್ನು ಆಧ್ಯತೆ ಮೇರೆಗೆ ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಜಾಂಭವ ಯುವ ಸೇನೆಯ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎನ್.ಗಗನಸಿಂಧು ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಕಚೇರಿ ಎದುರು ತಮಟೆ ಭಾರಿಸುವ ಮೂಲಕ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬೆಳ್ಳೂಟಿ ಗ್ರಾಮದ ಸ್ಮಶಾನ ಜಾಗವನ್ನು ಲೇಔಟ್‌ಗೆ
ಸೇರಿಸಿ ರಸ್ತೆ ನಿರ್ಮಿಸಿರುವುದನ್ನು ತೆರವುಗೊಳಿಸಬೇಕು, ಸರ್ಕಾರಿ ಜಾಗಗಳಲ್ಲಿ ವಾಸವಿರುವ ದಲಿತ ಕುಟುಂಬಗಳಿಗೆ ಅಕ್ರಮ-ಸಕ್ರಮ ಯೋಜನೆ
ಹಾಗೂ ೯೪-ಸಿ, ೯೪-ಸಿಸಿ ಅಡಿಯಲ್ಲಿ ವಾಸದ ಹಕ್ಕುಪತ್ರಗಳನ್ನು ವಿತರಿಸಬೇಕು
ಎಂದರು.

ತಾತ ಮುತ್ತಾತಂದಿರ ಕಾಲದಿಂದಲೂ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಸ್ವಾಧೀನಾನುಭವದಲ್ಲಿರುª ಅರ್ಜಿ ನಮೂನೆ ೫೦, ೫೩, ೫೭ ಹಾಕಿಕೊಂಡಿರುವ ಸಾಗುವಳಿದಾರರಿಗೆ ದರಕಾಸ್ತು ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಯಲಗಹಳ್ಳಿ ಕಾಲೋನಿಯ ಗ್ರಾಮಠಾಣೆ ಜಾಗ ಒತ್ತುವರಿಯಾಗಿದ್ದು ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಯಲಗಹಳ್ಳಿ
ಗ್ರಾಮದಲ್ಲಿ ಗ್ರಾಮಠಾಣೆ ಇಲ್ಲದಿರುವುದರಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ,ಅಲ್ಲಿನ ಸ್ಮಶಾನ ಜಾಗಕ್ಕೂ ಸ್ಕೆಚ್ ಹಾಗೂ ಪಹಣಿ ದಾಖಲೆಗಳಿಲ್ಲದೆ ಒತ್ತುವರಿ ನಡೆದಿದ್ದು ಅದನ್ನು ತೆರವುಗೊಳಿಸಬೇಕು ಎಂದು
ಮನವಿ ಮಾಡಿದರು.

ಗಾಂಡ್ಲಚಿಂತೆ ಗ್ರಾಮದ ಸ್ಮಶಾನ ಜಾಗದ ಒತ್ತುವರಿ ತೆರವು ಕುರಿತು ಈ ಹಿಂದೆ ಅರ್ಜಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ , ದಬರಗಾನಹಳ್ಳಿ ಗ್ರಾಮದಲ್ಲಿ
ಸ್ಮಶಾನವಿಲ್ಲದ ಕಾರಣ ಸರಕಾರಿ ಜಾಗವನ್ನು ಗುರುತಿಸಿ ಸ್ಮಶಾನಕ್ಕೆ ಮೀಸಲಿಡಬೇಕು,ಗ್ರಾಮದ ಸರ್ವೆ ನಂಬರ್ ೮ರಲ್ಲಿ ಇರುವ ೧.೩ ಎಕರೆ ಗೋಮಾಳ ಜಮೀನಿನಲ್ಲಿ ಜಾಂಭವ ಸಮುದಾಯದವರಿಗೆ ಖಾಲಿ ನಿವೇಶನ
ನಿರ್ಮಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ನಲ್ಲಿಮರದಹಳ್ಳಿ ಗ್ರಾಮದ ಸರ್ವೆ ಸಂಖ್ಯೆ ೩೯ರ ಜಮೀನಿನಲ್ಲಿ ಹಾದು ಹೋಗುವ ಸಾರ್ವಜನಿಕ ರಸ್ತೆಯನ್ನು ಒತ್ತುವರಿ
ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ವೇಳೆ ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ, ಜಿಲ್ಲಾಧ್ಯಕ್ಷ ಜಿ.ಆರ್.ಶ್ರೀನಿವಾಸ್ ಇನ್ನೀತರರು ಸಂಘಟನೆಯ ಪದಾಧಿಕಾರಿಗಳು
ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now