--Ads--

ಕಲ್ಬುರ್ಗಿ ಜಿಲ್ಲಾಡಳಿತದಿಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರತಿಮೆಯನ್ನು ಪುನಃ ನಿರ್ಮಾಣ ಮಾಡಿದದಿದ್ದರೆ ಸಿದ್ದು ಅಭಿಮಾನಿಗಳಿಂದ  ಪಾದಯಾತ್ರೆ

On: September 26, 2026 8:51 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕಲ್ಬುರ್ಗಿ ಜಿಲ್ಲಾಡಳಿತದಿಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರತಿಮೆಯನ್ನು ಪುನಃ ನಿರ್ಮಾಣ ಮಾಡಿದದಿದ್ದರೆ ಸಿದ್ದು ಅಭಿಮಾನಿಗಳಿಂದ  ಪಾದಯಾತ್ರೆ

ತಾಂಡವಪುರ ಸೆಪ್ಟೆಂಬರ್ 23 ಕಲ್ಬುರ್ಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಮೆಯನ್ನು ಅಲ್ಲಿನ ಸಿದ್ದು ಅಭಿಮಾನಿಗಳು ಅವರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ಅಭಿಮಾನವನ್ನು ತೋರಿಸಿದರು ಅಲ್ಲಿನ ಜಿಲ್ಲಾಡಳಿತ ರಾತ್ರಿ ನಿರ್ಮಿಸಿದ್ದ ಸಿದ್ದರಾಮಯ್ಯನವರ ಪ್ರತಿಮೆಯನ್ನು ಬೆಳಿಗ್ಗೆ ಅವರ ಪ್ರತಿಮೆಯನ್ನು ತೆರುವು ಗೊಳಿಸಿರುವುದನ್ನು ಖಂಡಿಸಿ ಮತ್ತೆ ಅದೇ ಜಾಗದಲ್ಲಿ ಅವರ ಪ್ರತಿಮೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ. ಮೈಸೂರು ನಂಜನಗೂಡು ಊಟಿ ರಸ್ತೆ ಹುಲ್ಲಳ್ಳಿ ಸರ್ಕಲ್ ನಲ್ಲಿ ಇಂದು ಡಾ. ಎಸ್ ಯತೀಂದ್ರ ಸಿದ್ದರಾಮಯ್ಯನವರ ಫೌಂಡೇಶನ್ ಅಧ್ಯಕ್ಷ ಕೆ ಎಸ್ ಸುಂಡಿ ರವಿಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ರವಿಕುಮಾರ್ ನಂಜನಗೂಡು ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್ ಕುರುವ ಸಮಾಜದ ಮುಖಂಡರಾದ ಕುರಿಹುಂಡಿ ರಾಜು ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಅಧಿಕಾರದ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದಂತ ಹಿಂದುಳಿದ ವರ್ಗದ ಮಹಾನ್ ನಾಯಕ ಅವರ ಪ್ರತಿಮೆಯನ್ನು ಕಲ್ಬುರ್ಗಿ ಕೋರ್ಟ್ ಸರ್ಕಲ್ ನಲ್ಲಿ ಹಾಲಿನ ಸಿದ್ದರಾಮಯ್ಯನವರ ಅಭಿಮಾನಿಗಳು ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಿದರು ಸ್ಥಾಪನೆ ಮಾಡಿದ ಒಂದೇ ದಿನದಲ್ಲಿ ಅವರ ಪ್ರತಿಮೆಯನ್ನು ಅಲ್ಲಿನ ಜಿಲ್ಲಾಡಳಿತ ತೆರವು ಗೊಳಿಸಿ ಇಡೀ ಹಿಂದುಳಿದ ವರ್ಗದ ಸಮಾಜದವರನ್ನು ಅಪಮಾನ ಮಾಡಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೆ ಸಿದ್ದರಾಮಯ್ಯನವರ ಕಂಚಿನ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡ್ತಿದ್ದಲ್ಲಿ ನಾವು ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನ ಹಮ್ಮಿಕೊಳ್ಳಬೇಕಾಗುತ್ತದೆ ನಾವು ಇವತ್ತು ತಾತ್ಕಾಲಿಕವಾಗಿ ಸಾಂಕೇತಿಕ ಪ್ರತಿಭಟನೆಯನ್ನು ಮಾಡಿದ್ದೇವೆ ಹಾಗೂ ಒಂದು ವೇಳೆ ಪ್ರತಿಮೆಯನ್ನು ಹಾಕದಿದ್ದಲ್ಲಿ ನಾವು ನಂಜನಗೂಡಿನಿಂದ ಕಲಬುರ್ಗಿ ವರೆಗೂ ಪಾದಯಾತ್ರೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮುಖಂಡರುಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ಈ ಪ್ರತಿಭಟನೆಯಲ್ಲಿ ಡಾ ಯತಿಂದ್ರ ಸಿದ್ದರಾಮಯ್ಯ ರವರ ಫೌಂಡೇಶನ್ ಅಧ್ಯಕ್ಷ ಕೆ ಎಸ್ ಹುಂಡಿ ಕೆ ಆರ್ , ರವಿಕುಮಾರ್ ಮುಖಂಡರುಗಳಾದ ಕಳಲೆ ಕನಕರಾಜ್ , ಚಾಮಲಾಪುರದ ಹುಂಡಿ, ರಾಮು ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್ ಕೀರ್ತಿರಾಜ್ ವಿಶ್ವಾ , ನಗರಸಭಾ ಸದಸ್ಯ ಗಂಗಾಧರ್ ಕುರಿಹುಂಡಿ ರಾಜು ತಾಂಡವಪುರ ಎಂ , ದಕ್ಷಿಣ ಮೂರ್ತಿ ಮಾಜಿ ಗ್ರಾಫ ಸದಸ್ಯ ಶಿವರಾಜು ಟಿಕೆ ರವಿ ಬಿಳಿಗೆರೆ ಗೋಲ್ಡ್ ಸುರೇಶ್, ಮಹೇಶ್, ತಾಲೂಕು ಹಾಲುಮತ ಮಹಾಸಭಾಧ್ಯಕ್ಷ ಕುಮಾರ್ ಗೌಡ , ತಗಡೂರು ಗಾರ್ಡನ್ ಮಹೇಶ್ ಶಿವಕುಮಾರ್ ಅಲಂಬೂರು ಮುಂಟಿ, ಮಹದೇವಸ್ವಾಮಿ, ಗುರುರಾಜು ಕಿರುಗುಂದ ಶಿವ ನಾಗ
ಮಲ್ಲುಪುರ ಪ್ರಕಾಶ್ ಲೋಕೇಶ್, ಪ್ರಕಾಶ್, ಸುನಿಲ್, ಮಂಜು, ಜೈಕುಮಾರ್, ಬಸವರಾಜ್, ಗುರು, ರವಿ, ಶಂಕರ್ ಸೇರಿದಂತೆ 50ಕ್ಕೂ ಹೆಚ್ಚು ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಮುನ್ನೆಚ್ಚರಿಕೆ ಕ್ರಮವಾಗಿ ನಂಜನಗೂಡು ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು

WhatsApp

Join Now

Telegram

Join Now

Instagram

Join Now