--Ads--

ಸಿಪಿವೈ ಭಗೀರಥ ಅನ್ನುವುದನ್ನ ಬಿಟ್ಟು ಚುನಾವಣೆ ಎದುರಿಸಲಿ : ಮಾಜಿ ಮುಖ್ಯಮಂತ್ರಿ ಸದಾನಂದಗೌಡ

On: October 26, 2024 6:43 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಸಿಪಿವೈ ಭಗೀರಥ ಅನ್ನುವುದನ್ನ ಬಿಟ್ಟು ಚುನಾವಣೆ ಎದುರಿಸಲಿ : ಮಾಜಿ ಮುಖ್ಯಮಂತ್ರಿ ಸದಾನಂದಗೌಡ

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರದ ನೀರಾವರಿ ಅಭಿವೃದ್ಧಿಗೆ 150 ಕೋಟಿ ರೂ. ಅನುದಾನ ನೀಡಿದೆ. ಕ್ಷೇತ್ರದಲ್ಲಿ ಕೆರೆಗಳನ್ನು ತುಂಬಿಸಿ ಅಭಿವೃದ್ಧಿ ಮಾಡಿದ್ದು ಬಿಜೆಪಿ ಸರ್ಕಾರ. ಈ ನಿಟ್ಟಿನಲ್ಲಿ ಭಗೀರಥ ಬಿಜೆಪಿ ಸರ್ಕಾರವೇ ಹೊರತು ಯೋಗೇಶ್ವರ್ ಭಗೀರಥ ಅಲ್ಲ. ಯೋಗೇಶ್ವರ್‌ ಅವರು ಕಾಂಗ್ರೆಸ್ ನಲ್ಲಿ ಇದ್ದಾಗ ಕ್ಷೇತ್ರಕ್ಕೆ ಏಕೆ ಅನುದಾನ ತಂದು ಕೆರೆ ತುಂಬಿಸಲಿಲ್ಲ. ಆದರೂ ನಾನು ಭಗೀರಥ ಅಂತ ಹೇಳಿಕೊಂಡು ಚುನಾವಣೆ ಎದುರಿಸಲು ಯೋಗೇಶ್ವ‌ರ್ ಅವರಿಗೆ ನಾಚಿಕೆ ಆಗಬೇಕು. ಯೋಗೇಶ್ವರ್‌ಗೆ ಮಾನಮರ್ಯಾದೆ ಇದ್ದರೆ ನಾನು ನೀರು ತಂದಿದ್ದೇನೆ ನಾನು ಭಗೀರಥ ಅನ್ನುವುದನ್ನ ಬಿಟ್ಟು ಚುನಾವಣೆ ಎದುರಿಸಬೇಕು ಎಂದು ಸವಾಲು ಹಾಕಿದರು.

ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿ ಮಾತನಾಡಿದ ಅವರು ಕ್ಷೇತ್ರದ ಉಪಚುನಾವಣೆ ಸವಾಲಿನ ಚುನಾವಣೆಯಾಗಿದೆ. ಸ್ವಾರ್ಥಕ್ಕಾಗಿ ರಾಜ- ಕಾರಣ ಮಾಡುವುದು ಯೋಗೇಶ್ವ‌ರ್ ಅವರ ಗುಣವಾಗಿದ್ದು ಒಬ್ಬ ವ್ಯಕ್ತಿ ಪಕ್ಷ ಅಂತ ಹೇಳಿ ಈಗ 7ನೇ ಬಾರಿ ಪಕ್ಷಾಂತರ ಮಾಡಿದ್ದರೆ. ಪಕ್ಷಾಂತರ ಮಾಡುವವರನ್ನು ನಿರ್ಲಕ್ಷ್ಯ ಮಾಡಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಯೋಗೇಶ್ವರ್‌ ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಹಾಕಿದ್ದಾರೆ. ಈ
ಉಪಚುನಾವಣೆ ಯೋಗೇಶ್ವ‌ರ್ ಇರಬೇಕೋ ಬೇಡವೋ ಎನ್ನುವ ನಿರ್ಧಾರದ ಆಧಾರಿತ ಚುನಾವಣೆ ಆಗಲಿದೆ. ಈ ನಿಟ್ಟಿನಲ್ಲಿ ನಿಖಿಲ್‌ಕುಮಾರಸ್ವಾಮಿ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದರು.

WhatsApp

Join Now

Telegram

Join Now

Instagram

Join Now