--Ads--

ಮೈತ್ರಿ ಧರ್ಮ ಪಾಲಿಸದೇ ಸೋಲಿಸಿದ್ದು ಯಾರು?: ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಗರಂ

On: November 2, 2024 12:34 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಮೈತ್ರಿ ಧರ್ಮ ಪಾಲಿಸದೇ ಸೋಲಿಸಿದ್ದು ಯಾರು?: ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಗರಂ

ಚನ್ನಪಟ್ಟಣ ರಾಮನಗರ ಜಿಲ್ಲೆ ನವೆಂಬರ್ 02 : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶನಿವಾರ ತಾಲ್ಲೂಕಿನ ವಿವಿಧೆಡೆ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ವಿರುಪಾಕ್ಷಿಪುರ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿ, ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಹೂವಿನ ಸುರಿಮಳೆ ಸುರಿಸಿ ಅದ್ದೂರಿ ಸ್ವಾಗತ ಕೋರಿದರು.

ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ದೀಪಾವಳಿ ಹಬ್ಬ ಇದ್ದರು ಸಹ ಎರಡು ಪಕ್ಷದ, ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡ್ತಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗ್ತಿದೆ. ಈ ಬಾರಿ ಜನ ನನಗೆ ಬೆಂಬಲ ನೀಡುವ ವಿಶ್ವಾಸ ಇದೆ ಎಂದು ತಿಳಿಸಿದರು.

ಕಣ್ಣೀರು ಉದ್ದೇಶಪೂರ್ವಕವಲ್ಲ: ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಕಾಂಗ್ರೆಸ್ ನಾಯಕರ ವ್ಯಂಗ್ಯ ವಿಚಾರಕ್ಕೆ ಮಾತನಾಡಿ ಅವರು, ‘ರಾಮನಗರ ಜಿಲ್ಲೆಯ ಜನತೆ ಜೊತೆ ಅವಿನಾಭಾವ ಸಂಬಂಧ ಇದೆ. ನಾವು ಮಾಡಿರೋ ಅಭಿವೃದ್ಧಿ ವಿಚಾರ ಮನವರಿಕೆ ಮಾಡಿ ಮತ ಕೇಳ್ತಿದ್ದೇವೆ. ನಾನು ಉದ್ದೇಶ ಪೂರ್ವಕವಾಗಿ ಮತಗಿಟ್ಟಿಸಲು ಕಣ್ಣೀರು ಹಾಕಿಲ್ಲ. ನನ್ನ ನೋವನ್ನು ಜನರ ಬಳಿ ಹೇಳಿಕೊಳ್ಳುವಾಗ ಕಣ್ಣೀರು ಹಾಕಿದ್ದೇನೆ. ಇದರಲ್ಲಿ ಬೆರೆ ಯಾವುದೇ ಬೇರೆ ಉದ್ದೇಶ ಇಲ್ಲ’ ಎಂದು ತಿಳಿಸಿದರು.

WhatsApp

Join Now

Telegram

Join Now

Instagram

Join Now