ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮತಯಾಚನೆ… ಎಚ್ ಡಿ ಕುಮಾರಸ್ವಾಮಿ ರಾಜ್ಯ ಆಳುವುದು ಖಚಿತ

ಹೆಚ್ ಡಿ ಕುಮಾರಸ್ವಾಮಿ ಮತ್ತೆ ರಾಜ್ಯವನ್ನು ಆಳುವುದನ್ನು ಯಾರು ತಪ್ಪಿಸಲಾಗದು. ರೈತರ ಸಾಲ ಮನ್ನಾ ಪಂಚ ರತ್ನ ಯೋಜನೆಗಳನ್ನು ಇನ್ನೊಬ್ಬರು ಕೊಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಹೇಳಿದರು.

ರಾಮನಗರ ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಎಚ್ ಡಿ ಕುಮಾರಸ್ವಾಮಿ ಇವತ್ತು ಇಡೀ ರಾಜ್ಯ ಸತ್ತುತ್ತಿದ್ದಾರೆ ಇಡೀ ದೇಶದಲ್ಲಿ ಅವರಂತೆ ಮತ್ತೊಬ್ಬರು ಕಾರ್ಯಕ್ರಮಗಳನ್ನು ನೀಡಿಲ್ಲ. ರೈತರಿಗೆ ರೂ.5000 ಮಾಸಾಸನ ನೀಡುವ ಮತ್ತೊಬ್ಬ ಮುಖ್ಯಮಂತ್ರಿ, ಯಾರಾದರೂ ಇದ್ದಾರೇ ಎಂದು ಹೆಚ್ ಡಿ ದೇವೇಗೌಡರು ಪ್ರಶ್ನಿಸಿದರು.

ಮೇಕೆದಾಟಿನಲ್ಲಿ ಅಣೆಕಟ್ಟು ಕಟ್ಟಿ ಕುಡಿಯುವ ನೀರು ಪಡೆಯಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ .ಅದೇ ತಮಿಳುನಾಡು ಸರ್ಕಾರ ಸೇಡಂನಲ್ಲಿ 6 ಲಕ್ಷ ಎಕರೆಗೆ ಏತ ನೀರಾವರಿ ಯೋಜನೆ ರೂಪಿಸಲು ಹೊರಟಾಗ ನಾವು ನಡೆಸಿದ ಹೋರಾಟಕ್ಕೆ ಲೋಕಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು ಸಹಕಾರ ನೀಡಲಿಲ್ಲ. ಅಂದಿನ ಯುಪಿಎ ಸರ್ಕಾರ ಸಹ ಕೈ ಚೆಲ್ಲಿತು ಎಂದು ದೂರಿದರು.

ತಮಿಳುನಾಡಿನಲ್ಲಿ ಈವರೆಗೆ ಒಬ್ಬ ಬಿಜೆಪಿಯವರಾಗಲಿ ಕಾಂಗ್ರೆಸ್ ನವರಾಗಲಿ ಗೆಲ್ಲಲು ಆಗಲಿಲ್ಲ .ಆದರೆ ನಮ್ಮವರಿಗೆ ಏನಾಗಿದೆ? ನಾವು ಅವರಿಂದ ಕಲಿಯಬೇಕಿದೆ. ನಾನು ಹೋರಾಟ ಮಾಡಿ ಜಿಲ್ಲೆಯಲ್ಲಿ ಇಗ್ಗಲೂರು, ಅರ್ಕಾವತಿ ಜಲಾಶಯ ಕಟ್ಟಿದ್ದೇನೆ ಎಂದರು.

ರಾಮನಗರದ ಅನೇಕ ತಾಯಂದಿರು ಅಂದು ನನಗೆ ತಮ್ಮ ಮನೆ ಮಗನಂತೆ ಅನ್ನ ಉಣಪಡಿಸಿದ್ದಾರೆ. ಇಂದು ಅವರಲ್ಲಿ ಬಹುತೇಕರು ಇಲ್ಲ. ಆದರೂ ಅವರ ಋಣವನ್ನು ನೆನೆಯುವೆ ಎಂದು ಗದ್ಗದಿತರಾದರು.

ಯಾವ ಜನರು ಈ ದೇವೇಗೌಡನನ್ನು ಮುಖ್ಯಮಂತ್ರಿ. ಪ್ರಧಾನಮಂತ್ರಿ ಮಾಡಿದರೋ ಅದೇ ಜನರ ಮುಂದೆ ಇಂದು ಕೈ ಒಡ್ಡಿ ಬಂದಿದ್ದೇನೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ರವರನ್ನು ಕರೆದುಕೊಂಡು ಹೋಗಿ ಮೋಸದಿಂದ ಸೋಲಿಸಿದರು. ಆದರೆ ರಾಮನಗರದ ಜನ ಹಾಗೆ ಮಾಡಬೇಡಿ ಮುಂದೆ ರಾಜ್ಯದಲ್ಲಿ ಒಬ್ಬ ಶ್ರೇಷ್ಠ ನಾಯಕನಾಗುವ ಶಕ್ತಿ ಅವನಲ್ಲಿ ಇದೆ. ದಯವಿಟ್ಟು ಕ್ಷೇತ್ರದ ಮತದಾರರು ಗೆಲ್ಲಿಸಿ ಎಂದು ಕೈ ಮುಗಿದರು.

ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜೊತೆಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡರು. ನಂತರ ಕೈಲಾಂಚ ಗ್ರಾಮದಲ್ಲಿಯೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಮಾಡಿದರು.