ಅಭಿಮಾನಿಗಳ ಅತಿರೇಕ…. ಹುಚ್ಚುತನದ ಪರಮಾವಧಿ…..
ವಿಜಯ ದರ್ಪಣ ನ್ಯೂಸ್…. ಅಭಿಮಾನಿಗಳ ಅತಿರೇಕ…. ಹುಚ್ಚುತನದ ಪರಮಾವಧಿ….. ಯಾರ್ರೀ ಅದು ಡಚ್ಚ – ಕಿಚ್ಚ. ( ದರ್ಶನ್ – ಸುದೀಪ್ ) + ( ಡೆವಿಲ್ – ಮಾರ್ಕ್ )…….. ಅವರ ಅಭಿಮಾನಿಗಳ ಯುದ್ಧವಂತೆ….. ಸಾಮಾಜಿಕ ಜಾಲತಾಣಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದು ಬಹುದೊಡ್ಡ ಚರ್ಚೆಯಂತೆ….. ಯಾಕಪ್ಪಾ, ಏನಾಗಿದೆ ಸಮಸ್ಯೆ, ಪ್ರಾಕೃತಿಕ ವಿಕೋಪ ನಿಯಂತ್ರಿಸಲು ಈ ಜಗಳವೇ ? ಆರ್ಥಿಕ ಕುಸಿತ ತಡೆಯಲು ಈ ಕುತಂತ್ರಗಳೇ ? ರಾಜ್ಯ ದೇಶದ ಘನತೆ ಕಾಪಾಡಲು ಈ ಬೈದಾಟಗಳೇ…
