ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವ
ವಿಜಯ ದರ್ಪಣ ನ್ಯೂಸ್….. ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವ ಶಿಡ್ಲಘಟ್ಟ : ನಗರದ ಶ್ರೀಗಂಗಮ್ಮ ದೇವಾಲಯದಲ್ಲಿ ಆರನೇ ವರ್ಷದ ಶ್ರೀದೌಪದಮ್ಮದೇವಿಯ ಹೂವಿನ ಕರಗ ಮಹೋತ್ಸವವು ವೈಭವದೊಂದಿಗೆ ನೆರವೇರಿತು. ನಗರದಾದ್ಯಂತ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತರು ಸೇರಿ ಕರಗ ಮಹೋತ್ಸವವನ್ನು ಕಣ್ತುಂಬಿಕೊಂಡರು. ಮುಳಬಾಗಿಲಿನ ನಾಗರಾಜ್ ಅವರು ತಲೆ ಮೇಲೆ ಹೂವಿನ ಕರಗ ಹೊತ್ತು ಭಕ್ತಿಯಲ್ಲಿ ಮುಳುಗಿ ಕುಣಿದರೆ,ಅವರ ಸುತ್ತಲೂ ನಿಂತಿದ್ದ ಭಕ್ತರೂ ತಮ್ಮ ಸ್ಥಾನದಲ್ಲೇ ಕುಣಿದು ಉಲ್ಲಾಸ ವ್ಯಕ್ತಪಡಿಸಿದರು. ತಮಟೆಯ ಸದ್ದಿನಲ್ಲಿ ಹಾಗು ಕರಗದ ನೃತ್ಯ ಭಕ್ತರನ್ನು…
