ಅದ್ದೂರಿಯಾಗಿ ನಡೆದ ಕರಗ, ಊರಹಬ್ಬ , ಶ್ರೀನಿವಾಸ ಕಲ್ಯಾಣೋತ್ಸವ

ವಿಜಯ ದರ್ಪಣ ನ್ಯೂಸ್…. ಅದ್ದೂರಿಯಾಗಿ ನಡೆದ ಕರಗ, ಊರಹಬ್ಬ , ಶ್ರೀನಿವಾಸ ಕಲ್ಯಾಣೋತ್ಸವ ಶಿಡ್ಲಘಟ್ಟ : ಕಲ್ಯಾಣೋತ್ಸವವನ್ನು ದಿಬ್ಬೂರಹಳ್ಳಿ ಬ್ರಾಹ್ಮಣರ ಸಂಘದ ಸಹಕಾರದಿಂದ ಅನಂತಪುರದ ಶ್ರೀನಾಗರಾಜಶಾಸ್ತ್ರಿ ಅವರ ತಂಡ ಪೂಜಾ ಕಾರ್ಯ ನೆರವೇರಿಸಿತು. ದಿಬ್ಬೂರಹಳ್ಳಿ ಹಾಗು ತಾಲ್ಲೂಕಿನಾದ್ಯಂತ ಸಕಾಲದಲ್ಲಿ ಮಳೆ ಬೆಳೆಗಳಾಗಿ ರೈತರು, ಜನರು ಸಮೃದ್ಧಿಯಿಂದ ಜೀವನ ನಡೆಸಬೇಕು ಎಂದು ಪ್ರಾರ್ಥಿಸಿದರು. ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, 3ನೇ ವರ್ಷದ ಊರಹಬ್ಬ, ಅದ್ದೂರಿ ಕರಗ ಮಹೋತ್ಸವ ಆಚರಿಸಲಾಯಿತು. ಗ್ರಾಮದಲ್ಲಿ ನಡೆದ 3 ದಿನಗಳ ಊರಹಬ್ಬ, ಕರಗಮಹೋತ್ಸವ, ಕಲ್ಯಾಣೋತ್ಸವಕ್ಕಾಗಿ … Read more

ಕೇಂದ್ರದ ನಾಲ್ಕು ಕಾರ್ಮಿಕ ಕಾಯಿದೆ ವಿರೋಧಿಸಿ ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್…. ಕೇಂದ್ರದ ನಾಲ್ಕು ಕಾರ್ಮಿಕ ಕಾಯಿದೆ ವಿರೋಧಿಸಿ ಪ್ರತಿಭಟನೆ ತಾಂಡವಪುರ ಮೇ 12: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಕಾರ್ಮಿಕರ ಹಿತಾಸಕ್ತಿ ಬಲಿಕೊಟ್ಟು, ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಿ ಗೆಜೆಟ್ ಪ್ರಕಟಿಸಿರುವುದನ್ನು ವಿರೋಧಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಕಾರ್ಯಕರ್ತರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಸಂಘಟನೆಗಳು ಸೂಚಿಸಿದ ಯಾವುದೇ ತಿದ್ದುಪಡಿ ಪರಿಗಣಿಸದೆ ಮತ್ತು ಅವರೊಂದಿಗೆ ಯಾವುದೇ ಮಾತುಕತೆ ನಡೆಸದೆ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ … Read more

ಹೆಚ್.ಕ್ರಾಸ್ ನಲ್ಲಿ ವಾಹನ ದಟ್ಟಣೆ ಒತ್ತಡ ನಿಯಂತ್ರಿಸಲು ಬಸ್ ನಿಲ್ದಾಣ ಸ್ಥಳಾಂತರ 

ವಿಜಯ ದರ್ಪಣ ನ್ಯೂಸ್…. ಹೆಚ್.ಕ್ರಾಸ್ ನಲ್ಲಿ ವಾಹನ ದಟ್ಟಣೆ ಒತ್ತಡ ನಿಯಂತ್ರಿಸಲು ಬಸ್ ನಿಲ್ದಾಣ ಸ್ಥಳಾಂತರ  ಶಿಡ್ಲಘಟ್ಟ : ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕ್ರಾಸ್ ನ ಈ ಪ್ರದೇಶವು ನಾಲ್ಕು ತಾಲ್ಲೂಕುಗಳ ಸಂಪರ್ಕ ಕೇಂದ್ರವಾಗಿದೆ ಉತ್ತರ ದಿಕ್ಕಿಗೆ ಚಿಂತಾಮಣಿ ತಾಲ್ಲೂಕು, ದಕ್ಷಿಣಕ್ಕೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಹೊಸಕೋಟೆ ತಾಲ್ಲೂಕು ಗಡಿ ಹಾಗೂ ಪೂರ್ವಕ್ಕೆ ಒಂದು ಕಿಲೋಮೀಟ‌ರ್ ಹೋದರೆ ಕೋಲಾರ ತಾಲ್ಲೂಕು ವ್ಯಾಪ್ತಿ ಆರಂಭವಾಗುತ್ತದೆ. ಎಚ್.ಕ್ರಾಸ್ ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಒತ್ತಡ ಸಮಸ್ಯೆಯನ್ನು … Read more

ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ದರ್ಶನ್

ವಿಜಯ ದರ್ಪಣ ನ್ಯೂಸ್….. ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಿದ ಶಾಸಕ ದರ್ಶನ್ ತಾಂಡವಪುರ ಮೇ 12 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರುಇಂದು ಆಸ್ಪತ್ರೆಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಭೇಟಿ ನೀಡಿ ವೀಕ್ಷಣೆ ಮಾಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸಮಸ್ಯೆಗೆ ಕಾರಣಕರ್ತರಾದ ಸಿಬ್ಬಂದಿಯನ್ನು … Read more

ಕರ್ನಾಟಕ ಸಂಘ ಕತಾರ್ ವತಿಯಿಂದ ತಾಯಂದಿರ ದಿನಾಚರಣೆ 2026 ಆಚರಣೆ

ವಿಜಯ ದರ್ಪಣ ನ್ಯೂಸ್….. ಕರ್ನಾಟಕ ಸಂಘ ಕತಾರ್ ವತಿಯಿಂದ ತಾಯಂದಿರ ದಿನಾಚರಣೆ 2026 ಆಚರಣೆ ದೋಹಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮ ತಾಯ್ತನದ ಮಹತ್ವವನ್ನು ಸಾಂಸ್ಕೃತಿಕ ಸೌಹಾರ್ದತೆ ಮತ್ತು ಗಣ್ಯರ ಉಪಸ್ಥಿತಿಯೊಂದಿಗೆ ಪ್ರತಿಬಿಂಬಿಸಿತು ದೋಹಾ, ಕತಾರ್ – ಮೇ 10, 2026: ಕರ್ನಾಟಕ ಸಂಘ ಕತಾರ್ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಕತಾರಿನ ಭಾರತೀಯ ದೂತಾವಾಸದ ಆಶ್ರಯದಲ್ಲಿ ಮೇ 10ರಂದು ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಟ್ರೈನಿಂಗ್ ಅಕಾಡೆಮಿಯಲ್ಲಿ ತಾಯಂದಿರ ದಿನಾಚರಣೆ 2026 ಅನ್ನು ಅತ್ಯಂತ ಸಂಭ್ರಮ … Read more

ಶೀರ್ಷಿಕೆ ಏನು ಕೊಡಲಿ……

ವಿಜಯ ದರ್ಪಣ ನ್ಯೂಸ್…. ಶೀರ್ಷಿಕೆ ಏನು ಕೊಡಲಿ…… ನೆನಪಿಸುತ್ತಿದೆ ನನ್ನ ಕಣ್ಣುಗಳು, ದೃಷ್ಟಿ ಮಂಜಾಗುವ ಮುನ್ನ, ಸೃಷ್ಟಿಯ ಸೌಂದರ್ಯವನ್ನು ನೋಡೆಂದು….. ನೆನಪಿಸುತ್ತಿದೆ ನನ್ನ ಕಿವಿಗಳು, ಕಿವುಡಾಗುವ ಮುನ್ನ, ಇಂಪಾದ ಸಂಗೀತವನ್ನು ಆಲಿಸು ಎಂದು……. ನೆನಪಿಸುತ್ತಿದೆ ನನ್ನ ಮೂಗು, ವಾಸನೆ ಕಳೆದುಕೊಳ್ಳುವ ಮುನ್ನ, ಸುವಾಸನೆಯ ಪರಿಮಳವನ್ನು ಆಘ್ರಾಣಿಸೆಂದು….. ನೆನಪಿಸುತ್ತಿದೆ ನನ್ನ ನಾಲಿಗೆ, ನಿರ್ಜೀವವಾಗುವ ಮುನ್ನ , ಸವಿರುಚಿಯನ್ನು ಆಸ್ವಾಧಿಸೆಂದು…… ನೆನಪಿಸುತ್ತಿದೆ ನನ್ನ ಬಾಯಿ, ಮೌನವಾಗುವ ಮುನ್ನ, ಹಿತವಚನ ನುಡಿ ಎಂದು…. ನೆನಪಿಸುತ್ತಿದೆ ನನ್ನ ಕೈಗಳು, ಬರಿದಾಗುವ ಮುನ್ನ, ದಾನ … Read more

Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ. 

ವಿಜಯ ದರ್ಪಣ ನ್ಯೂಸ್… Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ.  ಮೇ 12 2026: Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ. ಈ ಕಾರ್ಯಕ್ರಮವು ಭಾರತದ ಮುಂದಿನ ತಲೆಮಾರಿನ ಯುವ ಹೊಸತುಗಾರರಿಗೆ ನೈಜ ಜೀವನದ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ನಿರ್ಮಿಸಲು ಪ್ರೇರಣೆ ನೀಡುತ್ತದೆ 2026ರ ಆವೃತ್ತಿಯಲ್ಲಿ ಅತ್ಯುತ್ತಮ ನಾಲ್ಕು ವಿಜೇತ … Read more

ಐಸಿಸಿ ಸಮಿತಿಯನ್ನು ಕತಾರ್ ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಸನ್ಮಾನ

ವಿಜಯ ದರ್ಪಣ ನ್ಯೂಸ್…. ಐಸಿಸಿ ಸಮಿತಿಯನ್ನು ಕತಾರ್ ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಸನ್ಮಾನ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) 2023–2024 ರ ವ್ಯವಸ್ಥಾಪಕ ಸಮಿತಿಯನ್ನು ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಭಾರತದ ರಾಯಭಾರ ಕಚೇರಿಯು ಮೇ 3, 2026 ರ ಭಾನುವಾರದಂದು ಐಸಿಸಿ ಅಶೋಕ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ (ಚಾನ್ಸೆರಿ ಮತ್ತು ಕಾನ್ಸುಲರ್ ಮುಖ್ಯಸ್ಥ) ಡಾ. ವೈಭವ್ ಎ. ತಂಡಲೆ … Read more

ಕಮ್ಯುನಿಸ್ಟ್ ಮುಕ್ತ ಭಾರತ…….

ವಿಜಯ ದರ್ಪಣ ನ್ಯೂಸ್….. ಕಮ್ಯುನಿಸ್ಟ್ ಮುಕ್ತ ಭಾರತ….. ಸಂಸತ್ತಿನಲ್ಲಿ ನಕ್ಸಲ್ ಮುಕ್ತ ಭಾರತ ಘೋಷಣೆಯಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ಕಮ್ಯುನಿಸಂ ಮುಕ್ತ ಸರ್ಕಾರವೂ ಆಗಿದೆ, ಅಂದರೆ ಭಾರತದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟ್ ಸರ್ಕಾರ ಸದ್ಯಕ್ಕೆ ಆಡಳಿತದಲ್ಲಿಲ್ಲ. ಕೇರಳದಲ್ಲಿ ಎಲ್. ಡಿ. ಎಫ್. ಸರ್ಕಾರದ ಪತನದೊಂದಿಗೆ ಈ ರೀತಿಯಲ್ಲಿ ಆಗಿದೆ. ಹಾಗಾದರೆ ಕಮ್ಯುನಿಸ್ಟ್ ಆಡಳಿತ ಭಾರತದಲ್ಲಿ ಮರೆಯಾಗುತ್ತಿದೆಯೇ…… ಕಾರ್ಪೊರೇಟಿಸಂ, ರಿಲಿಜನಿಸಂ, ನ್ಯಾಷನಲಿಸಂ, ಮಾರ್ಕೆಟಿಸಂ, ಕಂಜ್ಯೂಮರಿಸಂ, ಮೀಡಿಯಾಯಿಸಂಗಳ ಅಬ್ಬರದಲ್ಲಿ ಸಮಾಜವಾದ, ಸಮತಾವಾದ ಹಿನ್ನೆಲೆಗೆ ಸರಿಯುತ್ತಿರುವಂತೆ ಭಾಸವಾಗುತ್ತಿದೆ. ಕಮ್ಯುನಿಸಂ ಎಂಬುದು ಒಂದು … Read more

ತಂತ್ರಜ್ಞಾನ ರಾಷ್ಟ್ರದ ಪ್ರಗತಿಯ ಶಕ್ತಿ

ವಿಜಯ ದರ್ಪಣ ನ್ಯೂಸ್….. ತಂತ್ರಜ್ಞಾನ ರಾಷ್ಟ್ರದ ಪ್ರಗತಿಯ ಶಕ್ತಿ ============== ಇಡೀ ವಿಶ್ವವನ್ನೇ ಸಂಕುಚಿತಗೊಳಿಸಿ ಒಂದೇ ವೇದಿಕೆಯನ್ನಾಗಿ ಮಾಡಿರುವುದೇ ತಂತ್ರಜ್ಞಾನ. ಇಂದಿನ ತಾಂತ್ರಿಕ ಯುಗದಲ್ಲಿ ಕಣ್ಮುಚ್ಚಿ ಬಿಡುವಷ್ಟರಲ್ಲಿ ಉಹೆಗಳಾಚೆ ಪವಾಡಗಳೇ ನೆಡೆದಿರುತ್ತವೆ ಎನ್ನಬಹುದು. ಹಾಗಾಗಿ ಈ ಆಧುನಿಕ ಯುಗವು ವಿಜ್ಞಾನ ಮತ್ತು ತಂತ್ರಜ್ಞಾನಗಳ ವೇಗದ ಬೆಳವಣಿಗೆಯಿಂದ ರೂಪುಗೊಂಡಿರುವ ಯುಗವಾಗಿದೆ. ಅಲ್ಲದೆ ಇಂದಿನ ಜಾಗತಿಕ ಸ್ಪರ್ಧಾತ್ಮಕ ಪರಿಸರದಲ್ಲಿ ರಾಷ್ಟ್ರಗಳ ಸಾಮರ್ಥ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ತಂತ್ರಜ್ಞಾನವೇ ಮೊದಲಿನದು ಎಂದರೆ ತಪ್ಪಿಲ್ಲ. ತಂತ್ರಜ್ಞಾನವೆಂದರೆ ವಿಜ್ಞಾನಾಧಾರಿತ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವ ವಿಧಾನವಾಗಿದೆ. … Read more