ಕ್ಯಾನ್ಬೆರಾ ವಿಶ್ವವಿದ್ಯಾಲಯದಿಂದ ಭಾರತದಲ್ಲಿ ಯುಸಿ ಕ್ರಿಕೆಟ್ ಚಾಲೆಂಜ್ʼನ ಹ್ಯಾಟ್ರಿಕ್ ವರ್ಷಾಚರಣೆ

ವಿಜಯ ದರ್ಪಣ ನ್ಯೂಸ್……

ಕ್ಯಾನ್ಬೆರಾ ವಿಶ್ವವಿದ್ಯಾಲಯದಿಂದ ಭಾರತದಲ್ಲಿ ಯುಸಿ ಕ್ರಿಕೆಟ್ ಚಾಲೆಂಜ್ʼನ ಹ್ಯಾಟ್ರಿಕ್ ವರ್ಷಾಚರಣೆ

ಬೆಂಗಳೂರಿನಲ್ಲಿ ಸತತ ಮೂರನೇ ವರ್ಷವೂ ಯುವ ಕ್ರಿಕೆಟ್ ಉಪಕ್ರಮ ಪುನರಾರಂಭ, ಕ್ರೀಡೆ, ಶಿಕ್ಷಣ ಮತ್ತು ಜಾಗತಿಕ ಮಾರ್ಗಗಳ ಮೂಲಕ ಭಾರತ-ಆಸ್ಟ್ರೇಲಿಯಾ ಸಂಬಂಧಗಳಲ್ಲಿ ಸದೃಢತೆ

ಬೆಂಗಳೂರು, ಫೆಬ್ರವರಿ 23, 2026: ಆಸ್ಟ್ರೇಲಿಯಾದ ರಾಜಧಾನಿಯಲ್ಲಿ ಕ್ರಿಕೆಟ್ನ ಆಡಳಿತ ಮಂಡಳಿ ಕ್ರಿಕೆಟ್ ACTಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ UC ಕ್ರಿಕೆಟ್ ಚಾಲೆಂಜ್, ಸ್ಪರ್ಧಾತ್ಮಕ ಶಾಲಾ ಮಟ್ಟದ ಕ್ರಿಕೆಟ್ ಅನ್ನು ಶೈಕ್ಷಣಿಕ ಮಾನ್ಯತೆ, ಸಾಂಸ್ಕೃತಿಕ ವಿನಿಮಯ ಮತ್ತು ಭವಿಷ್ಯಕ್ಕೆ ಸಿದ್ಧವಾದ ಶಿಕ್ಷಣ ಮಾರ್ಗಗಳೊಂದಿಗೆ ಸಂಯೋ ಜಿಸುವ ವಿಶಿಷ್ಟ ಅಂತರರಾಷ್ಟ್ರೀಯ ವೇದಿಕೆಯಾಗಿ ಸ್ಥಿರವಾಗಿ ವಿಕಸನಗೊಂಡಿದೆ.
ಕ್ಯಾನ್ಬೆರಾ ವಿಶ್ವವಿದ್ಯಾಲಯದ (ಯುಸಿ) ಕ್ರಿಕೆಟ್ ಚಾಲೆಂಜ್ ಪಂದ್ಯಾವಳಿಯ ಸತತ ಮೂರನೇ ಆವೃತ್ತಿಯನ್ನು ಗುರುತಿಸುತ್ತಿದೆ. ಈ ಮೂಲಕ ಹ್ಯಾಟ್ರಿಕ್ ವರ್ಷಕ್ಕೆ ಮರಳಿದ್ದು, ಇದು ಮತ್ತು ಕ್ರೀಡೆ, ಶಿಕ್ಷಣ ಮತ್ತು ಯುವ ಅಭಿವೃದ್ಧಿಯ ಮೂಲಕ ಭಾರತ-ಆಸ್ಟ್ರೇಲಿಯಾ ನಡುವಿನ ಸಂಬಂಧ ಬಲಪಡಿಸುವ ವಿಶ್ವವಿದ್ಯಾಲಯದ ದೀರ್ಘಕಾಲೀನ ಬದ್ಧತೆಗೆ ಸಾಕ್ಷಿಯಾಗಿದೆ.

ಪಂದ್ಯಾವಳಿಯ ಆರಂಭದಿಂದಲೂ, ಭಾರತದಾದ್ಯಂತ ಶಾಲೆಗಳ ಯುವ ಕ್ರಿಕೆಟಿಗರು ಆಸ್ಟ್ರೇಲಿಯಾದ ಕ್ರೀಡಾ-ನೇತೃತ್ವದ ಶಿಕ್ಷಣ ಪರಿಸರ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳಲು ಮತ್ತು ಉನ್ನತ-ಕಾರ್ಯ ಕ್ಷಮತೆಯ ಮಟ್ಟದಲ್ಲಿ ಸ್ಪರ್ಧಿಸಲು ಅನನ್ಯ ಅವಕಾಶಗಳನ್ನು ಬಳಸಿಕೊಳ್ಳುದ್ದಾರೆ.

2026ರ ಯುಸಿ ಕ್ರಿಕೆಟ್ ಚಾಲೆಂಜ್ ಬೆಂಗಳೂರಿನಲ್ಲಿ ಅಂತರ-ಶಾಲಾ ಟಿ10 ಪಂದ್ಯಗಳನ್ನು ಒಳಗೊಂಡಿ ರುತ್ತದೆ. ಅಂತರರಾಷ್ಟ್ರೀಯ ಶಿಕ್ಷಣ ಅವಕಾಶಗಳು, ಉನ್ನತ-ಕಾರ್ಯಕ್ಷಮತೆಯ ಕ್ರೀಡಾ ಪರಿಸರಗಳು ಮತ್ತು ಅಂತರ್-ಸಾಂಸ್ಕೃತಿಕ ಕಲಿಕೆಯ ಅನುಭವಗಳಿಗೆ ವಿದ್ಯಾರ್ಥಿಗಳನ್ನು ಒಡ್ಡಲು ವಿನ್ಯಾಸಗೊಳಿಸಲಾದ ಹಲವಾರು ತೊಡಗಿಸಿಕೊಳ್ಳುವ ಚಟುವಟಿಕೆಗಳಿಂದ ಪೂರಕವಾಗಿದೆ. ದಿನಾಂಕ ಗಳು, ಸ್ಥಳಗಳು, ಭಾಗವಹಿಸುವ ಶಾಲೆಗಳು ಮತ್ತು ಕಾರ್ಯಕ್ರಮದ ಅಂಶಗಳ ಕುರಿತು ಹೆಚ್ಚಿನ ವಿವರ ಗಳನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು.

ಈ ವಿಉಪಕ್ರಮದ ಕುರಿತು ಮಾತನಾಡಿದ ಆಸ್ಟ್ರೇಲಿಯಾದ ರಾಜಧಾನಿ ಪ್ರದೇಶದ ಮುಖ್ಯಮಂತ್ರಿ ಶಾಸಕ ಆಂಡ್ರ್ಯೂ ಬಾರ್, “ನಾವೀನ್ಯತೆ, ಅವಕಾಶ ಮತ್ತು ಪಾಲುದಾರಿಕೆ ಮುಂತಾದುವನ್ನು ಕ್ಯಾನ್ಬೆರಾ ವಿಶ್ವವಿದ್ಯಾಲಯದ ಕ್ರಿಕೆಟ್ ಚಾಲೆಂಜ್ ಕ್ಯಾನ್ಬೆರಾ ಪ್ರತಿನಿಧಿಸುತ್ತದೆ.

ಈ ಕಾರ್ಯಕ್ರಮವು ನಮ್ಮ ಅಂತರರಾಷ್ಟ್ರೀಯ ಶಿಕ್ಷಣ ಸಂಬಂಧಗಳನ್ನು ಬಲಪಡಿಸುವುದಲ್ಲದೇ, ಯುವ ಕ್ರೀಡಾಪಟುಗಳಿಗೆ ಹೊಸ ಮಾರ್ಗಗಳನ್ನು ತೆರೆಯುವುದು ಮತ್ತು ಕ್ಯಾನ್ಬೆರಾವನ್ನು ಮೈದಾನದಲ್ಲಿ ಮತ್ತು ತರಗತಿಯಲ್ಲಿ ಪ್ರತಿಭೆ ಪೋಷಿಸುವ ಜಾಗತಿಕ ತಾಣವಾಗಿ ಪ್ರದರ್ಶಿಸುತ್ತದೆ. ಭವಿಷ್ಯ ನಿರ್ಮಿಸುವ, ಜಾಗತಿಕ ಸಂಪರ್ಕಗಳನ್ನು ಗಾಢವಾಗಿಸುವ ಮತ್ತು ನಮ್ಮ ಸಮುದಾಯದ ಅತ್ಯುತ್ತಮತೆಯನ್ನು ಪ್ರತಿಬಿಂಬಿಸುವ ಉಪಕ್ರಮ ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು.