ವಿಜಯ ದರ್ಪಣ ನ್ಯೂಸ್….
ಮಾಜಿ ಸಚಿವ ವಿ.ಮುನಿಯಪ್ಪ ಆಸ್ಪತ್ರೆಗೆ ದಾಖಲು : ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವ ಕೆ.ಹೆಚ್.ಮುನಿಯಪ್ಪ

ಶಿಡ್ಲಘಟ್ಟ : ಮಾಜಿ ಸಚಿವ ವಿ.ಮುನಿಯಪ್ಪ ಅವರು ಅನಾರೋಗ್ಯದ ಕಾರಣ ಬೆಂಗಳೂರಿನ ಸಂಜಯ ನಗರದ ಆರ್.ಎಂ.ವಿ.ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮ್ಮ ರಾಜಕೀಯ ಗುರುಗಳು ಹಾಗು ಹಳೆಯ ಗೆಳೆಯರಾದ ವಿ.ಮುನಿಯಪ್ಪ ಅವರನ್ನು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ವಿದಾನಪರಿಷತ್ ಮಾಜಿ ಸದಸ್ಯ ವೈ.ಎ.ಎನ್.ನಾರಾಯಣಸ್ವಾಮಿ,ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ಎಸ್.ಬಿಸೇಗೌಡ, ಕೋಲಾರ ಜಿಲ್ಲಾ ಪಂ.ಮಾಜಿ ಅಧ್ಯಕ್ಷ ವಿ.ಸುಬ್ರಮಣಿ, ಚಿಂತಾಮಣಿ ಶ್ರೀನಿವಾಸ್ ಹಾಗು ಇನ್ನೀತರರು ಇದ್ದರು.









