--Ads--

ಕುವೆಂಪು ಉದ್ಯಾನವನದಲ್ಲಿ ಬಯಲು ರಂಗಮಂದಿರ ನಿರ್ಮಾಣ : ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ

On: May 26, 2026 5:02 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕುವೆಂಪು ಉದ್ಯಾನವನದಲ್ಲಿ ಬಯಲು ರಂಗಮಂದಿರ ನಿರ್ಮಾಣ : ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ

ರಾಮನಗರ : ಸಾಂಸ್ಕೃತಿಕ ಚಟುವಟಿಕೆಗಳು, ಸ್ಥಳೀಯ ಕಲೆಗಳ ಪ್ರೋತ್ಸಾಹ ಹಾಗೂ ಸಮುದಾಯದ ಒಗ್ಗೂಡುವಿಕೆಗೆ ಬಯಲು ರಂಗಮಂದಿರದ ಅತ್ಯಗತ್ಯವಾಗಿದ್ದು, ಕುವೆಂಪು ಉದ್ಯಾನವನದಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಲಾಗುವುದು ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ  ತಿಳಿಸಿದರು.

ನಗರದ ಕುವೆಂಪು ನಗರ ಬಡಾವಣೆಯ ಕುವೆಂಪು ಉದ್ಯಾನವನ ನಿರ್ವಹಣೆ ಜವಾಬ್ದಾರಿಯನ್ನು ರಾಷ್ಟ್ರಕವಿ ಕುವೆಂಪು ಉದ್ಯಾನವನ ಅಭಿವೃದ್ಧಿ ಬಳಗಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಉದ್ಯಾನವನದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದ್ದು, ಅದನ್ನು ಶೀಘ್ರದಲ್ಲಿಯೇ ಕಾರ್ಯಗತ ಗೊಳಿಸುತ್ತೇವೆ ಎಂದರು.

ನಗರದಲ್ಲಿರುವ ಎಲ್ಲ ಉದ್ಯಾವನಗಳಿಗೆ ಕುವೆಂಪು ಉದ್ಯಾನವನ ಮಾದರಿಯಾಗಿದೆ. ನಿವೃತ್ತ ಸರ್ಕಾರಿ ನೌಕರರು ಕುವೆಂಪುರವರ ಹೆಸರಿನಲ್ಲಿ ಬಳಗ ಕಟ್ಟಿಕೊಂಡು ಉದ್ಯಾನವನ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ.

ಜನರು ಮನಸ್ಸು ಮಾಡಿದರೆ ಒಳ್ಳೆಯ ವಾತಾವರಣ ಸೃಷ್ಟಿಸಬಹುದು ಎಂಬುದನ್ನು ಬಳಗ ತೋರಿಸಿದೆ. ಬೇರೆ ಕಡೆಗಳಲ್ಲಿರುವ ಪಾರ್ಕ್ ಗಳ ನಿರ್ವಹಣೆ ಜವಾಬ್ದಾರಿ ಹೊರಲು ಯಾರಾದರು ಮುಂದೆ ಬಂದರೆ ಅವಕಾಶ ನೀಡುವುದಾಗಿ ತಿಳಿಸಿದರು.

ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛ ಪರಿಸರ ನಮ್ಮೆಲ್ಲರ ಮುಂದಿರುವ ಸವಾಲು. ನಗರಸಭೆಯಿಂದ ಮಾತ್ರ ಸ್ವಚ್ಛ ಸುಂದರ ನಗರ ರೂಪಿಸಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರು ಕೈಜೋಡಿ ಸಬೇಕು. ನಗರಸಭೆ ಸ್ವಚ್ಛ ನಗರ ನಿರ್ಮಾಣ ಮಾಡುವ ಜೊತೆಗೆ ಅಸಂಘಟಿತ ಕಾರ್ಮಿಕರ ಆದಿಯಾಗಿ ಎಲ್ಲ ಬಡವರ್ಗಗಳ ಜನರಿಗೆ ಸವಲತ್ತು ಒದಗಿಸುವ ಕೆಲಸ ಮಾಡುತ್ತಿದೆ.

ಆ ಮೂಲಕ ರಾಮನಗರ ನಗರಸಭೆ ಇಡೀ ದೇಶದಲ್ಲಿಯೇ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದೆ ಎಂದು ಕೆ.ಶೇಷಾದ್ರಿ ಹೇಳಿದರು.

ನಗರಸಭೆ ಆಯುಕ್ತ ಜಯಣ್ಣ ಮಾತನಾಡಿ, ನಗರದ ಸೌಂದರ್ಯ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಉದ್ಯಾನವನಗಳು ಅಗತ್ಯವಿದ್ದು, ಅದರಂತೆ ನಿರ್ವಹಣೆಯೂ ಮುಖ್ಯವಾಗಿದೆ. ಕುವೆಂಪು ಹೆಸರಿನಲ್ಲಿ ರಚನೆಗೊಂಡಿರುವ ಬಳಗ ಕುವೆಂಪುರವರ ಆಶಯಗಳನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯೆ ಪಾರ್ವತಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕುವೆಂಪು ನಗರ ಬಡಾವಣೆಯ ಕುವೆಂಪು ಉದ್ಯಾನವನ ನಿರ್ವಹಣೆ ಜವಾಬ್ದಾರಿಯನ್ನು ರಾಷ್ಟ್ರಕವಿ ಕುವೆಂಪು ಉದ್ಯಾನವನ ಅಭಿವೃದ್ಧಿ ಬಳಗಕ್ಕೆ ಹಸ್ತಾಂತರಿಸಲಾಯಿತು.

ಬಳಗದ ಗೌರವಾಧ್ಯಕ್ಷ ನರಸಿಂಹಯ್ಯ, ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಡಿ.ಶಿವಲಿಂಗಯ್ಯ, ಜಿ.ಎಸ್.ಪಾಂಡು, ವಿ.ಆರ್. ಕೃಷ್ಣಮೂರ್ತಿ, ಮುಖಂಡರಾದ ಶಿವಕುಮಾರಸ್ವಾಮಿ, ಗವಿಯಪ್ಪ, ವಿಜಯ ಕುಮಾರ್ ಇದ್ದರು.

 

WhatsApp

Join Now

Telegram

Join Now

Instagram

Join Now