--Ads--

ಅಮ್ಮನ ಮಡಿಲು ಟ್ರಸ್ಟ್ ನಿಂದ 2 ದಿನಗಳ ನಾಟಕೋತ್ಸವ

On: June 15, 2026 2:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಅಮ್ಮನ ಮಡಿಲು ಟ್ರಸ್ಟ್ ನಿಂದ 2 ದಿನಗಳ ನಾಟಕೋತ್ಸವ

ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿರುವ ನಯನ ಸಭಾಂಗಣದಲ್ಲಿ ಇಂದು ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ ) ವತಿಯಿಂದ 2 ದಿನಗಳ ಕಾಲ ರಣದುಂದುಭಿ ಹಾಗೂ ವರ ಭ್ರಷ್ಟ ಎಂಬ ಸುಂದರ ಐತಿಹಾಸಿಕ ನಾಟಕೋತ್ಸವ ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಕೆ ವಿ ನಾಗರಾಜ್ ಮೂರ್ತಿ, ಹಿರಿಯ ಪತ್ರಕರ್ತ ಚಂದ್ರಶೇಖರ್ ಯಲಬುರ್ತಿ ಆವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಆವರು ಇಂದಿನ ಒತ್ತಡದ ಬದುಕಿನಲ್ಲಿ ಜೀವನದ ಮೌಲ್ಯಗಳನ್ನು ತಿಳಿಸುವ ಇಂತಹ ಐತಿಹಾಸಿಕ ನಾಟಕಗಳು ಈ ಮಾಯನಗರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಷಯ, ಜೊತೆಗೆ ಏಐ ಯುಗದಲ್ಲಿ ರಂಗಭೂಮಿ ಎಂದೆಂದಿಗೂ ಪ್ರಸ್ತುತ ಎಂದು ನಾಟಕೋತ್ಸವ ಆಯೋಜಿಸಿರುವ ಅಮ್ಮನ ಮಡಿಲು ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪತ್ರಕರ್ತ ಚಂದ್ರಶೇಖರ್ ಯಲಬುರ್ತಿ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಇಂತಹ ನಾಟಕಗಳನ್ನು ಏರ್ಪಡಿಸಿ ಕಲೆಯನ್ನು ನಿರಂತರವಾಗಿ ಮುಂದಿನ ಪೀಳಿಗೆಗೆ ಜೀವಂತವಾಗಿ ಇಡಲು ಶ್ರಮಿಸುತ್ತಿರುವ ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷೆ  ಶ್ರೀಮತಿ ವರಲಕ್ಷ್ಮಿ ಅವರಿಗೆ ಅಭಿನಂದನೆಗಳು. ಮೂಲತಃ ವರಲಕ್ಷ್ಮಿ ರಂಗಭೂಮಿ, ಹಾಗೂ ಚಲನಚಿತ್ರ ಕಲಾವಿದರು, ನೂರಾರು ನಾಟಕ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಲಾವಿದೆಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಇಂತವರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಇವರ ಕಲಾಸೇವೆ ಗುರುತಿಸಿ ಸರ್ಕಾರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರ ಹಾಗೂ ನಾಟಕ ಅಕಾಡೆಮಿ ಯನ್ನು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕಲಾರಾಧನ ನಾಟ್ಯ ಶಾಲೆಯ ಮಕ್ಕಳಿಂದ ಭರತನಾಟ್ಯ, ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಆರ್ ಚಂದ್ರಶೇಖರ್, ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಹಾಗೂ ಕಲಾ ಟ್ರಸ್ಟ್ ಆಧ್ಯಕ್ಷೆ ವರಲಕ್ಷ್ಮಿ, ಡಿ, ರಾಜು ಹೈಕೋರ್ಟ್ ವಕೀಲರು, ಮುನಿರಾಜು ಪೊಲೀಸ್ ಇನ್ಸ್ಪೆಕ್ಟರ್, ಆರ್ ರಾಮಕೃಷ್ಣ ಕಲಾವಿದರು,ಸುಮಿತ್ರ ಬಿ ಕೆ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಮಹಿಳಾ ರಾಷ್ಟ್ರೀಯ ಒಕ್ಕೂಟ,ಕುಸುಮಾ ಕೋಟೆ ಸಮತಾ ಮಹಿಳಾ ಸಂಘದ ಅಧ್ಯಕ್ಷರು, ಸದಾನಂದ್ ಜೂನಿಯರ್ ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now