--Ads--

ಕೆವಿಸಿ ಆಸ್ಪತ್ರೆಯಲ್ಲಿ ನವಜಾತ ಮಗು ಸಾವು:ಪೋಷಕರ ಪ್ರತಿಭಟನೆ

On: June 24, 2026 3:21 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕೆವಿಸಿ ಆಸ್ಪತ್ರೆಯಲ್ಲಿ ನವಜಾತ ಮಗು ಸಾವು:ಪೋಷಕರ ಪ್ರತಿಭಟನೆ

ತಾಂಡವಪುರ ಜೂನ್ 24: ಶಸ್ತ್ರಚಿಕಿತ್ಸೆ ಮಾಡಿದ ಹೆರಿಗೆ ಮಾಡಿಸಿದ ಕೆಲವೇ ನಿಮಿಷದಲ್ಲಿ ನವಜಾತ ಶಿಶು ಸಾವಿಗೀಡಾಗಿದ ಘಟನೆ ಕೆವಿಸಿ ಆಸ್ಪತ್ರೆಯಲ್ಲಿ ನಡೆದಿದೆ.
ಮಗುವಿನ ಸಾವಿಗೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಮುಂಭಾಗದಲ್ಲಿ ಸಂತ್ರಸ್ತ ಪೋಷಕರು ಮತ್ತು ಸಂಬಂಧಿಕರು ಕೆಲವು ಕಾಲ ಪ್ರತಿಭಟಿಸಿ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು

ಮೈಸೂರಿನ ರೋಟರಿ ಶಾಲೆ ಬಳಿ ಇರುವ ಕೆವಿಸಿ ಆಸ್ಪತ್ರೆಗೆ ಬನ್ನೂರಿನ ಮಾಕನಹಳ್ಳಿ ಗ್ರಾಮದ ವಿನೋದ್ ಪತ್ನಿ ಕಾವ್ಯ ಎಂಬ ಮಹಿಳೆ ಹೆರಿಗೆಗೆಂದು ಕಳೆದ ಜೂನ್ 18 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 27 ಕ್ಕೆ ಹೆರಿಗೆ ದಿನಾಂಕವನ್ನ ವೈದ್ಯರು ಕೊಟ್ಟಿದ್ದರು.ತಪಾಸಣೆಗೆಂದು ಕಳೆದ ಗುರುವಾರ ಜೂನ್ 18 ರಂದು ಆಸ್ಪತ್ರೆಗೆ ಗರ್ಭಿಣಿ ಕಾವ್ಯರನ್ನು ಕರೆತಂದಿದ್ದಾರೆ.ಗರ್ಭಿಣಿ ಮಹಿಳೆಗೆ ಬಿಪಿ ಹೆಚ್ಚಿದೆ ಈಗಲೇ ಆಸ್ಪತ್ರೆಗೆ ದಾಖಲಿಸಿ ಎಂದು ವೈದ್ಯರಾದ ಸುಗುಣ ಶಾಂತಿ ಅವರು ಸೂಚಿಸಿದ್ದಾರೆ.

ವೈದ್ಯರ ಸಲಹೆಯಂತೆ ದಾಖಲು ಮಾಡಿದ್ದಾರೆ.ಕಳೆದ ಗುರುವಾರದಿಂದ ಮಂಗಳವಾರದ ವರಗೂ ಹೆರಿಗೆ ಮಾಡದೆ ವಿಳಂಬ ಮಾಡಿದ್ದಾರೆ ಪೋಷಕರ ಒತ್ತಾಯದ ಮೇರೆಗೆ ನಿನ್ನೆ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆದಿದ್ದಾರೆ.ಆರಂಭದಲ್ಲಿ ಮಗು ಆರೋಗ್ಯವಾಗಿದ್ದು ಇದ್ದಕ್ಕಿಂದ ಹಾಗೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.ಹೊಟ್ಟೆಯಲ್ಲಿದ್ದಾಗ ಮಗು ಚೆನ್ನಾಗಿತ್ತು ಹೆರಿಗೆ ಆದ ಬಳಿಕ ಯಾಕೆ ಹೀಗಾಯ್ತು.? ಕಳೆದ ವರ್ಷವೂ ಕೂಡ ಹೀಗೆ ಇದೇ ಆಸ್ಪತ್ರೆಯಲ್ಲಿ ಮೊದಲ ಮಗುವಿಗೆ ಆಸ್ಪತ್ರೆಗೆ ದಾಖಲಾಗಿದ್ದಾಗ ಅವಳಿ ಮಕ್ಕಳು ಸಾವಾನ್ನಪ್ಪಿದ್ದವು.ಈಗ ಎರಡನೇ ಹೆರಿಗೆಯಲ್ಲೂ ಮಗು ಉಳಿಸಿಕೊಳ್ಳಲು ವೈದ್ಯೆ ಸುಗುಣ ಶಾಂತಿ ಅವರ ಸಲಹೆ ಸೂಚನೆ,ಮಾರ್ಗದರ್ಶನದಲ್ಲೇ ಎಲ್ಲಾ ರೀತಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಇದ್ದಕ್ಕಿದ್ದಂತೆ ಮಗು ತೀರಿಕೊಂಡಾಗ ಪೋಷಕರು ಮತ್ತು ಅವರ ಸಂಬಂಧಿಕರು ಆಸ್ಪತ್ರೆ ಮುಂಭಾಗ ಕೆಲವು ಕಾಲ ಪ್ರತಿಭಟಿಸಿ ಆಸ್ಪತ್ರೆ ವಿರುದ್ಧ ದಿಕ್ಕಾಗ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ದೇವರಾಜ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕಾವ್ಯ ಎಂಬ ಗರ್ಭಿಣಿ ಮಹಿಳೆಗೆ ನಾನೇ ಚಿಕಿತ್ಸೆ ಕೊಡುತ್ತಿದ್ದೆ ಮೊದಲ ಮಗುವಿನಲ್ಲೂ ನಾನೇ ನೋಡಿದ್ದೆ.ಗರ್ಭಿಣಿ ಕಾವ್ಯಗೆ ಬಿಪಿ ಯಲ್ಲಿ ಏರುಪೇರು ಸಮಸ್ಯೆ ಇತ್ತು. ಕಳೆದ ಗುರುವಾರ ನಾನೇ ಆಸ್ಪತ್ರೆಗೆ ದಾಖಲಿಸಿಕೊಂಡೆ.27 ಕ್ಕೆ ಹೆರಿಗೆ ಡೇಟ್ ಕೊಟ್ಟಿದ್ದೆ.ನಿನ್ನೆ ಕಾವ್ಯಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ.ಹೆರಿಗೆ ಮಾಡಿಸುವಾಗ ಆಕೆಗೆ ಬಿಪಿಯಲ್ಲಿ ಸಾಕಷ್ಟು ಏರಿಳಿತ ಉಂಟಾಗಿತ್ತು.ಹೆರಿಗೆ ಆದ ಬಳಿಕ ಸ್ವಲ್ಪ ಹೊತ್ತಲ್ಲೇ ಮಗು ಸಾವಾಗಿದೆ.ಇದರಲ್ಲಿ ಆಸ್ಪತ್ರೆ ಅಥವಾ ಮ್ಯಾನೇಜ್ಮೆಂಟ್ ನ ಯಾವುದೇ ತಪ್ಪಿಲ್ಲ ಪೋಷಕರು ಮಗು ಕಳೆದುಕೊಂಡ ದುಃಖದಲ್ಲಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.

ಡಾ.ಸುಗುಣ ಶಾಂತಿ,ಪ್ರಸೂತಿ ತಜ್ಞೆ.

WhatsApp

Join Now

Telegram

Join Now

Instagram

Join Now