--Ads--

ಈಶ ಔಟ್‌ರೀಚ್‌ನಿಂದ “ಹಸಿರು ಶಾಲೆ” ಯೋಜನೆಗೆ ಚಾಲನೆ; ಚಿಕ್ಕಬಳ್ಳಾಪುರ ಜಿಲ್ಲೆಯ 1800 ಶಾಲೆ ಮತ್ತು ಕಾಲೇಜುಗಳನ್ನು ತಲುಪುವ ಗುರಿ

On: July 7, 2026 4:14 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಈಶ ಔಟ್‌ರೀಚ್‌ನಿಂದ “ಹಸಿರು ಶಾಲೆ” ಯೋಜನೆಗೆ ಚಾಲನೆ; ಚಿಕ್ಕಬಳ್ಳಾಪುರ ಜಿಲ್ಲೆಯ 1800 ಶಾಲೆ ಮತ್ತು ಕಾಲೇಜುಗಳನ್ನು ತಲುಪುವ ಗುರಿ

ಜುಲೈ 7, 2026: ವನಮಹೋತ್ಸವ ಆಚರಣೆಯ ಅಂಗವಾಗಿ ಜುಲೈ 7 ರಂದು, ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಮತ್ತು ಈಶ ಔಟ್‌ರೀಚ್‌ನ ಜಂಟಿ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರದ ಗುಂಟಪ್ಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಶ ಔಟ್‌ರೀಚ್‌ನ “ಹಸಿರು ಶಾಲೆ” ಯೋಜನೆಗೆ ಚಾಲನೆ ನೀಡಲಾಯಿತು.

ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶ್ರೀ ಟಿ. ಪಿ. ರಾಮಲಿಂಗೇಗೌಡರವರು ಸಸಿಯನ್ನು ನೆಡುವ ಮೂಲಕ ಈ ವಿನೂತನ ಯೋಜನೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶಿಲ್ಪಾ ಬಿ., ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ವಿ. ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶ್ರೀ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಕನ್ಯಾ, ಚಿಕ್ಕಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀ ಕೆ. ವಿ. ಅಭಿಲಾಷ್, ಹಾರೋಬಂಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ನಾರಾಯಣಸ್ವಾಮಿ, ಹಾರೋಬಂಡೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀ ಪಾರ್ಥಸಾರಥಿ, ಗುಂಟಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನರಸಿಂಹಮೂರ್ತಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಶ್ರೀ ಮುನಿರತ್ನ ಅವರು ಉಪಸ್ಥಿತರಿದ್ದರು. ಈಶ ಔಟ್‌ರೀಚ್ ಯೋಜನಾ ಸಂಯೋಜಕ ಸ್ವಾಮಿ ಲವಣ ಮತ್ತು ವಕೀಲರು ಹಾಗೂ ಈಶ ಫೌಂಡೇಶನ್‌ನ ಸ್ವಯಂಸೇವಕಿ ಪುಷ್ಪವೇಣಿ ಕಕ್ಕಾಜೆ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಗೌರವಾನ್ವಿತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಶ್ರೀ ರಾಮಲಿಂಗೇಗೌಡ ಅವರು, ಚಿಕ್ಕಬಳ್ಳಾಪುರವು ಗುಡ್ಡಗಾಡು ಪ್ರದೇಶಗಳಿಗೆ ಹೆಸರುವಾಸಿಯಾಗಿದ್ದರೂ, ಜಿಲ್ಲೆಯಲ್ಲಿ ತುಲನಾತ್ಮಕವಾಗಿ ಕಡಿಮೆ ಮಳೆಯಾಗುತ್ತದೆ ಎಂದು ಉಲ್ಲೇಖಿಸಿದರು.

ಮಣ್ಣಿನ ಸಂರಕ್ಷಣೆ, ಮಳೆ ಪ್ರಮಾಣ ಸುಧಾರಣೆ ಮತ್ತು ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡುವುದು ಅತ್ಯಗತ್ಯ ಎಂಬುವ ಕುರಿತು ಒತ್ತು ನೀಡಿದರು. ಪರಿಸರ ಜಾಗೃತಿ ಮೂಡಿಸುವಲ್ಲಿ ಮತ್ತು ಈ ಉದಾತ್ತ ಕಾರ್ಯಕ್ಕೆ ಸಕ್ರಿಯವಾಗಿ ಕೊಡುಗೆ ನೀಡುತ್ತಿರುವ ಈಶ ಔಟ್‌ರೀಚ್ ಸ್ವಯಂಸೇವಕರ ಶ್ರಮವನ್ನು ಅವರು ಶ್ಲಾಘಿಸಿದರು.

ಈಶ ಔಟ್‌ರೀಚ್‌ನ ಸಂಯೋಜಕ ಸ್ವಾಮಿ ಲವನ ಅವರು ಮಣ್ಣಿನ ಆರೋಗ್ಯ, ಪೋಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿಗಳೊಂದಿಗೆ ಆಸಕ್ತಿದಾಯಕ ಸಂಗತಿಯೊಂದನ್ನು ಹಂಚಿಕೊಂಡ ಅವರು, ಒಂದು ಚಮಚೆ ಆರೋಗ್ಯಕರ ಮಣ್ಣಿನಲ್ಲಿ 8 ಶತಕೋಟಿಗೂ ಹೆಚ್ಚು ಸೂಕ್ಷ್ಮಜೀವಿಗಳಿರುತ್ತವೆ ಎಂದು ವಿವರಿಸಿದರು,

ಮಣ್ಣನ್ನು ರಕ್ಷಿಸುವ ಮತ್ತು ಅದನ್ನು ಫಲವತ್ತಾಗಿಸುವ ಅಗತ್ಯದ ಮಹತ್ತ್ವವನ್ನು ತಿಳಿಸಿದರು. ಮರಿ ಸಸಿಗಳನ್ನು ಹೆಮ್ಮರಗಳನ್ನಾಗಿ ಪೋಷಿಸಲು ಸಾಲುಮರದ ತಿಮ್ಮಕ್ಕ ಅವರ (ಕರ್ನಾಟಕದ ಪರಿಸರವಾದಿ, ‘ವೃಕ್ಷಮಾತೆ’ ಎಂದೇ ಖ್ಯಾತರಾದವರು) ಜೀವನವು ಪ್ರತಿಯೊಬ್ಬರಿಗೂ ಹೇಗೆ ಪ್ರೇರಣೆಯಾಗಿದೆ ಎಂಬುದನ್ನು ಅವರು ಹಂಚಿಕೊಂಡರು.

ವಕೀಲರು ಹಾಗೂ ಈಶ ಸ್ವಯಂಸೇವಕಿ ಪುಷ್ಪವೇಣಿ ಕಕ್ಕಾಜೆ ಅವರು ಸದ್ಗುರುಗಳ ನೇತೃತ್ವದ ‘ಮಣ್ಣು ಉಳಿಸಿ’ ಮತ್ತು ‘ಕಾವೇರಿ ಕೂಗು’ ಸೇರಿದಂತೆ ವಿವಿಧ ಪರಿಸರ ಅಭಿಯಾನಗಳ ಬಗ್ಗೆ ಮಾತನಾಡಿದರು.

ಈ ಅಭಿಯಾನಗಳ ಪ್ರಭಾವ ಹಾಗೂ ಸದ್ಗುರು ಸನ್ನಿಧಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೈಗೊಳ್ಳಲಾಗುತ್ತಿರುವ ಪರಿಸರ ಉಪಕ್ರಮಗಳ ಕುರಿತು ಅವರು ಉಲ್ಲೇಖಿಸಿದರು.’

ಹಸಿರು ಶಾಲೆ’ ಯೋಜನೆಯು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 1,800 ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಮೂಲಕ 35,000 ಕ್ಕೂ ಹೆಚ್ಚು ಸಸಿಗಳನ್ನು ನೆಡಲು ಅನುವು ಮಾಡಿಕೊಡಲಿದ್ದು, ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸುತ್ತಮುತ್ತಲಿನ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತದೆ.

ಈಶ ಔಟ್‌ರೀಚ್ ಕುರಿತುಈಶ ಔಟ್‌ರೀಚ್ ಎಂಬುದು ಈಶ ಸಂಸ್ಥೆಯ ಸಾಮಾಜಿಕ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗವಾಗಿದೆ. ಇದು ಶಿಕ್ಷಣ, ಪರಿಸರ, ಆರೋಗ್ಯ, ಕ್ರೀಡೆ ಮತ್ತು ಸುಸ್ಥಿರ ಅಭಿವೃದ್ಧಿಯ ಉಪಕ್ರಮಗಳ ಮೂಲಕ ಗ್ರಾಮೀಣ ಜನರ ಆರೋಗ್ಯ, ಯೋಗಕ್ಷೇಮ ಮತ್ತು ಜೀವನೋಪಾಯವನ್ನು ಸುಧಾರಿಸಲು ಶ್ರಮಿಸುತ್ತಿದೆ.

‘ಹಸಿರು ಶಾಲೆ’ ಯೋಜನೆಯು ಅದರ ಪ್ರಮುಖ ಪರಿಸರ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

WhatsApp

Join Now

Telegram

Join Now

Instagram

Join Now