ವಿಜಯ ದರ್ಪಣ ನ್ಯೂಸ್…
ಎರಡನೇ ಆಷಾಢ ಶುಕ್ರವಾರವು ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದ ಸಂಸದ ಸುನಿಲ್ ಬೋಸ್


ತಾಂಡವಪುರ ಜುಲೈ 24 ಇತಿಹಾಸ ಪ್ರಸಿದ್ಧವುಳ್ಳ ಆದಿಶಕ್ತಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಚಾಮುಂಡಿ ಬೆಟ್ಟಕ್ಕೆ ಎರಡನೇ ಆಶಾಡ ಶುಕ್ರವಾರದ ಪ್ರಯುಕ್ತ ಎಂದು ಕೂಡ ಬೆಟ್ಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಚಾಮರಾಜನಗರ ಲೋಕಸಭಾ ಸದಸ್ಯ ಸಂಸದ ಸುನಿಲ್ ಬೋಸ್ ರವರು ಚಾಮುಂಡೇಶ್ವರಿ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿ ನಾಡಿನ ಜನತೆಗೆ ದೇವಿ ಒಳಿತನ್ನು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು
ಈ ವಾರವು ಸಹ ಚಾಮುಂಡೇಶ್ವರಿ ದರ್ಶನ ಪಡೆಯುವುದಕ್ಕೆ ಬೆಟ್ಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬಂದು ಪೂಜೆ ಸಲ್ಲಿಸಿ ದಿವ್ಯ ದರ್ಶನ ಪಡೆದುಕೊಂಡರು
ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಅಧಿಕಾರಿಗಳು ಪೊಲೀಸ್ ಇಲಾಖೆ ಜಿಲ್ಲಾಡಳಿತ ಮುಂಜಾಗೃತ ಕ್ರಮ ಕೈಗೊಂಡು ಭಕ್ತಾದಿಗಳು ಸುರಳಿತವಾಗಿ ದೇವಿಯ ದರ್ಶನ ಪಡೆಯಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಿದ್ದರು
ಸಂಸದ ಸುನಿಲ್ ಬೋಸ್ ರವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ರೈತಪಿಗರಕ್ಕೆ ಭಕ್ತರಿಗೆ ಜನತೆಗೆ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಮತ್ತು ಈ ಬಾರಿ ವರುಣದೇವ ಕೃಪ ತೋರದ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳಲ್ಲಿ ನೀರಿನ ಅಭಾವ ಕಾಣತೊಡಗಿದ್ದು ಈ ನೀರಿನ ಅಭಾವವನ್ನು ನೀಗಿಸಲು ವರುಣದೇವನ ಕೃಪ ತೋರಲಿ ಎಂದು ದೇವಿಯಲ್ಲಿ ಬೇಡಿಕೆ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನೆ ಸಮಿತಿಯ ಮಾಜಿ ಅಧ್ಯಕ್ಷ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹೆಜ್ಜಿಗೆ ಆರ್ ಇಂದನ್ ಬಾಬು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೆ ಬಿ ಸ್ವಾಮಿ ಬುಲೆಟ್ ಮಹಾದೇವಪ್ಪ ಗಿರೀಶ್ ಅರ್ಧನಹಳ್ಳಿ ನಂಜುಂಡಸ್ವಾಮಿ ಗುತ್ತಿಗೆದಾರ ಹೆಜ್ಜೆಗೆ ರವಿಕುಮಾರ್ ಮುಖಂಡರಾದ ಭಾಸ್ಕರ್ ಗೋಪಾಲಕೃಷ್ಣ ಪುಟ್ಟಣ್ಣ ತಾಲೂಕು ಕುರುಬ ಸಮಾಜದ ಮುಖಂಡ ಕೆಂಪಣ್ಣ ಸೇರಿದಂತೆ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು










