ವಿಜಯ ದರ್ಪಣ ನ್ಯೂಸ್…..
“ತದ್ವಿರುದ್ಧ”‘ ಸಿನಿಮಾದ ಪ್ರಚಾರ ಅಭಿಯಾನವು ಶಿಡ್ಲಘಟ್ಟ ತಾಲ್ಲೂಕಿನ ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಬಳಿ ಅದ್ಧೂರಿಯಾಗಿ ನಡೆಯಿತು

ಶಿಡ್ಲಘಟ್ಟ : ಒಬ್ಬ ವ್ಯಕ್ತಿಯು ಹೊರ ನೋಟಕ್ಕೆ ಒಳ್ಳೆಯವನಂತೆ ಕಾಣಿಸಿಕೊಂಡರೂ, ಆತನ ಒಳಗಿನಗುಣಗಳು ಸಂದರ್ಭಕ್ಕೆ ತಕ್ಕಂತೆ ಹೇಗೆ ಬದ ಲಾಗುತ್ತವೆ ಹಾಗೂ ಒಳ್ಳೆಯತನಕ್ಕೆ ತದ್ವಿರುದ್ಧವಾಗಿ ಹೇಗೆ ತಿರುಗಿಬೀಳುತ್ತವೆ ಎಂಬುದನ್ನು ಈ ಸಿನಿಮಾ ದಲ್ಲಿ ಅತ್ಯಂತ ಕುತೂಹಲಕಾರಿಯಾಗಿ ತೋರಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಕೊತ್ತನೂರು ರವಿಚಂದ್ರ ತಿಳಿಸಿದರು.
ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ನೂತನ ಸಸ್ಪೆನ್ಸ್ ಹಾಗೂ ಸೈಕಲಾಜಿಕಲ್ ಥಿಲ್ಲರ್ ‘”ತದ್ವಿರುದ್ಧ”‘ ಸಿನಿಮಾ ದ ಪ್ರಚಾರ ಅಭಿಯಾನವು ಶಿಡ್ಲಘಟ್ಟ ತಾಲ್ಲೂಕಿನ ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಬಳಿ ಅದ್ಧೂರಿಯಾಗಿ ನಡೆಯಿತು.
ಚಿತ್ರದ ಪ್ರಮುಖ ಆಕರ್ಷಣೆಗಳು & ವಿವರ: ತಾರಾಗಣ: ಕೊತ್ತನೂರು ಗ್ರಾಮದ ದಿವಂಗತ ಕೆ.ಎಂ. ರಾಮಯ್ಯ-ರತ್ನಮ್ಮ ಅವರ ಪುತ್ರ ಮುರುಳಿಕುಮಾರ್ (ವಿಕ್ರಮ್ ರಾಮಯ್ಯ) ನಾಯಕನಾಗಿ ಅಭಿನಯಿಸಿದ್ದು, ಉಡುಪಿಯ ಐಶ್ವರ್ಯ ಶೆಟ್ಟಿ ನಾಯಕಿಯಾಗಿದ್ದಾರೆ. ಹಿರಿಯ ನಟ ಸುಚೇಂದ್ರ ಪ್ರಸಾದ್, ಸುಮನಾ ರಂಗ ನಾಥ್ ಹಾಗೂ ಹಲವು ಹಾಸ್ಯ ನಟರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಮನುಷ್ಯನ ವ್ಯಕ್ತಿತ್ವದ ಬದಲಾವಣೆಗಳು ಮತ್ತು ಅಪರಾಧಗಳನ್ನು ಪತ್ತೆಹಚ್ಚಲು ಪೊಲೀ ಸ್ ಇಲಾಖೆಯು ಮಾಡುವ ಪ್ಲಾನ್ಗಳು ಚಿತ್ರದ ಮುಖ್ಯ ಆಕರ್ಷಣೆಯಾಗಿದೆ, ಚಿತ್ರೀಕರಣ & ವೆಚ್ಚ ಕಳೆದ ಮೂರು ವರ್ಷಗಳಿಂದ ಸಕಲೇಶಪುರ ಸುತ್ತಮುತ್ತ ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು ,ಇಡೀ ಸಿನಿಮಾದಲ್ಲಿ ಕೇವಲ ಒಂದು ಹಾಡು ಮಾತ್ರ ಇದೆ ಕುಟುಂಬ ಸಮೇತರಾಗಿ ಕುಳಿತು ನೋಡಬಹುದಾದ ಅತ್ಯುತ್ತಮ ಚಿತ್ರ ಇದಾಗಿದೆ, ಈಗಾಗಲೇ ಕುಂದಾಪುರ ಹಾಗೂ ಬೆಂಗಳೂರಿನಲ್ಲಿ ನಡೆಸಲಾದ ಪ್ರೀಮಿಯರ್ ಶೋಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನ 22 ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ ಸುಮಾರು 80 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಶ್ರೀವೆಂಕಟೇಶ್ವರ ಚಿತ್ರಮಂದಿರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಈ ತಿಂಗಳು 31ರ ಶುಕ್ರವಾರ ದಂದು ಚಿತ್ರ ಅಧಿಕೃತವಾಗಿ ತೆರೆಕಂಡಿದೆ .ಕ್ಷೇತ್ರದ ಕನ್ನಡಿ ಗರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಚಿತ್ರಮಂ ದಿರಕ್ಕೆ ಬಂದು ವೀಕ್ಷಿಸಿ, ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಬೇಕು,ಎಂದು ನಿರ್ಮಾಪಕ ರವಿಚಂದ್ರ ಮನವಿ ಮಾಡಿದರು.
‘ತದ್ವಿರುದ್ಧ’ ಚಿತ್ರದ ನಂತರ ‘ಚಕ್ರಮ್’ ಎಂಬ ಮತ್ತೊಂದು ಸಿನಿಮಾ ಮುಂದಿನ 3 ತಿಂಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಇದರ ಜೊತೆಗೆ ಇನ್ನು ಎರಡು ಪ್ರಾಜೆಕ್ಟ್ಗಳು ರೆಡಿಯಾಗಿವೆ ,ಮುಂದಿನ ದಿನಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ರವಿಚಂದ್ರ ಸ್ಪಷ್ಟ ಪಡಿಸಿದರು.
ಈ ಪ್ರಚಾರ ಕಾರ್ಯಕ್ರಮದಲ್ಲಿ ವೆಂಕಟೇಶ್, ಶ್ರೀ
ವೆಂಕಟೇಶ್ವರ ಚಿತ್ರಮಂದಿರದ ಮಾಲೀಕರಾದ ಎಸ್. ಪ್ರಕಾಶ್,ರಾಜೇಶ್, ಭರತ್,ಮಂಜುನಾಥ್, ವೇಣು, ಶಶಿಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.









