--Ads--

ಮೇಲೂರಿನ ಸುಪ್ರಸಿದ್ಧ ಗ್ರಾಮದೇವತೆ ಶ್ರೀ ಗಂಗಮ್ಮದೇವಿಯ ಸನ್ನಿಧಾನದಲ್ಲಿ ನವಚಂಡಿಕಾಯಾಗ

On: August 1, 2026 6:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮೇಲೂರಿನ ಸುಪ್ರಸಿದ್ಧ ಗ್ರಾಮದೇವತೆ ಶ್ರೀ ಗಂಗಮ್ಮದೇವಿಯ ಸನ್ನಿಧಾನದಲ್ಲಿ ನವಚಂಡಿಕಾಯಾಗ

ಶಿಡ್ಲಘಟ್ಟ : ಪ್ರಸಿದ್ಧ ಗ್ರಾಮದೇವತೆ ಶ್ರೀ ಗಂಗಮ್ಮದೇವಿಯ ಸನ್ನಿಧಾನದಲ್ಲಿ ಗಂಗಾದೇವಿ ಭಕ್ತಮಂಡಳಿ ಹಾಗೂ ಗಂಗಾದೇವಿ ಧರ್ಮದರ್ಶಿ ಟ್ರಸ್ಟ್‌ನಿಂದ ಆರನೇ ವರ್ಷದ ನವಚಂಡಿಕಾಯಾಗವನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ತಾಲ್ಲೂಕಿನ ಮೇಲೂರಿನ ಗಂಗಾದೇವಿ ದೇವಾಲಯದ ಆವರಣದಲ್ಲಿ ಎರಡು ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಭಕ್ತರು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದರು.

ವೇದಪಂಡಿತರ ಸಾನ್ನಿಧ್ಯದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು ,ಗಣಪತಿ ಪೂಜೆ, ನವಗ್ರಹ ಪೂಜೆ, ದುರ್ಗಾ ಹೋಮ, ವಾಸ್ತು ಪೂಜೆ, ರುದ್ರ ಪಾರಾಯಣ, ವಿಷ್ಣು ಪಾರಾಯಣ, ಗಂಗೆ ಪೂಜೆ, ಶ್ರೀದುರ್ಗಾ ದೀಪ ನಮಸ್ಕಾರ, ದುರ್ಗಾ ಪೂಜೆ, ಸಪ್ತಶತಿ ಪಾರಾಯಣ, ಗೋಪೂಜೆ, ದೀಪಾರಾಧನೆ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಶುಕ್ರವಾರ ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನ ಆರಂಭಗೊಂಡವು ಗೋಪೂಜೆ, ಬಲಿಪೂಜೆ, ನವಚಂಡಿಕಾ ಹೋಮ, ಮೂಲದೇವರಿಗೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನೆರವೇರಿತು. ಯಾಗ, ಹೋಮದ ಸಂದರ್ಭದಲ್ಲಿ ಗ್ರಾಮದ ಸಮೃದ್ಧಿ, ಉತ್ತಮ ಮಳೆ, ಬೆಳೆ ಹಾಗೂ ಸರ್ವಜನರ ಸುಖ-ಶಾಂತಿ, ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಆರ್.ಕೆ.ರಾಮಕೃಷ್ಣಪ್ಪ, ಎಸ್.ಆರ್.ಶ್ರೀನಿವಾಸಮೂರ್ತಿ,ಪ್ರಗತಿಪರ ರೈತ ಬಿ.ಎನ್‌.ಸಚಿನ್‌,ಅಶ್ವತ್ಥಪ್ಪ,ಆರ್.ಎ.ಉಮೇಶ್, ರೂಪೇಶ್, ರಮೇಶ್ , ಸುದರ್ಶನ್, ಸುಧೀರ್, ಗೋಪಾಲ್, ಶ್ರೀ ನಿವಾಸ್, ಶಿವಕುಮಾ‌ರ್, ಲಕ್ಷ್ಮೀನಾರಾಯಣ್, ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

“ತದ್ವಿರುದ್ಧ”‘ ಸಿನಿಮಾದ ಪ್ರಚಾರ ಅಭಿಯಾನವು ಶಿಡ್ಲಘಟ್ಟ ದ ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಬಳಿ ಅದ್ಧೂರಿಯಾಗಿ ನಡೆಯಿತು

ವರದನಾಯಕನಹಳ್ಳಿ ಗ್ರಾಮದ ರೈತ ಜಗದೀಶ್‌ ಅವರ ಹಿಪ್ಪುನೇರಳೆ ತೋಟಕ್ಕೆ ಅಪರಿಚಿತರು ವಿಷಕಾರಿ ರಾಸಾಯನಿಕ ಸಿಂಪಡಣೆ ಸೊಪ್ಪಿಗೆ ಹಾನಿ !

ರೈತರಿಗ ನೀರು ಕೊಡಿ, ರೈತರು ಎಲ್ಲವನ್ನೂ  ಸಮಾಜಕ್ಕೆ ಕೊಡಬಲ್ಲಷ್ಟು ಶಕ್ತರು : ಶ್ರೀ ಶ್ರೀ ಮಂಗಳಾನಂದನಾಥಸ್ವಾಮಿ

ಮನೆಗಳ್ಳತನ ಆಂಧ್ರದ ಕುಖ್ಯಾತ ಕಳ್ಳ ಖೆಡ್ಡಾಕ್ಕೆ ,2 ಲಕ್ಷ 80 ಸಾವಿರ ರೂ.ಗಳ ಮೌಲ್ಯದ ಚಿನ್ನ-ಬೆಳ್ಳಿ ಜಪ್ತಿ!

ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮೊದಲ ಸ್ಥಾನಕ್ಕೇರಿಸುವ ಗುರಿಯನ್ನು ಶಿಕ್ಷಕರು ಸಾಕಾರಗೊಳಿಸಿ : ಶಾಸಕ ಬಿ.ಎನ್.ರವಿಕುಮಾ‌ರ್

ಮಳ್ಳೂರಿನ ಗೌರಮ್ಮ ಮಲ್ಲೇಶೆಟ್ಟಿ ಆರೋಗ್ಯ ಕೇಂದ್ರಕ್ಕೆ ಅಮೇರಿಕಾ ವಿಜ್ಞಾನಿಗಳು ಹಾಗು ಸಚಿವ ಕೆ.ಎಚ್.ಮುನಿಯಪ್ಪ ಭೇಟಿ