--Ads--

ಶಿಡ್ಲಘಟ್ಟ ಪಿ.ಎಲ್‌.ಡಿ ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆ ಸೆಪ್ಟಂಬರ್ -19ಕ್ಕೆ

On: September 16, 2026 5:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶಿಡ್ಲಘಟ್ಟ ಪಿ.ಎಲ್‌.ಡಿ ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆ ಸೆಪ್ಟಂಬರ್ -19ಕ್ಕೆ

ಶಿಡ್ಲಘಟ್ಟ : ಸಹಕಾರಿ ಕಾಯ್ದೆ-1959ರ ಅನ್ವಯ ಐದು ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಎರಡು ಮಹಾಸಭೆಗಳಿಗೆ ಸದಸ್ಯರು ಕಡ್ಡಾಯವಾಗಿ ಹಾಜರಾಗಬೇಕು ಅಲ್ಲದೆ, ಎರಡು ವರ್ಷ ಬ್ಯಾಂಕ್ ನೊಂದಿಗೆ ವ್ಯವಹಾರ ನಡೆಸಿರಬೇಕು ಆದ್ದರಿಂದ ಅರ್ಹ ಎಲ್ಲಾ ಸದಸ್ಯರು ಮಹಾಸಭೆಗೆ ತಪ್ಪದೆ ಹಾಜರಾಗಬೇಕು ಎಂದು ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಜಿ.ಸುರೇಶ್
ಮನವಿ ಮಾಡಿದರು.

ನಗರದ ಪಿ.ಎಲ್.ಡಿ.ಬ್ಯಾಂಕ್ ಕಛೇರಿಯಲ್ಲಿ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ
ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ
(ಪಿ.ಎಲ್‌.ಡಿ ಬ್ಯಾಂಕ್) 88ನೇ ಸಹಕಾರಿ ವರ್ಷದ ಸರ್ವ ಸದಸ್ಯರ ಮಹಾಸಭೆ ಸೆ-19 ರಂದು ಬೆಳಿಗ್ಗೆ ,11 ಗಂಟೆಗೆ ಬ್ಯಾಂಕ್ ಆವರಣದಲ್ಲಿ ನಡೆಯಲಿದೆ ,ಶಾಸಕ ಬಿ.ಎನ್. ರವಿಕುಮಾ‌ರ್ ಅವರು ಮಹಾಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಮಹಾಸಭೆಯಲ್ಲಿ 2025-26ನೇ ಸಾಲಿನ ಆಡಳಿತ ಮಂಡಳಿಯ ವರದಿ ಓದಿ ಅಂಗೀಕರಿಸುವುದು, ಜಮಾ-ಖರ್ಚು, ಲಾಭ-ನಷ್ಟ, ಆಸ್ತಿ-ಜವಾಬ್ದಾರಿ ತಃಖ್ಯೆ ಹಾಗೂ ಅನುಪಾಲನಾ ವರದಿಗೆ ಅನುಮೋದನೆ ಪಡೆಯುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ,2026-27ನೇ ಸಾಲಿನ ಅಂದಾಜು ಬಜೆಟ್ ಗೂ ಸಭೆಯಲ್ಲಿ ಮಂಜೂರಾತಿ ಪಡೆಯಲಾಗುವುದು ಎಂದರು.

ಬ್ಯಾಂಕ್ ನಿಂದ ಪಡೆದ ಅಲ್ಪಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ರೈತರು ಸಕಾಲದಲ್ಲಿ ಮರುಪಾವತಿಸಬೇಕು, ಸುಮಾರು 15 ಕೋಟಿ ರೂ.ಗಳು ಸಾಲ ಬಾಕಿ ಉಳಿದಿದ್ದು, ಇದರಿಂದ ಬ್ಯಾಂಕ್ ಗೆ ಹೊಸ ಸಾಲ ನೀಡುವ ಸಾಮರ್ಥ್ಯ ಕುಂಠಿತವಾಗಿದೆ ಈಗಾಗಲೇ ಸಾಲ ಪಡೆದಿರುವ ರೈತರು ಸಕಾಲದಲ್ಲಿ ಮರುಪಾವತಿ ಮಾಡಿ, ಶೇ 3ರ ಬಡ್ಡಿದರದಲ್ಲಿ ಮರು ಸಾಲ ಪಡೆಯುವುದರೊಂದಿಗೆ ಇತರ ರೈತರಿಗೆ ಸಾಲ ನೀಡಲು ಸಹಕರಿಸಬೇಕು ಎಂದು ಕೋರಿದರು.

ಕೃಷಿ ಸಾಲ ಪಡೆದು ಮರುಪಾವತಿ ಮಾಡದೇ ಸುಸ್ತಿದಾರರಾಗಿರುವ ರೈತರು ಅಡಮಾನವಿಟ್ಟಿರುವ ಜಮೀನಿನ ಪಹಣಿಯಲ್ಲಿ ಮಾಲೀಕ ರೈತನ ಹೆಸರಿನ ಬದಲಿಗೆ ಬ್ಯಾಂಕ್ ಹೆಸರನ್ನು ನಮೂದಿಸುವ ಕ್ರಮ ಕೈಗೊಳ್ಳಲಾಗುವುದು ಇದರಿಂದ ಸಂಬಂಧಿಸಿದ ಜಮೀನಿನ ಮಾರಾಟ, ಖರೀದಿ ಹಾಗೂ ಸಾಲ ಪಡೆಯುವಿಕೆ ಸೇರಿದಂತೆ ವಿವಿಧ ವ್ಯವಹಾರಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.

ಜಮೀನಿನ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ತಮ್ಮ ಜಮೀನು ಉಳಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಿ.ಎನ್.ರಾಮಚಂದ್ರ , ನಿರ್ದೇಶಕರಾದ ತಿಮ್ಮನಾಯಕನಹಳ್ಳಿ ಆನಂದ್,ಭೈರಪ್ಪ ಕೆ.ಪಿ.ಕಿಶೋರ್,, ನಾಗರಾಜ್, ವ್ಯವಸ್ಥಾಪಕ ಜಿ.ಆರ್. ವೇಣುಗೋಪಾಲ್‌, ಟಿ.ಸಿ.ಶ್ಯಾಮಲ, ಎ. ಪ್ರವೀಣ್‌ಕುಮಾರ್, ಡಿ.ಚಂದ್ರಶೇಖ‌ರ್ ಹಾಜರಿದ್ದರು.

WhatsApp

Join Now

Telegram

Join Now

Instagram

Join Now