ವಿಜಯ ದರ್ಪಣ ನ್ಯೂಸ್....
ಪೌರಕಾರ್ಮಿಕರ ದಿನಾಚರಣೆ ಸ್ವಚ್ಛತೆಯ ಸೈನಿಕರಿಗೆ ಅಭಿನಂದನೆಗಳು
ಕೊಡಗಿನ ಪ್ರತಿಯೊಂದು ಊರಿನ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪರಿಶ್ರಮವಿದೆ!

ಕೊಡಗು: ಒಂದು ನಗರ ಸುಂದರವಾಗಿ ಕಾಣಬೇಕಾದರೆ ಕೇವಲ ಉತ್ತಮ ರಸ್ತೆಗಳು ಕಟ್ಟಡಗಳು ಮತ್ತು ಉದ್ಯಾನವನಗಳು ಸಾಕಾಗುವುದಿಲ್ಲ ಅದರ ಸ್ವಚ್ಛತೆಯನ್ನು ಕಾಪಾಡುವ ಪರಿಶ್ರಮದ ಕೈಗಳು ಬೇಕು ಆ ಕೈಗಳೇ ನಮ್ಮ ಪೌರಕಾರ್ಮಿಕರ ಕೈಗಳು
ನಾವು ಬೆಳಗ್ಗೆ ಎದ್ದು ಸ್ವಚ್ಛವಾದ ರಸ್ತೆಯನ್ನು ನೋಡುತ್ತೇವೆ. ಸ್ವಚ್ಛವಾದ ಪರಿಸರದಲ್ಲಿ ಬದುಕುತ್ತೇವೆ ಸ್ವಚ್ಛತೆಯ ಹಿಂದೆ ಮುಂಜಾನೆಯೇ ಎದ್ದು ಬಿಸಿಲು–ಮಳೆ ಎನ್ನದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ನಿಮ್ಮ ಪರಿಶ್ರಮವಿದೆ
ನಿಮ್ಮ ಸೇವೆ ಕೇವಲ ಒಂದು ಉದ್ಯೋಗವಲ್ಲ ಅದು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಪರಿಸರವನ್ನು ರಕ್ಷಿಸುವ ಸೇವೆ ಮತ್ತು ನಮ್ಮ ಊರಿನ ಗೌರವವನ್ನು ಹೆಚ್ಚಿಸುವ ಮಹತ್ತರ ಕಾರ್ಯ
ಕುಶಾಲನಗರದ ಪೌರಕಾರ್ಮಿಕರಿಗೆ ವಿಶೇಷ ಅಭಿನಂದನೆ
ಕುಶಾಲನಗರದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೊಡಗು ಜನ ಅಭಿವೃದ್ಧಿ ಸಮಿತಿಯ ಗ್ರೂಪ್ ಮೂಲಕ ಸಾರ್ವಜನಿಕರು ನಮ್ಮ ಗಮನಕ್ಕೆ ತಂದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಲುಪಿಸಿದಾಗ ಶೀಘ್ರವಾಗಿ ಸ್ಪಂದಿಸಿ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವಲ್ಲಿ ಪೌರಕಾರ್ಮಿಕರು ತೋರಿಸುತ್ತಿರುವ ಕರ್ತವ್ಯನಿಷ್ಠೆ ನಿಜಕ್ಕೂ ಪ್ರಶಂಸನೀಯ
ನಗರದ ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿ ನಗರ ಪುರಸಭೆ ಅಧಿಕಾರಿಗಳಾದ ಗಿರೀಶ್ ಸರ್ ಅವರ ಆದೇಶದ ಮೇರೆಗೆ ಹೆಲ್ತ್ ಇನ್ಸ್ಪೆಕ್ಟರ್ ಉದಯ್ ಸರ್ ಅವರ ಮಾರ್ಗದರ್ಶನದಲ್ಲಿ ಸ್ಯಾನಿಟರಿ ಇನ್ಚಾರ್ಜ್ ಗಣೇಶ್ ಸರ್. ಬಣ್ಣಾರಿ ಸರ್.ಮೋಹನ್ ಸರ್. ಹಾಗೂ ಎಲ್ಲಾ ಪೌರಕಾರ್ಮಿಕ ಸಹೋದರ–ಸಹೋದರಿಯರು ಸಲ್ಲಿಸುತ್ತಿರುವ ಸೇವೆಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು
ಸಾರ್ವಜನಿಕರ ಸಮಸ್ಯೆ ನಿಮ್ಮ ಗಮನಕ್ಕೆ ಬಂದಾಗ ಅದನ್ನು ನಿರ್ಲಕ್ಷಿಸದೆ, ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿಯನ್ನು ತಮ್ಮ ಕರ್ತವ್ಯದ ಭಾಗವೆಂದು ಪರಿಗಣಿಸಿ ತಕ್ಷಣ ಸ್ಪಂದಿಸುವ ನಿಮ್ಮ ಸೇವಾ ಮನೋಭಾವಕ್ಕೆ ನಮ್ಮ ಗೌರವಪೂರ್ವಕ ನಮನಗಳು
ಈ ಅಭಿನಂದನೆ ಕುಶಾಲನಗರಕ್ಕೆ ಮಾತ್ರ ಸೀಮಿತವಲ್ಲ
ಮಡಿಕೇರಿ ನಗರದಿಂದ ಕುಶಾಲನಗರದವರೆಗೆ ಗೋಣಿಕೊಪ್ಪ ಪೊನ್ನಂಪೇಟೆ ವಿರಾಜಪೇಟೆಯಿಂದ ಸೋಮವಾರಪೇಟೆ ಕೊಡಗಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಪುರಸಭೆ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಪೌರಕಾರ್ಮಿಕರಿಗೂ ಈ ಅಭಿನಂದನೆ ಸಲ್ಲುತ್ತದೆ
ಕೊಡಗಿನ ಪ್ರತಿಯೊಂದು ಪಂಚಾಯಿತಿಯ ಅಧಿಕಾರಿಗಳು, ಪುರಸಭೆ–ನಗರಸಭೆಯ ಅಧಿಕಾರಿಗಳು ಆರೋಗ್ಯ ಮತ್ತು ಸ್ವಚ್ಛತಾ ವಿಭಾಗದ ಸಿಬ್ಬಂದಿ ಮೇಲ್ವಿಚಾರಕರು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಕಾರ್ಮಿಕ ಬಂಧು–ಬಾಂಧವರಿಗೂ ಕೊಡಗು ಜನ ಅಭಿವೃದ್ಧಿ ಸಮಿತಿಯ ಪರವಾಗಿ ಗೌರವಪೂರ್ವಕ ಅಭಿನಂದನೆಗಳು
ಕುಶಾಲನಗರದ ಸ್ವಚ್ಛತೆಗೆ ದುಡಿಯುವ ಕೈಗಳಾಗಲಿ
ಮಡಿಕೇರಿಯ ಸ್ವಚ್ಛತೆಗೆ ದುಡಿಯುವ ಕೈಗಳಾಗಲಿ
ಕೊಡಗಿನ ಗಡಿ ಭಾಗದ ಗ್ರಾಮಗಳ ಸ್ವಚ್ಛತೆಗೆ ದುಡಿಯುವ ಕೈಗಳಾಗಲಿ ಪ್ರತಿಯೊಂದು ಕೈಯಲ್ಲೂ ನಮ್ಮ ಕೊಡಗಿನ ಆರೋಗ್ಯ ಮತ್ತು ಭವಿಷ್ಯದ ಹೊಣೆಗಾರಿಕೆ ಇದೆ
ನಿಮ್ಮ ಪರಿಶ್ರಮಕ್ಕೆ ಗೌರವ ಇರಲಿ… ನಿಮ್ಮ ಸೇವೆಗೆ ಬೆಲೆ ಇರಲಿ…ಪೌರಕಾರ್ಮಿಕರ ಕೆಲಸ ಕೇವಲ ಸ್ವಚ್ಛತಾ ಕಾರ್ಯವಲ್ಲ
ಸಾರ್ವಜನಿಕ ಆರೋಗ್ಯದ ರಕ್ಷಣೆ
ಪರಿಸರದ ಸಂರಕ್ಷಣೆ: ನಗರದ ಗೌರವದ ರಕ್ಷಣೆ ಜನರ ನೆಮ್ಮದಿಗಾಗಿ ಮಾಡುವ ನಿಸ್ವಾರ್ಥ ಸೇವೆನೀವು ಕೆಲಸ ಮಾಡುವಾಗ ಬಹುಶಃ ಸಾವಿರಾರು ಜನರು ನಿಮ್ಮನ್ನು ಗಮನಿಸದೇ ಇರಬಹುದು ನಿಮ್ಮ ಸೇವೆಯ ಮಹತ್ವವನ್ನು ಸ್ವಚ್ಛವಾದ ಪ್ರತಿಯೊಂದು ರಸ್ತೆ ಸ್ವಚ್ಛವಾದ ಪ್ರತಿಯೊಂದು ಪರಿಸರ ಮತ್ತು ಆರೋಗ್ಯಕರವಾದ ಪ್ರತಿಯೊಂದು ವಾತಾವರಣವೂ ಪ್ರತಿದಿನ ಹೇಳುತ್ತಿದೆ
ನಿಮ್ಮ ಕೆಲಸದ ಬಗ್ಗೆ ಹೆಮ್ಮೆ ಇರಲಿ ನಿಮ್ಮ ಸೇವೆಯ ಬಗ್ಗೆ ಗೌರವ ಇರಲಿ ನಿಮ್ಮ ಕರ್ತವ್ಯದ ಬಗ್ಗೆ ಇನ್ನಷ್ಟು ಉತ್ಸಾಹ ಇರಲಿ ನೀವು ಸ್ವಚ್ಛಗೊಳಿಸುವ ಪ್ರತಿಯೊಂದು ಸ್ಥಳವೂ ನಮ್ಮ ಕೊಡಗಿನ ಭವಿಷ್ಯಕ್ಕೆ ನೀವು ನೀಡುತ್ತಿರುವ ಅಮೂಲ್ಯ ಕೊಡುಗೆ
ಸಾರ್ವಜನಿಕರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ನಮ್ಮ ಜವಾಬ್ದಾರಿ. ಅದಕ್ಕೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿ ಆ ಕಾರ್ಯವನ್ನು ನೆಲಮಟ್ಟದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ನಿಮ್ಮ ಪರಿಶ್ರಮಕ್ಕೆ ಸಮಾಜದ ಗೌರವ ಮತ್ತು ಅಭಿನಂದನೆ ಸದಾ ಇರಬೇಕು ನಾವು ಸಮಸ್ಯೆಗಳನ್ನು ತಿಳಿಸುತ್ತೇವೆ
ನೀವು ನಿಮ್ಮ ಸೇವೆಯ ಮೂಲಕ ಪರಿಹಾರದ ರೂಪದಲ್ಲಿ ಸ್ಪಂದಿಸುತ್ತೀರಿ
*ಈ ಉತ್ತಮ ಸಹಕಾರ ಮುಂದುವರಿಯಲಿ
*ಕುಶಾಲನಗರ ಇನ್ನಷ್ಟು ಸ್ವಚ್ಛವಾಗಲಿ
*ಮಡಿಕೇರಿ ಇನ್ನಷ್ಟು ಸುಂದರವಾಗಲಿ
*ಕೊಡಗಿನ ಪ್ರತಿಯೊಂದು ಊರು ಸ್ವಚ್ಛತೆ ಮತ್ತು ಆರೋಗ್ಯದಲ್ಲಿ ಇನ್ನಷ್ಟು ಮುನ್ನಡೆಯಲಿ ನಿಮ್ಮ ಸೇವೆಗೆ ನಮ್ಮ ಸಂಪೂರ್ಣ ಗೌರವ ಮತ್ತು ಬೆಂಬಲ ಸದಾ ಇರುತ್ತದೆ.ಕೊಡಗಿನ ಸ್ವಚ್ಛತೆಯ ಸೈನಿಕರಿಗೆ ಅನಂತ ಅಭಿನಂದನೆಗಳು
ಭಗವಂತನು ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ ದೀರ್ಘಾಯುಷ್ಯ ನೆಮ್ಮದಿ ಹಾಗೂ ಇನ್ನಷ್ಟು ಶಕ್ತಿ ನೀಡಲಿ ನಿಮ್ಮ ಸೇವಾ ಮನೋಭಾವ ಮತ್ತಷ್ಟು ಗಟ್ಟಿಯಾಗಲಿ ನಿಮ್ಮ ಪರಿಶ್ರಮಕ್ಕೆ ಇನ್ನಷ್ಟು ಗೌರವ ದೊರೆಯಲಿ
ಚಿಕ್ಕಂಡ ಪ್ರಭು ಮಾದಪ್ಪ
ಜಿಲ್ಲಾ ಅಧ್ಯಕ್ಷರು
ಕೊಡಗು ಜನ ಅಭಿವೃದ್ಧಿ ಸಮಿತಿ
ಸರ್ವ ಸದಸ್ಯರ ಪರವಾಗಿ
✍🏽ಎಂ.ಎಂ. ದಾವುದ್
ಸಂಸ್ಥಾಪಕರು
9945375180











