ವಿಜಯ ದರ್ಪಣ ನ್ಯೂಸ್….
ಯುವ ಜನತೆ ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಉತ್ತಮ ಜೀವನ ಹಾಳುಮಾಡಿಕೊಳ್ಳಬೇಡಿ : ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್

ಶಿಡ್ಲಘಟ್ಟ : ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವನ್ನು ಮಾಡಿದರೆ ಲೈಂಗಿಕ ಕಿರುಕುಳವನ್ನು ಕೊಟ್ಟರೆ ಪೋಕ್ಸ್ ಕಾಯ್ದೆಯಡಿ ಕೇಸು ದಾಖಲಾಗುತ್ತದೆ ಹಾಗೂ ಗಾಂಜಾ, ಚರಸು ಮುಂತಾದ ಡ್ರಗ್ಸ್ ಗಳನ್ನು ತೆಗೆದುಕೊಂಡು ಮಾದಕ ವಸ್ತುಗಳಿಗೆ ಬಲಿಯಾಗಬಾರದು ಎಂದು
ಆರಕ್ಷಕ ವೃತ್ತ ನಿರೀಕ್ಷಕರಾದ ಆನಂದ್ ಕುಮಾರ್ ತಿಳಿಸಿದರು.
ನಗರದ ಪದವಿಪೂರ್ವ ಕಾಲೇಜಿನಲ್ಲಿ ಎನ್ಎಸ್ಎಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾತನಾಡಿದರು.
ಯುವಜನತೆ ನೀವು ಈ ವಯಸ್ಸಿನಲ್ಲಿ ಹಲವಾರು ಕೆಟ್ಟ ಚಟಗಳಿಗೆ ಬಲಿಯಾಗಬಾರದು ಮತ್ತು ಹೆಣ್ಣು ಮಕ್ಕಳನ್ನು ಅಕ್ಕತಂಗಿಯರಂತೆ ಭಾವಿಸಬೇಕು ಅವರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳನ್ನು ಮಾಡಬಾರದು ,
18 ವರ್ಷ ವಯಸ್ಸಿನ ನಂತರ ನಿಮ್ಮ ದ್ವಿಚಕ್ರ ವಾಹನಗಳನ್ನು ಡ್ರೈವಿಂಗ್ ಲೈಸೆನ್ಸ್ ಪಡೆದು ಚಲಾಯಿಸಬೇಕು ಎಂದು ಹೇಳಿದರು.
ಎನ್ಎಸ್ಎಸ್ ಸೇವೆಯು ತುಂಬಾ ಉತ್ತಮವಾದದ್ದು ನಮ್ಮ ಸೇವೆಯನ್ನು ನಾವು ಸಮಾಜಕ್ಕಾಗಿ ಮೀಸಲಿಡಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ವಿಜಯಕುಮಾರ್ ಮಾತನಾಡಿ, ಮಧ್ಯ ವ್ಯಸನಿಗಳಾದರೆ ನಮ್ಮ ಜೀವನವು ಹೇಗೆ ಹಾಳಾಗುತ್ತದೆ ಹಾಗು ಅವಗಳಿಂದ ದೂರವಿದ್ದು ನಮ್ಮ ಆರೋಗ್ಯವನ್ನ ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಉತ್ತಮ ಆರೋಗ್ಯ ಹೊಂದುತ್ತಾ ಉತ್ತಮ ಸಮಾಜವನ್ನು ಹೇಗೆ ನಿರ್ಮಾಣ ಮಾಡಬೇಕೆಂದು ಸವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸಿ.ವೆಂಕಟಶಿವಾರೆಡ್ಡಿ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯದ ಎಚ್.ಸಿ.ಮುನಿರಾಜು,
ಉಪನ್ಯಾಸಕರಾದ ,ನರಸಿಂಹರೆಡ್ಡಿ, ಡಿ.ಲಕ್ಷ್ಮಯ್ಯ, ಶ್ರೀಕೃಷ್ಣಪರಮಾತ್ಮ,ಬಾಬಾ ಜಾನ್ ,ಇಬ್ರಾಹಿಂಸಾಬ್, ನಹಿದಬೇಗಂ,ಶ್ರೀಧರ್, ರಮೇಶ್,ಚಂದ್ರು, ನಾಗಾರ್ಜುನ್, ಸಾವಿತ್ರಮ್ಮ ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.











