ವಿಜಯ ದರ್ಪಣ ನ್ಯೂಸ್…..
ಗಾಂಧಿ ಸ್ಪರ್ಶಿಸಿದ ನೆಲವನ್ನು ಸಂರಕ್ಷಿಸಿ, ಪ್ರವಾಸೋದ್ಯಮವನ್ನಾಗಿ ಮಾಡಲಾಗುವುದು: ಶಾಸಕ ದರ್ಶನ್ ದೃವನಾರಾಯಣ್
ತಾಂಡವಪುರ ಅಕ್ಟೋಬರ್ 2:ಮಹಾತ್ಮ ಗಾಂಧೀಜಿಯವರು 1934ರ ಜನವರಿ 5ರಂದು ಮೈಸೂರು ಪ್ರವಾಸದ ಸಂದರ್ಭದಲ್ಲಿ ತಗಡೂರು, ಬದನವಾಳು ಮತ್ತು ನಂಜನಗೂಡಿಗೆ ಭೇಟಿ ನೀಡಿದ್ದ ಸ್ಥಳ ಯಥಾವತ್ತಾಗಿ ಸಂರಕ್ಷಿಸಿ ಅದನ್ನು ಪ್ರವಾಸೋದ್ಯಮನವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ಅವರು ಇಂದು ಗಾಂಧಿ ಜಯಂತಿಯ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡುತಾಲ್ಲೂಕು ಆಡಳಿತ ಕಛೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಜನ್ಮದಿನಾಚರಣೆಯನ್ನು ಆಚರಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ಮಹಾತ್ಮ ಗಾಂಧಿಯವರು ಮೈಸೂರು ಪ್ರವಾಸಿ ಸಂದರ್ಭದಲ್ಲಿ ಐತಿಹಾಸಿಕ ಬದನವಾಳು ತಗಡೂರು ಮತ್ತು ನಂಜನಗೂಡಿಗೆ ಭೇಟಿ ನೀಡಿದರು. ಗ್ರಾಮದಲ್ಲಿ ಖಾದಿ ಗ್ರಾಮೋದ್ಯೋಗ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಖಾದಿ ಗ್ರಾಮೋದ್ಯೋಗವನ್ನು ಸ್ಥಾಪಿಸಿದರು.
ಈ ಅವಿಸ್ಮರಣೀಯ ಸಂದರ್ಭವನ್ನು ಮುಂದುವರಿಸಲು ಅವರು ಮೆಟ್ಟಿದ ಮಣ್ಣಿನಲ್ಲಿ ಯಥವತ್ತಾಗಿ ಕಾದಿ ಗ್ರಾಮೋದ್ಯೋಗವನ್ನು ಮುಂದುವರಿಸಿ ಆ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಮುಂದಿನ ಯುವ ಪೀಳಿಗೆಗೆ ಮಹಾತ್ಮ ಗಾಂಧೀಜಿ ಅವರು ನಂಜನಗೂಡಿಗೆ ಭೇಟಿ ನೀಡಿದ ಸಂದರ್ಭ ಮತ್ತು ಅದರ ಉದ್ದೇಶಗಳ ಬಗ್ಗೆ ಬೃಹದಾಕಾರದಲ್ಲಿ ಕೈಬರಹಗಳನ್ನು ಬರೆಸಲಾಗುವುದು ಎಂದರು.
ಮಹಾತ್ಮ ಗಾಂಧಿಯವರು ಪ್ರತಿ ಗ್ರಾಮವನ್ನು ಅಭಿವೃದ್ಧಿಗೊಳಿಸುವುದರ ಜೊತೆಗೆ ಗ್ರಾಮಗಳು ಸ್ವಾವಲಂಬಿಗಳಾಗಿ ಬದುಕಬೇಕು ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆಗಳು. ಗುಡಿ ಕೈಗಾರಿಕೆಗಳಿಂದ ಗ್ರಾಮೀಣಾಭಿವೃದ್ಧಿಯಾಗುತ್ತದೆ ಎಂಬುವುದರಲ್ಲಿ ಬಲವಾದ ನಂಬಿಕೆಯನ್ನು. ಈ ನೆಲೆಯಲ್ಲಿ ಯುವಕರ ಆಲೋಚನೆ ಹಿರಿಯರ ಮಾರ್ಗದರ್ಶನದಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲಾಗುವುದು.
ಭಾರದ್ ಜೋಡ ಯಾತ್ರೆ ಸಂದರ್ಭದಲ್ಲಿ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರ ಮಾತಿನಂತೆ ಬದನಾಳು ಗ್ರಾಮವನ್ನು ಪ್ರವಾಸ ಉದ್ಯಮವನ್ನಾಗಿ ಮಾರ್ಪಡು ಮಾಡಲಾಗುವುದು ಗಾಂಧೀಜಿಯವರು ಬಂದು ಹೋದ ಸ್ಥಳವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಮಹಾತ್ಮ ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾದ ಶಾಸ್ತ್ರಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಸಹಕಾರ ಚಳವಳಿ ಸೇರಿದಂತೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ಜೈಲುವಾಸವನ್ನೂ ಅನುಭವಿಸಿದರು.
ಒಟ್ಟು ಸುಮಾರು ಏಳು ವರ್ಷಗಳ ಕಾಲ ಅವರು ಬ್ರಿಟಿಷರ ಕಾರಾಗೃಹದಲ್ಲಿದ್ದರು.ಸ್ವಾತಂತ್ರ್ಯಾನಂತರ ಅವರು ಕೇಂದ್ರ ಸರ್ಕಾರದಲ್ಲಿ ರೈಲ್ವೆ, ಸಾರಿಗೆ ಮತ್ತು ಸಂಪರ್ಕ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗೃಹ ವ್ಯವಹಾರ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದರು.
ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಸಂಭವಿಸಿದ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಘಟನೆ ಅವರ ಸಾರ್ವಜನಿಕ ಜೀವನದ ಪ್ರಾಮಾಣಿಕತೆಗೆ ಉದಾಹರಣೆಯಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಸ್ಮಿತಾ ರಾಮು, EO ಜೆರಾಲ್ಡ್ ರಾಜೇಶ್, ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್ , ದೇವಸ್ಥಾನ ವ್ಯವಸ್ಥಾನ ಸಮಿತಿ ಅಧ್ಯಕ್ಷ ಚಿನ್ನದ ಗುಡಿ ಹುಂಡಿಬಸವೇಗೌಡ ಮುಖ್ಯ ಭಾಷಣಕಾರ ನಂಜುಂಡಯ್ಯ, ಮುಖಂಡರಾದ ಗಾಯತ್ರಿ ಮೋಹನ್ , ಮಂಜುನಾಥ್, ಶ್ರೀಧರ್ , ಗೋವಿಂದ ರಾಜ್, ಅಬ್ದುಲ್ ಖಾದರ್, ಗುರುಮಾಲ್ಲಪ್ಪ ರವರು ಸೇರಿದಂತೆ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಹಾಜರಿದ್ದರು.












