--Ads--

ಶ್ರೀ ದಕ್ಷಿಣ ಮಹಾಕಾಳಿ ಶಕ್ತಿ ಪೀಠದಲ್ಲಿ ಪ್ರತ್ಯಂಗಿರಾ ಹೋಮ “

On: October 11, 2026 10:10 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

” ಶ್ರೀ ದಕ್ಷಿಣ ಮಹಾಕಾಳಿ ಶಕ್ತಿ ಪೀಠದಲ್ಲಿ ಪ್ರತ್ಯಂಗಿರಾ ಹೋಮ “

ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ, ದೇವಿಯ ಮೆರವಣಿಗೆ ಉತ್ಸವ
ಪ್ರತ್ಯಂಗಿರಾ ಹೋಮವು ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದು – ಡಾಕ್ಟರ್ ಡಿ.ಎಲ್ ವೀರ ಬ್ರಹ್ಮಚಾರ್ ಗುರೂಜಿ
ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಸುಪ್ರಸಿದ್ಧ ಶ್ರೀ ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯ ಶ್ರೀ ದಕ್ಷಿಣ ಮಹಾಕಾಳಿ ಶಕ್ತಿ ಪೀಠದಲ್ಲಿ ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ಪ್ರತ್ಯಂಗಿರಾ ಹೋಮ ಹಾಗೂ ಶ್ರೀ ಪ್ರತ್ಯಂಗಿರಾ ದೇವಿಯ ಮೆರವಣಿಗೆ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಕ್ಷೇತ್ರದ ಧರ್ಮಾಧಿಕಾರಿ ಡಾ. ಶ್ರೀ ಶ್ರೀ ಡಿ.ಎಲ್. ವೀರ ಬ್ರಹ್ಮಚಾರ್ ಗುರೂಜಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗಿದವು. ಮಹಾಲಯ ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ನಡೆದ ಪ್ರತ್ಯಂಗಿರಾ ಹೋಮವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಬಳಿಕ ಶ್ರೀ ಪ್ರತ್ಯಂಗಿರಾ ದೇವಿಯ ಮೆರವಣಿಗೆ ಉತ್ಸವ ನೆರವೇರಿತು.

ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ. ಶ್ರೀ ಶ್ರೀ ಡಿ.ಎಲ್. ವೀರ ಬ್ರಹ್ಮಚಾರ್ ಗುರೂಜಿಗಳು ಮಾತನಾಡಿ . ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದ್ದು, ಈ ದಿನ ಪೂರ್ವಜರನ್ನು ಸ್ಮರಿಸಿ, ಪಿತೃಗಳಿಗೆ ತರ್ಪಣ ಸಲ್ಲಿಸುವುದು ಹಾಗೂ ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸುವುದು ಸಂಪ್ರದಾಯವಾಗಿದೆ. ಪೂರ್ವಜರ ಬಗ್ಗೆ ಕೃತಜ್ಞತೆ ಸಲ್ಲಿಸುವುದು ಮತ್ತು ಧಾರ್ಮಿಕ ಆಚರಣೆಗಳ ಮೂಲಕ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಈ ದಿನದ ಪ್ರಮುಖ ಆಶಯವಾಗಿದೆ ಎಂದು ವಿವರಿಸಿದರು.ಪ್ರತ್ಯಂಗಿರಾ ದೇವಿಯ ಆರಾಧನೆಯು ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದು, ದೇವಿಯ ಅನುಗ್ರಹಕ್ಕಾಗಿ ಭಕ್ತರು ವಿಶೇಷ ಪೂಜೆ ಹಾಗೂ ಹೋಮಗಳನ್ನು ನೆರವೇರಿಸುತ್ತಾರೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಶ್ರದ್ಧೆ, ಭಕ್ತಿ ಹಾಗೂ ಆಧ್ಯಾತ್ಮಿಕ ಮನೋಭಾವವನ್ನು ವೃದ್ಧಿಸುವುದರೊಂದಿಗೆ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಅರ್ಚಕ ವೃಂದದವರು ಹಾಗೂ ನೂರಾರು ಸಂಖ್ಯೆಯ ಭಕ್ತ ಸಮೂಹ ಹಾಜರಿದ್ದರು.

WhatsApp

Join Now

Telegram

Join Now

Instagram

Join Now