--Ads--

ಕರ್ನಾಟಕದ ಇತಿಹಾಸ ಅರಮನೆಯಿಂದ ಕಲಿಯಬೇಕಿಲ್ಲ, ಬಸವಾದಿ ಶರಣರ ಮಹಾಮನೆಯಿಂದ ಕಲಿಯಬೇಕು: ಡಾ.ಎಂ.ಎಸ್.ಆಶಾದೇವಿ

On: November 17, 2026 3:11 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಕುರಿತು ಚಿಂತನೆ-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕನ್ನಡ ಕ್ರಿಯಾ ಸಮಿತಿ

ಕರ್ನಾಟಕದ ಇತಿಹಾಸ ಅರಮನೆಯಿಂದ ಕಲಿಯಬೇಕಿಲ್ಲ, ಬಸವಾದಿ ಶರಣರ ಮಹಾಮನೆಯಿಂದ ಕಲಿಯಬೇಕು: ಡಾ.ಎಂ.ಎಸ್.ಆಶಾದೇವಿ

ಬೆಂಗಳೂರು: ರವೀಂದ್ರ ಕಲಾಕ್ಷೇತ್ರ, ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಕನ್ನಡ ಚಿಂತನೆ-ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಕುರಿತು ಚಿಂತನಾ ಸಭೆ ನಡೆಯಿತು.

ಹಿರಿಯ ಸಾಹಿತಿಗಳಾದ ಡಾ||ಎಂ.ಎಸ್.ಆಶಾದೇವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಗೌರವಾಧ್ಯಕ್ಷರಾದ ವ.ಚ.ಚನ್ನೇಗೌಡರು, ರಾಜ್ಯಾಧ್ಯಕ್ಷರಾದ ಹುಸೇನ್ ಕೆ.ಎಸ್.ಎಂ.ರವರು ಭಾಗವಹಿಸಿದ್ದರು.

ಹಿರಿಯ ಸಾಹಿತಿ ಡಾ||ಎಂ.ಎಸ್.ಆಶಾದೇವಿರವರು ಮಾತನಾಡಿ ಕವಿರಾಜಮಾರ್ಗ ಜಾಗತಿಕ ಮಹತ್ವ ಪಡೆದಿದೆ. ಒಂದು ಸಮುದಾಯ ಕಟ್ಟುವುದು ಭಾವನೆಗಳಿಂದ ಮಾತ್ರ ಎಂದು ಕನ್ನಡ ಕವಿ 8ನೇ ಶತಮಾನದಲ್ಲಿ ಉಲ್ಲೇಖ ಮಾಡಿದ್ದರು.

ಕನ್ನಡಿಗರು ಎಂಬುದು ಭಾವನೆ, ಭಾಷೆ ಮತ್ತು ಜನರು ಬೆಳಯಲು ಅವಕಾಶ ಕೊಡಬೇಕು. ಕನ್ನಡದ ಜನ ಶುದ್ದ ಮನಸ್ಸಿನವರು. ಕನ್ನಡದ ಇತಿಹಾಸ, ಪರಂಪರೆ ಲೋಕಕ್ಕೆ ಮಾದರಿಯಾಗಿದೆ.

ಅಸಹಿಷ್ಣುತೆ ತುಂಬಿ ತುಳುತ್ತಿರುವ ಇಂದಿನ ದಿನದಲ್ಲಿ 8ನೇ ಶತಮಾನ ದಲ್ಲಿ ಸಹಿಷ್ಣುತೆ ಸಾರಿದ್ದು ಕವಿರಾಜಮಾರ್ಗ.
12ಶತಮಾನದಲ್ಲಿ ಶರಣರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು, ಮಹಿಳೆಯರಿಗೆ ಸಾಮಾನತೆಯನ್ನು ನೀಡಿ ಭಕ್ತಿಯುಗ ಮೂಲಕ ಸಮಾನತೆ ಸಾರುವ ಮೂಲಕ ಕ್ರಾಂತಿ ತಂದರು.

ಬಸವಣ್ಣನವರು ಎಲ್ಲ ಜಾತಿಯವರನ್ನು ಒಂದೇ ವೇದಿಕೆಯಲ್ಲಿ ತಂದು ಸಮಾನತೆ ತಂದರು. ಚುನಾವಣೆಯಲ್ಲಿ ಯಾವ ಜಾತಿಯ ಜನಸಂಖ್ಯೆ ಮತದಾರರು ಇದ್ದಾರೆ ಅ ಜಾತಿಯವರಿಗೆ ಟಿಕೇಟು ನೀಡುತ್ತಾರೆ. ಜಾತಿ ಲೆಕ್ಕಚಾರದ ವಿಧಾನಸಭಾ ಕ್ಷೇತ್ರಗಳು ವಿಂಗಡನೆಯಾಗುತ್ತಿದೆ. ಜಾತಿ ವ್ಯವಸ್ಥೆ ಬೇಡವೆಂದರು ಹೋಗುತ್ತಿಲ್ಲ.

ಮಠದ ವ್ಯವಸ್ಥೆಯಲ್ಲಿ ಕನಕದಾಸರಿಗೆ ಅವಕಾಶ ವಿರಲ್ಲಿಲ. ದುಡಿಯುವ ವರ್ಗದ ಪರ ಇರಬೇಕು. ರಾಮಧ್ಯಾನ ಚರಿತ್ರೆ ರಾಗಿಯೇ ಶೇಷ್ಠ ರಾಗಿ ಶ್ರಮಿಕರ ಆಹಾರವಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡವರಿಗೆ ಬೆಲೆಯಿಲ್ಲದಂತೆ ಆಗಿದೆ. ಕರ್ನಾಟಕದ ಇತಿಹಾಸ ಅರಮನೆಯಿಂದ ಕಲಿಯಬೇಕಿಲ್ಲ, ಬಸವಾದಿ ಶರಣರ ಮಹಾಮಾನೆಯಿಂದ ಕಲಿಯಬೇಕು ಎಂದು ಹೇಳಿದರು

ವ.ಚ.ಚನ್ನೇಗೌಡರು ಮಾತನಾಡಿ ಸಾರಿಗೆ ಸಂಸ್ಥೆಯ ಕನ್ನಡ ಸಂಘದಲ್ಲಿ ಪ್ರತಿ ತಿಂಗಳು ವಿದ್ವಾಂಸರನ್ನು ಕರೆಸಿ ನಾಡು, ನುಡಿಯ ಬಗ್ಗೆ ಚಿಂತನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ, ಯುವಕರಿಗೆ ಅರಿವು ಮೂಡಿಸಬೇಕು. ಕಾವೇರಿ, ಗೋದಾವರಿವರೆಗೆ ಕನ್ನಡ ನಾಡು ಇತ್ತು ಎಂಬ ಇತಿಹಾಸವಿದೆ, ಕರ್ನಾಟಕ ಶ್ರೀಮಂತ ರಾಜ್ಯವಾಗಿದೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ. ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರು ಪುಣ್ಯವಂತರು.

ಹಿಂದೆಯೆ ಕವಿರಾಜಮಾರ್ಗದಲ್ಲಿ ಕರ್ನಾಟಕ ಸಂಪೂರ್ಣ ಇತಿಹಾಸವಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಶಾಸನಗಳು ಇವೆ. ಪಂಪ ಹಳೆಗನ್ನಡದಲ್ಲಿ ವೈದಿಕ ಪರಂಪರೆಯಲ್ಲಿ ಬರೆದರು ಸಾಮಾನ್ಯ ಜನರಿಗೆ ಅರ್ಥವಾಗುತ್ತಿರಲ್ಲಿಲ. ಅದರೆ ವಚನಗಳು ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಕನ್ನಡದಲ್ಲಿ ಬರೆದರು. ಕರ್ನಾಟಕದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಲಂಡನ್ ವಾಸಿಗಳು ಬಸವಣ್ಣನವರ ಆದರ್ಶ ಪಾಲಿಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ರವರು ಭಾಷೆ ಎಂದರೆ ಸಂಸ್ಕೃತಿ ಅಡಗಿರುತ್ತದೆ ಎಂದು ಹೇಳಿದ್ದರು.

ಹುಸೇನ್ ಕೆ.ಎಸ್.ಎಂ. ರವರು ಮಾತನಾಡಿ ಕರ್ನಾಟಕದ ಇತಿಹಾಸ, ನೆಲ, ಜಲ ಭಾಷೆ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಕನ್ನಡ ಚಿಂತನೆಯನ್ನು ಚನ್ನಪಟ್ಟಣ, ಕುಪ್ಪಳ್ಳಿ ನಡೆಸಲಾಗಿದೆ. ನಮ್ಮ ಪರಂಪರೆಯನ್ನು ಯುವಕರು ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪದಾಧಿಕಾರಿಗಳಾದ ಎಸ್.ಜೆ.ಮೇಟಿ, ಹೆಚ್.ಕೆ.ಸುರೇಶ್, ಆ‌ರ್.ಟಿ.ಕಾಂತ್ ರಾಜ್, ವಿ.ರಮೇಶ್, ಶಿವಕುಮಾ‌ರ್, ಡಿ.ಎಲ್.ರಮೇಶ್‌, ಶಂಕರನಾಯಕ್‌, ಮತ್ತು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಚಿಂತಕರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now