--Ads--

ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ಹರಿದು ಬಂದ ಭಕ್ತ ಸಾಗರ

On: November 25, 2026 5:26 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ಹರಿದು ಬಂದ ಭಕ್ತ ಸಾಗರ

ತಾಂಡವಪುರ ನವೆಂಬರ್ 25 ಮೈಸೂರು ಜಿಲ್ಲೆ ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದಿರುವ ಇತಿಹಾಸ ಪ್ರಸಿದ್ಧಿ ಉಳ್ಳ ನಂಜನಗೂಡಿನಲ್ಲಿ ಇಂದು ಬೆಳಿಗ್ಗೆ ಶ್ರೀಕಂಠೇಶ್ವರ ಸ್ವಾಮಿಯ ಚಿಕ್ಕಜಾತ್ರೋತ್ಸವ ಧಾರ್ಮಿಕ ಸಂಪ್ರದಾಯದೊಂದಿಗೆ ವಿಜೃಂಭಣೆಯಾಗಿ ಜರುಗಿದ್ದು ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ಭಕ್ತರವಲದೆ ಬೇರೆ ಬೇರೆ ಜಿಲ್ಲೆಯ ಭಕ್ತರು ಈ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು

ಇಂದು ಬೆಳಿಗ್ಗೆ 9:20 ರಿಂದ 10 ಗಂಟೆ ಒಳಗೆ ಸಲ್ಲುವ ಧನುರ್ ಲಗ್ನದಲ್ಲಿ ಶ್ರೀ ಸಿಕಂಠೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥಗಳ ಚಕ್ರಕ್ಕೆ ಪೂಜಾ ಸಲ್ಲಿಸಿ ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಧಿಕಾರಿ ಕೃಷ್ಣ ರಥದ ಚಕ್ರಕ್ಕೆ ಕಾಯಿ ಹೊಡೆಯುವ ಮೂಲಕ ಅದ್ದೂರಿ ಚಾಲನೆ ದೊರೆಯಿತು

ವಿವಿಧಡೆಯಿಂದ ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರು ಭಕ್ತಿ ಭಾವದಿಂದ ಜೈ ಜೈ ನಂಜುಂಡ ಓಂ ನಮಃ ಶಿವಾಯ ಎಂದು ಘೋಷಣೆ ಕೂಗುತ್ತಾ ರಥಗಳನ್ನು ಭಕ್ತಿ ಭಾವದಿಂದ ಎಳೆದರು

ಸಾವಿರಾರು ಭಕ್ತರು ರಥದ ಮೇಲೆ ಹೂವು ದವನ ಬಾಳೆಹಣ್ಣು ಎಸೆದು ಜಯ ಘೋಷಣೆ ಕೂಗಿ ಪುಳಕಿತಗೊಂಡರು

ಮೈಸೂರು ಸಮೀಪ ಇರುವ ನಂಜನಗೂಡು ಕ್ಷೇತ್ರ ಪುರಾಣ ಪ್ರಸಿದ್ಧವಾದ ಯಾತ್ರ ಸ್ಥಳವಾಗಿದೆ ಈ ಸ್ಥಳವು ದಕ್ಷಿಣ ಕಾಶಿ ಎಂದೆ ಪ್ರಸಿದ್ಧವಾಗಿದೆ ಪ್ರತಿ ವರ್ಷವೂ ಕ್ಷೇತ್ರದಲ್ಲಿ ದೊಡ್ಡ ಜಾತ್ರೆ ಮತ್ತು ಚಿಕ್ಕ ಜಾತ್ರೆ ನಡೆಯುತ್ತದೆ

ಚಿಕ್ಕಜಾತ್ರೆ ಪ್ರಯುಕ್ತ ಶ್ರೀಕಂಠೇಶ್ವರ ದೇವಾಲಯವನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು ಪಟ್ಟಣದ ರಥದಬೀದಿ ವಿದ್ಯುತ್ ದೀಪ ಅಲಂಕಾರದಿಂದ ಸಿಂಗರ್ಸಲಾಗಿತ್ತು ಪ್ರತಿ ಮನೆ ಮುಂದೆ ರಂಗವಲ್ಲಿ ಹಾಕಿ ಹಸಿರು ತೋರಣ ಕಟ್ಟಿ ಮತ್ತಷ್ಟು ಮೆರುಗು ನೀಡಲಾಗಿತ್ತು ಬಂದಂತ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ದಾಸೋಹ ಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಮತ್ತು ಅನೇಕ ಸಂಘ ಸಂಸ್ಥೆಗಳು ಪ್ರಸಾದ ವಿತರಣೆ ಮಾಡಿದರು

ಚಿಕ್ಕ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದವರು ಹಲವಾರು ಜಿಲ್ಲೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಚಿಕ್ಕಜಾತ್ರಿಯ ರಥಗಳನ್ನು ಎಳೆದು ಸಂಭ್ರಮಿಸಿದರು
ಚಿಕ್ಕ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಶ್ರೀಕಂಠೇಶ್ವರ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು . ಕುಡಿಯುವ ನೀರು ಪ್ರಸಾದ ವ್ಯವಸ್ಥೆ ರಥಗಳ ಸುತ್ತ ಮತ್ತು ರಥಗಳ ಹತ್ತಿರ ಯಾರು ಭಕ್ತಾದಿಗಳು ಹೋಗದಂತೆ ಪೋಲೀಸ್ ವ್ಯವಸ್ಥೆ ಮಾಡಲಾಗಿತ್ತು

ರಥಗಳನ್ನು ಎಳೆಯಲು ಚಾಲನೆ ಸಿಕ್ಕ ತಕ್ಷಣ ಭಕ್ತಾದಿಗಳು ಜೈಕಾರ ಕೂಗುತ್ತಾ ಭಕ್ತಿಪೂರಕವಾಗಿ ರಥಗಳಿಗೆ ಕಟ್ಟಿದ್ದ ಹಗ್ಗಗಳನ್ನು ಹಿಡಿದು ನಮಸ್ಕಾರ ಮಾಡಿ ಎಳೆಯ ತೊಡಗಿದರು

ಚಿಕ್ಕ ಜಾತ್ರೆ ಅಂದರೆ ಮೂರು ರಥಗಳನ್ನು ಎಳೆಯುವ ಜಾತ್ರೆ ಶ್ರೀ ಗಣಪತಿ ಶ್ರೀ ಚಂಡಿಕೇಶ್ವರ ಶ್ರೀಕಂಠೇಶ್ವರ ಸಮೇತ ಪಾರ್ವತಮ್ಮನವರು ರಥಗಳಲ್ಲಿ ಕೂರಿಸಿ ವಿವಿಧ ಬಣ್ಣದ ಹೂಗಳಿಂದ ಸಿಂಗರಿಸಿ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಾರೆ

ಮೂರು ರಥಗಳನ್ನು ಶ್ರೀಕಂಠೇಶ್ವರ ದೇವಾಲಯ ಮುಂಭಾಗದಿಂದ ರಥದ ಬೀದಿಯಲ್ಲಿ ಭಕ್ತಾದಿಗಳು ಜೈಕಾರ ಹಾಕುತ್ತಾ ಎಳೆದು ರಥಗಳನ್ನು ಸ್ವಸ್ತಾನಕ್ಕೆ ತಲುಪಿಸಿದರು

ಒಟ್ಟಾರೆ ನಂಜನಗೂಡಿನಲ್ಲಿ ಚಿಕ್ಕ ಜಾತ್ರೆ ಬಹಳ ಅದ್ದೂರಿಯಾಗಿ ಸಂಭ್ರಮವಾಗಿ ಭಕ್ತಿಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ ವಿದ್ಯಾಂಬರ್ಣೆಯಿಂದ ನಡೆಯಿತು

ಈ ಸಂದರ್ಭದಲ್ಲಿ ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನ ಸಲಹಾ ಸಮಿತಿಯ ಅಧ್ಯಕ್ಷ ಚಿನ್ನದ ಗುಡಿ ಹುಂಡಿ ಬಸವೇಗೌಡರು ಧರ್ಮದರ್ಶಿಗಳಾದ ಗೋಪಾಲಕೃಷ್ಣ ಗೋವಿಂದರಾಜು ಕೃಷ್ಣ ಹೆಜ್ಜಿಗೆ ಶ್ರೀಧರ್ ಮತ್ತು ಸಾವಿರಾರುಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀಕಂಠೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ದೇವಸ್ಥಾನಗಳು ಕೇವಲ ಕಟ್ಟಡಗಳಲ್ಲ, ಭಕ್ತಿ ಮತ್ತು ಮಾನವೀಯತೆಯ ಪ್ರತೀಕವಾಗಬೇಕು: ಶ್ರೀ ಮೂಗು ಮಾರಮ್ಮ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

ನೊಣವಿನಕೆರೆ ಅಜ್ಜಯ್ಯ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಸುನಿಲ್ ಬೋಸ್

ಮಕ್ಕಳಿಗೆ ಆಸ್ತಿ ಗಿಂತ ವಿದ್ಯೆ ನೀಡಿ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ. ಬಸವರಾಜ್.

ಬೋನಿಗೆ ಸೆರೆ ಸಿಕ್ಕಿದ್ದ ಚಿರತೆ ಬೋನಿನ ಲಾಕ್ ಓಪನ್ ಆಗಿ  ಪರಾರಿ ಗ್ರಾಮಸ್ಥರಲ್ಲ ಭಯದ ವಾತಾವರಣ

ಶ್ರೀ ಕಾರ್ಗಳಮ್ಮ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಮೂರೂ ಕೋಟಿ ಅನುದಾನ ನೀಡುವಂತೆ  ಯಜಮಾನರು ಹಾಗೂ ಗ್ರಾಮಸ್ಥರು ಮಾಜಿ ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ

ಮರಸೆ ಮಾಕನ ಹುಂಡಿ ಸುತ್ತಮುತ್ತ ವ್ಯಾಘ್ರನ ಸಂಚಾರ ಬೋನು ಇಟ್ಟಿದ್ದು ಹುಲಿ ರಾಯಣ್ಣ ಸೆರೆಗೆ ಸಿಕ್ಕಿದ್ದು ಚಿರತೆ ಇನ್ನು 3-4 ಚಿರತೆ ಅಥವಾ ಹುಲಿ ಇರುವ ಶಂಖೆ