--Ads--

ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ಮತ್ತು ,ದಂತ ಮತ್ತು ಕಣ್ಣಿನ ಪರೀಕ್ಷೆ ಉಚಿತ ಹಾಗೂ ಲ್ಯಾಬ್ ಉದ್ಘಾಟನೆ

On: February 22, 2026 12:43 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ಮತ್ತು ,ದಂತ ಮತ್ತು ಕಣ್ಣಿನ ಪರೀಕ್ಷೆ ಉಚಿತ ಹಾಗೂ ಲ್ಯಾಬ್ ಉದ್ಘಾಟನೆ

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ: ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಡೇ ಕೇರ್ ಸೆಂಟರ್ ನಲ್ಲಿ ನೆಪ್ರೋಪ್ಲಸ್ ಉಚಿತ ಡಯಾಲಿಸಿಸ್ ಕೇಂದ್ರ, ರಿಯಾಯಿತಿ ದರದಲ್ಲಿ ಭಾರತ್ ಜನಸೇವಾ ಲ್ಯಾಬ್ ಸಂಪೂರ್ಣ ದೇಹ ಪರೀಕ್ಷಾ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಉಚಿತವಾಗಿ ದಂತ ಮತ್ತು ಕಣ್ಣಿನ ತಪಾಸಣಾ ಕೇಂದ್ರವನ್ನು ಶಾಸಕ ಎಸ್.ಸುರೇಶ್ ಕುಮಾರ್ ರವರು ಬಿಬಿಎಂಪಿ ಮಾಜಿ ಸದಸ್ಯರುಗಳಾದ ಎಂ.ಮುನಿರಾಜುರವರು, ಶ್ರೀಮತಿ ಶಕೀಲ ಮುನಿರಾಜುರವರು, ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಎಂ.ಎಸ್.ಸಂಜಯ್ ಕುಮಾರ್ ರವರು ಉದ್ಘಾಟನೆ ಮಾಡಿದರು.

ಶಾಸಕ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಸಂವಿಧಾನಶಿಲ್ಪಿ, ಭಾರತರತ್ನ ಡಾ .ಬಿ.ಆರ್.ಅಂಬೇಡ್ಕರ್ ರವರ ಹೆಸರಿನಲ್ಲಿ ದಯಾನಂದನಗರ ವಾರ್ಡ್ ನಲ್ಲಿ 15ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ದಯಾನಂದನಗರ ವಾರ್ಡ್ ಆರ್ಥಿಕವಾಗಿ ಹಿಂದುಳಿದವರ ಜನಸಂಖ್ಯೆ ಹೆಚ್ಚಿದೆ. ಕಿಡ್ನಿ ಸಮಸ್ಯೆಯಿಂದ ಬಳಲುವವರು ಪ್ರತಿ ಡಯಾಲಿಸಿಸ್ 1800 ರೂಪಾಯಿವರಗೆ ವೆಚ್ಚವಾಗುತ್ತದೆ ಅದ್ದರಿಂದ ಇಲ್ಲಿ ಸಂಪೂರ್ಣ ಉಚಿತವಾಗಿ ಮಾಡಲಾಗುತ್ತಿದೆ. ಹಾಗೂ ದಂತ, ಕಣ್ಣಿನ ತಪಾಸಣೆ ಉಚಿತ ದೃಷ್ಟಿ ದೋಷದವರಿಗೆಗೆ ಉಚಿತ ಕನ್ನಡಕ ನೀಡಲಾಗುತ್ತದೆ ಭಾರತ್ ಜನಸೇವಾ ಲ್ಯಾಬ್ಸ್ ಅತ್ಯಂತ ಕಡಿಮೆ ದರದಲ್ಲಿ 71 ಪರೀಕ್ಷೆಗಳು ಮಾಡಲಾಗುತ್ತದೆ ಎಂದು ಹೇಳಿದರು.

ಮಾಜಿ ಉಪಮಹಾಪೌರರಾದ ರಂಗಣ್ಣ, ಬಿಜೆಪಿ ಮುಖಂಡರುಗಳಾದ ರಾಘವೇಂದ್ರರಾವ್, ಗಿರೀಶ್ ಗೌಡ, ಕಾಮಧೇನು ಸುರೇಶ್ ಹಾಗೂ ಸ್ಥಳೀಯ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now