ವಿಜಯ ದರ್ಪಣ ನ್ಯೂಸ್…….
ಚನ್ನಹಳ್ಳಿ ಗ್ರಾಮದಲ್ಲಿ ಸಂಭ್ರಮದ ಶ್ರೀರಾಮ ಸಪ್ತಾಹ: ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗಿ

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಚನ್ನಹಳ್ಳಿ ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ಭಕ್ತ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀರಾಮ ಸಪ್ತಾಹ ಹಾಗೂ ಅಖಂಡ ಶ್ರೀರಾಮ ಭಜನಾ ಕಾರ್ಯಕ್ರಮವು ಅತ್ಯಂತ ಭಕ್ತಿ-ಭಾವಗಳಿಂದ ಜರುಗಿತು. ಈ ಧಾರ್ಮಿಕ ಮಹೋತ್ಸವದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಅವರು ಪಾಲ್ಗೊಂಡು, ವಿಶೇಷ ಪೂಜೆ ಸಲ್ಲಿಸಿ ಪ್ರಭು ಶ್ರೀರಾಮನ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು,ಶ್ರೀ ಕೋದಂಡರಾಮಸ್ವಾಮಿ ಭಕ್ತ ಮಂಡಳಿಯು 1942ರಿಂದಲೇ ಈ ಪುಣ್ಯ ಕಾರ್ಯವನ್ನು ಆರಂಭಿಸಿದ್ದು, ಇಂದು ಯಶಸ್ವಿಯಾಗಿ 45ನೇ ವರ್ಷದ ಸಪ್ತಾಹವನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ. ದಶಕಗಳ ಕಾಲ ಇಂತಹ ಉನ್ನತ ಧಾರ್ಮಿಕ ಪರಂಪರೆಯನ್ನು ಸಂಪ್ರದಾಯಬದ್ಧವಾಗಿ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಗ್ರಾಮದ ಹಿರಿಯರಿಗೆ ಹಾಗೂ ಭಕ್ತ ಮಂಡಳಿಯ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದ ಉದ್ದಕ್ಕೂ ರಾಮನಾಮ ಸ್ಮರಣೆ ಹಾಗೂ ಭಜನೆಗಳು ಮೊಳಗಿದವು. ಇದೇ ಸಂದರ್ಭದಲ್ಲಿ ಮುಖಂಡರಾದ ಸುಬ್ರಮಣಿ, ರಮೇಶ್, ಮುನಿರಾಜು, ತೆಲ್ಲಹಳ್ಳಿ ಶಿವಾನಂದ, ಭೂದಾಳ ಅಂಬರೀಶ್, ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದು.









