ವಿಜಯ ದರ್ಪಣ ನ್ಯೂಸ್…..
ಟಾಪರ್ ಮಾಧುರಿಗೆ ಗ್ಯಾರಂಟಿ ಯೋಜನೆ ಸಮತಿ ವತಿಯಿಂದ ಅಭಿನಂದನೆ

ತಾಂಡವಪುರ ಏಪ್ರಿಲ್ 29: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ಕುಮಾರಿ ಮಾಧುರಿ ಅವರ ಮನೆಗೆ ಮಂಗಳವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯು ಭೇಟಿ ನೀಡಿ ಅಭಿನಂದಿಸಿತು.
ಮಾಧುರಿ ಅವರ ತಾಯಿ ಸರಿತಾ ಗೃಹಲಕ್ಷ್ಮಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಬೇಕಿರುವ ಪೂರಕ ಸಾಮಗ್ರಿಗಳನ್ನು ಖರೀದಿಸಲು ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ,
ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬದಲಾವಣೆಯ ಬೆಳಕಾಗಿದೆ. ಇದಕ್ಕೆ ಅನೇಕ ಫಲಶೃತಿಗಳು ನಮ್ಮ ಕಣ್ಮೂಂದೆ ಇವೆ. ಇದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಗೃಹಲಕ್ಷ್ಮಿ ಯೋಜನೆಯ ಹಣದ ಸಹಾಯದಿಂದ ಮಾಧುರಿ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ 2ನೇ ಸ್ಥಾನ ಪಡೆದಿರುವುದು ಎಂದರು.
ಈಕೆಯಂತೆ ಅನೇಕ ಮಕ್ಕಳ ಬದುಕಿನಲ್ಲಿ ಗ್ಯಾರಂಟಿ ಯೋಜನೆಗಳು ಬೆಳಕಾಗಿದೆ. ಕೆಲವು ಮಾತ್ರ ಎಲ್ಲರ ಕಣ್ಣಿಗೆ ಕಂಡರೆ, ಅನೇಕ ಫಲಾನುಭವಿಗಳ ಕಥೆ ಎಲೆಮರೆಯಾಗಿಯೇ ಉಳಿಯುತ್ತವೆ. ಇಂತಹ ಫಲಶೃತಿಗಳು ಕಣ್ಣಮುಂದೆ ಬಂದಾಗೆಲ್ಲ, ಸರ್ಕಾರಕ್ಕೆ ಸಾರ್ಥಕತೆಯ ಭಾವ ಮೂಡುತ್ತದೆ. ಇಂತಹ ಯೋಜನೆ ರೂಪಿಸುವಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಶ್ರಮ ಅಪಾರವಾಗಿದೆ ಎಂದರು.
ಮೈಸೂರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಗ್ಯಾರಂಟಿ ಅನುದಾನ ಬಳಸಿಕೊಂಡ ಕುಟುಂಬದ ಹೆಣ್ಣು ಮಗಳು ಇಂತಹದೊಂದು ಶೈಕ್ಷಣಿಕೆ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮಯ ವಿಚಾರವಾಗಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾರ್ಥಕತೆ ಕಂಡಿವೆ ಎಂದು ಹೇಳಿದರು. ಲೋಕೇಶ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.










