--Ads--

ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯ ಮತ್ತು ಮಾಹೆಯ ಡ್ಯುಯಲ್ ಪಿಎಚ್ಡಿ ಕಾರ್ಯಕ್ರಮ ಮತ್ತು ಸಂಶೋಧನಾ ಶ್ರೇಷ್ಠತೆಯ ಉಪಕ್ರಮದೊಂದಿಗೆ ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ

On: May 15, 2026 8:28 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯ ಮತ್ತು ಮಾಹೆಯ ಡ್ಯುಯಲ್ ಪಿಎಚ್ಡಿ ಕಾರ್ಯಕ್ರಮ ಮತ್ತು ಸಂಶೋಧನಾ ಶ್ರೇಷ್ಠತೆಯ ಉಪಕ್ರಮದೊಂದಿಗೆ ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಪಾಲುದಾರಿಕೆ ವಿಸ್ತರಣೆ

ಬೆಂಗಳೂರು, ಮೇ 15 2026: ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯ ಮತ್ತು ಶ್ರೇಷ್ಠತೆ ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯಲ್ ಎಜುಕೇಷನ್ (ಮಾಹೆ) ತಮ್ಮ ದಶಕದ ಕಾರ್ಯತಂತ್ರದ ಪಾಲುದಾರಿಕೆಯ ವಿಸ್ತರಣೆಯ ಮೈಲಿಗಲ್ಲನ್ನು ಘೋಷಿಸಿದ್ದು, ಮಾಹೆ ಕ್ಯಾಂಪಸ್ನಲ್ಲಿ ಗ್ರಿಫಿತ್-ಮಾಹೆ ಸಂಶೋಧನಾ ಉತ್ಕೃಷ್ಟ ಕೇಂದ್ರದ ಸ್ಥಾಪನೆಗೆ ಡ್ಯುಯಲ್ ಅವಾರ್ಡ್ ಡಾಕ್ಟೋರಲ್ ಕಾರ್ಯಕ್ರಮ ಮತ್ತು ಜಂಟಿ ಬದ್ಧತೆಯನ್ನು ಅಧಿಕೃತಗೊಳಿಸಿವೆ.

ಈ ಉಪಕ್ರಮವು ಗ್ರಿಫಿತ್ ವಿಶ್ವವಿದ್ಯಾಲಯದ ಭಾರತದಲ್ಲಿನ ಮೊದಲ ದೊಡ್ಡ ಪ್ರಮಾಣದ ಪಾಲುದಾರಿಕೆಯಾಗಿದೆ. ಈ ಪಾಲುದಾರಿಕೆಯು ಅಂತಾರಾಷ್ಟ್ರೀಯ ಪಾಲುದಾರಿಕೆಯ ಮೂಲಕ ಮಾಹೆಯ ಜಾಗತಿಕ ಸಂಪರ್ಕದ ಸಂಶೋಧನೆ, ಡಾಕ್ಟೋರಲ್ ತರಬೇತಿ, ಶೈಕ್ಷಣಿಕ ತರಬೇತಿ, ಶೈಕ್ಷಣಿಕ ಚಲನಶೀಲತೆ ಮತ್ತು ಅಂತರಶಿಸ್ತೀಯ ಆವಿಷ್ಕಾರದ ಒಂದು ಮಹತ್ವದ ಮೈಲುಗಲ್ಲಾಗಿದೆ.

ಡ್ಯುಯಲ್ ಅವಾರ್ಡ್ ಡಾಕ್ಟೋರಲ್ ಕಾರ್ಯಕ್ರಮದ ಅಡಿಯಲ್ಲಿ ಗ್ರಿಫಿತ್ ವಿಶ್ವವಿದ್ಯಾಲಯ ಮತ್ತು ಮಾಹೆ ಎರಡೂ ಅಕಾಡೆಮಿಗಳು ಜಂಟಿಯಾಗಿ ಪಿಎಚ್ಡಿ ವಿದ್ವಾಂಸರನ್ನು ಮೇಲ್ವಿಚಾರಣೆ ಮಾಡುತ್ತವೆ. ಮತ್ತು ಏಕ ಮತ್ತು ಜಂಟಿ ಸಂಶೋಧನಾ ಕಾರ್ಯಕ್ರಮದ ಪೂರ್ಣಗೊಳಿಸುವಿಕೆಯ ನಂತರ ಎರಡೂ ವಿಶ್ವವಿದ್ಯಾಲಯಗಳಿಂದ ಡಾಕ್ಟೋರಲ್ ಪದವಿಯನ್ನು ಪ್ರದಾನ ಮಾಡಲಾಗುತ್ತದೆ. ವಿದ್ವಾಂಸರು ಎರಡು ಕ್ಯಾಂಪಸ್ಗಳಲ್ಲಿ ಸಂಶೋಧನೆ ನಡೆಸಲಿದ್ದು, ಎರಡೂ ವಿಶ್ವವಿದ್ಯಾಲಯಗಳ ವಿಶ್ವ-ದರ್ಜೆಯ ಪರಿಣತಿ, ಸುಧಾರಿತ ಸಂಶೋಧನಾ ಮೂಲಸೌಕರ್ಯಗಳು ಮತ್ತು ಸಂಯೋಜಿತ ಜಾಗತಿಕ ಸಂಪರ್ಕ ಜಾಲದ ಪ್ರವೇಶ ಪಡೆಯಲಿದ್ದಾರೆ.

ಈ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಅಂತರಶಿಸ್ತೀಯ ಸಂಶೋಧನೆಯನ್ನು ಕೇಂದ್ರೀಕರಿಸಿ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಆರೋಗ್ಯ, ಸುಸ್ಥಿರತೆ, ಕ್ರೀಡಾ ವಿಜ್ಞಾನ, ಮಾನವೀಯ ಮತ್ತು ಉದಯೋನ್ಮುಖ ಅಂತರಶಿಸ್ತೀಯ ಕ್ಷೇತ್ರಗಳಿಗೆ ವಿಸ್ತರಿಸುವ ಯೋಜನೆಗಳೊಂದಿಗೆ ಪ್ರಾರಂಭಿಸಲಾಗಿದೆ.
ಈ ಪಾಲುದಾರಿಕೆಯು ಮಾಹೆಯಲ್ಲಿ ಗ್ರಿಫಿತ್-ಮಾಹೆ ಸಂಶೋಧನಾ ಶ್ರೇಷ್ಠತೆಯ ಕೇಂದ್ರಕ್ಕೆ ಅಡಿಪಾಯ ಹಾಕಲಿದೆ. ಇದು ಸಹಯೋಗಿ, ಹೆಚ್ಚಿನ ಪ್ರಭಾವದ ಸಂಶೋಧನಾ ಮತ್ತು ಆವಿಷ್ಕಾರದ ದೀರ್ಘಾವಧಿಯ ವೇದಿಕೆಯಾಗುವ ದೃಷ್ಟಿಕೋನವನ್ನು ಹೊಂದಿದೆ. ಈ ಉಪಕ್ರಮದ ಭಾಗವಾಗಿ, ಎರಡೂ ಸಂಸ್ಥೆಗಳು ಮುಂದಿನ ಮೂರು ವರ್ಷಗಳಲ್ಲಿ ಜಂಟಿ ಸಂಶೋಧನಾ ಯೋಜನೆಗಳನ್ನು ಬೆಂಬಲಿಸಲು ಗ್ರಿಫಿತ್ ವಿಶ್ವವಿದ್ಯಾಲಯದಿಂದ AUD 100,000 ಆರಂಭಿಕ ಹೂಡಿಕೆಯಿಂದ ಬೆಂಬಲಿತವಾದ ಸಹಯೋಗಿ ಬೀಜ ನಿಧಿ ಯೋಜನೆಯನ್ನು ಸ್ಥಾಪಿಸಲಿವೆ.

ಪಾಲುದಾರಿಕೆಯ ಕುರಿತು ಮಾತನಾಡಿದ ಪ್ರೊಫೆಸರ್ ಕ್ಯಾರೊಲಿನ್, “ಮಾಹೆಯೊಂದಿಗಿನ ನಮ್ಮ ಪಾಲುದಾರಿಕೆಯು ಗ್ರಿಫಿತ್ನ ಬಹು ಮಹತ್ವದ ಮತ್ತು ಅಂತಾರಾಷ್ಟ್ರೀಯ ಸಂಶೋಧನೆಗೆ ಒತ್ತು ನೀಡುವ ಸಂಬಂಧವಾಗಿದೆ ಮತ್ತು ಇಂದಿನ ಘೋಷಣೆಯು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ. ಈ ಮೈಲಿಗಲ್ಲು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಸಂಶೋಧನಾ ಮತ್ತು ಆವಿಷ್ಕಾರದ ಬಂಧವನ್ನು ಸದೃಢಗೊಳಿಸುವ ಜೊತೆಗೆ ಡಾಕ್ಟೋರಲ್ ವಿದ್ವಾಂಸರಿಗೆ ಎರಡು ವಿಶ್ವದರ್ಜೆಯ ವಿಶ್ವವಿದ್ಯಾಲಗಳ ಪರಿಣತಿ, ಮೂಲಭೂತ ಸೌಕರ್ಯ ಮತ್ತು ಸಂಪರ್ಕಗಳು ಲಭ್ಯವಾಗಲಿವೆ” ಎಂದು ಅಭಿಪ್ರಾಯಪಟ್ಟರು.

ಪಾಲುದಾರಿಕೆಯ ಕುರಿತು ಹೇಳಿಕೆ ನೀಡಿರುವ ಉಪಕುಲಪತಿ ಡಾ.ಶರತ್ ಕೆ. ರಾವ್, “ ಮಾಹೆಯು ಯಾವಾಗಲೂ ಸಮಾಜದ ವಿಕಸಿತಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸಲು ಜಾಗತಿಕ ಸಂಪರ್ಕದ ಸಂಶೋಧನೆ ಮತ್ತು ಅಂತರಶಿಸ್ತೀಯ ಸಹಯೋಗಗಳು ಬಹುಮುಖ್ಯ ಎಂದು ನಂಬಿದೆ. ಗ್ರಿಫಿತ್ ವಿಶ್ವವಿದ್ಯಾಲಯದೊಂದಿಗಿನ ನಮ್ಮ ದೀರ್ಘಾವಧಿಯ ಸಂಬಂಧವು ಎರಡೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅರ್ಥಪೂರ್ಣ ಶೈಕ್ಷಣಿಕ ಅವಕಾಶಗಳನ್ನು ಒದಗಿಸಿದೆ.

ಈ ವಿಸ್ತೃತ ಪಾಲುದಾರಿಕೆಯ ಮೂಲಕ, ನಾವು ಡಾಕ್ಟರೇಟ್ ಶಿಕ್ಷಣ ಮತ್ತು ಸಹಯೋಗದ ಸಂಶೋಧನೆಯನ್ನು ಬಲಪಡಿಸುವುದಲ್ಲದೆ, ಆವಿಷ್ಕಾರಗಳಿಗೆ ಪ್ರೇರಣೆ ನೀಡುವ , ಜಾಗತಿಕ ಜ್ಞಾನ ವಿನಿಮಯವನ್ನು ಉತ್ತೇಜಿಸುವ ಮತ್ತು ನೈಜ-ಪ್ರಪಂಚದ ಪ್ರಭಾವದೊಂದಿಗೆ ಪರಿಹಾರಗಳನ್ನು ಒದಗಿಸುವ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ ” ಎಂದರು.

ಸಹಭಾಗಿತ್ವದ ಕುರಿತು ಪ್ರತಿಕ್ರಿಯಿಸಿದ ಮಾಹೆ ಬೆಂಗಳೂರಿನ ಪ್ರೊ ಉಪಕುಲಪತಿ ಪ್ರೊ.ಮಧು ವೀರರಾಘವನ್,” ಈ ಪಾಲುದಾರಿಕೆಯು ಉನ್ನತ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಜಾಗತಿಕ ಸಹಯೋಗದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಡ್ಯುಯಲ್ ಅವಾರ್ಡ್ ಡಾಕ್ಟರಲ್ ಪ್ರೋಗ್ರಾಂ ಮತ್ತು ಪ್ರಸ್ತಾವಿತ ಸಂಶೋಧನಾ ಶ್ರೇಷ್ಠತಾ ಕೇಂದ್ರವು ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಪರಿಣತಿ, ಸಹಯೋಗದ ಸಂಶೋಧನಾ ಪರಿಸರ ವ್ಯವಸ್ಥೆಗಳನ್ನು ಒದಗಿಸುವುದರ ಜೊತೆಗೆ, ಜಾಗತಿಕ ಸವಾಲುಗಳ ಕುರಿತು ಕೆಲಸ ಮಾಡುವ ಅವಕಾಶಗಳನ್ನು ಒದಗಿಸುತ್ತದೆ.

ಇದು ಸಂಶೋಧನೆ-ನೇತೃತ್ವದ ಆವಿಷ್ಕಾರಗಳನ್ನು ಬೆಳೆಸುವ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಜ್ಞಾನ ವಲಯಕ್ಕೆ ಕೊಡುಗೆ ನೀಡುವಂತಹ ಸದೃಢ ಅಂತರರಾಷ್ಟ್ರೀಯ ಶೈಕ್ಷಣಿಕ ಜಾಲಗಳನ್ನು ನಿರ್ಮಿಸುವ ಮಾಹೆ ಬೆಂಗಳೂರು ಸಂಸ್ಥೆಯ ದೃಷ್ಟಿಕೋನವನ್ನು ಬಲಪಡಿಸುತ್ತದೆ” ಎಂದಿದ್ದಾರೆ.

ಗ್ರಿಫಿತ್ ವಿಶ್ವವಿದ್ಯಾನಿಲಯವು 50ನೇ ವಾರ್ಷಿಕೋತ್ಸವದ ಮೈಲಿಗಲ್ಲನ್ನು ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದ್ದು, ಸಂಶೋಧನೆ, ಆವಿಷ್ಕಾರ ಮತ್ತು ಉನ್ನತ ಶಿಕ್ಷಣದಲ್ಲಿ ಐದು ದಶಕಗಳ ಜಾಗತಿಕ ಪ್ರಭಾವವನ್ನು ಪ್ರತಿಬಿಂಬಿಸುತ್ತಿದೆ.

ಈ ಬಹುಹಂತದ ಉಪಕ್ರಮವು, ಪ್ರಕಟಣೆಗಳು ಮುಂದಿನ ದಿನಗಳಲ್ಲಿ ವಿಷಯ-ಪುರಾವೆ ಅಧ್ಯಯನಗಳು ಮತ್ತು ಅಂತಾರಾಷ್ಟ್ರೀಯ ಅನುದಾನ ಅವಕಾಶಗಳು ಸೇರಿದಂತೆ ಆರಂಭಿಕ ಹಂತದ ಸಂಶೋಧನಾ ಫಲಿತಾಂಶಗಳಿಗೆ ವೇಗ ನೀಡುವ ನಿರೀಕ್ಷೆಯಿದೆ. ಜೊತೆಗೆ, ವಿಸ್ತೃತ ಉದ್ಯಮ ಸಹಯೋಗಗಳು, ವಿಷಯಾಧಾರಿತ ಸಂಶೋಧನಾ ಸಮೂಹಗಳು ಮತ್ತು ಅಂತಿಮವಾಗಿ ಮಾಹೆಯಲ್ಲಿ ಕ್ಯಾಂಪಸ್ನಲ್ಲಿ ಸಹ-ಬ್ರಾಂಡ್ನ ಭೌತಿಕ ಸಂಶೋಧನಾ ಉಪಸ್ಥಿತಿಗೆ ಇದು ಹಾದಿಯಾಗಲಿದೆ.

ಉಭಯ ದೇಶಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಶಿಕ್ಷಣ, ಸಂಶೋಧನೆ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗದ ಬೆಳವಣಿಗೆಗೆ ಸಾಕ್ಷಿಯಾಗುವುದನ್ನು ಮುಂದುವರಿಸಲಿವೆ. ಇದಕ್ಕೆ ಸದೃಢ ಸಾಂಸ್ಥಿಕ ಪಾಲುದಾರಿಕೆಗಳು ಮತ್ತು ಹಂಚಿಕೆಯ ಕಾರ್ಯತಂತ್ರದ ಆದ್ಯತೆಗಳು ಬೆಂಬಲ ನೀಡಲಿವೆ. ಗ್ರಿಫಿತ್ ವಿಶ್ವವಿದ್ಯಾಲಯ-ಮಾಹೆ ಸಹಯೋಗವು ಜನರಿಂದ ಜನರ ಸಂಬಂಧಗಳನ್ನು ಬಲವಾಗಿಸುವ ಮತ್ತು ಎರಡೂ ದೇಶಗಳ ನಡುವೆ ಜಾಗತಿಕವಾಗಿ ಪ್ರಸ್ತುತವಾಗಿರುವ ಸಂಶೋಧನಾ ಫಲಿತಾಂಶಗಳನ್ನು ಸುಧಾರಿಸುವ ವಿಶಾಲ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಈ ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿರುವ ವ್ಯಾಪಾರ ಮತ್ತು ಹೂಡಿಕೆಯ ಕ್ವೀನ್ಸ್ಲ್ಯಾಂಡ್, ದಕ್ಷಿಣ ಏಷಿಯಾದ ಕ್ವೀನ್ಸ್ಲ್ಯಾಂಡ್ ಹಿರಿಯ ವ್ಯಾಪಾರ ಮತ್ತು ಹೂಡಿಕೆ ಆಯುಕ್ತ ಅಭಿನವ್ ಭಾಟಿಯಾ “ಕ್ವೀನ್ಸ್ಲ್ಯಾಂಡ್ ಮತ್ತು ಭಾರತವು ಶಿಕ್ಷಣ, ಸಂಶೋಧನೆ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಸದೃಢ ಮತ್ತು ಬೆಳೆಯುತ್ತಿರುವ ಸಂಬಂಧವನ್ನು ಹೊಂದಿವೆ ಮತ್ತು ಈ ರೀತಿಯ ಪಾಲುದಾರಿಕೆಗಳು ದೀರ್ಘಕಾಲೀನ ಸಾಂಸ್ಥಿಕ ಸಹಯೋಗದ ಅಗಾಧ ಮೌಲ್ಯವನ್ನು ಪ್ರತಿಬಿಂಬಿಸುತ್ತವೆ. ಜಾಗತಿಕ ಪ್ರತಿಭೆಯನ್ನು ಬೆಳೆಸಲು, ಪ್ರಭಾವಶಾಲಿ ಸಂಶೋಧನೆಯನ್ನು ವೇಗಗೊಳಿಸಲು ಮತ್ತು ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಬಲವಾದ ಶೈಕ್ಷಣಿಕ ಮತ್ತು ಆವಿಷ್ಕಾರದ ಸಂಪರ್ಕಗಳನ್ನು ಹುಟ್ಟುಹಾಕುವ ದೃಷ್ಟಿಯಿಂದ ಎರಡೂ ಪ್ರಮುಖ ವಿಶ್ವವಿದ್ಯಾಲಯಗಳನ್ನು ಒಟ್ಟುಗೂಡಿಸುವ ಉಪಕ್ರಮಗಳನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ” ಎಂದರು.

ಭಾರತದ ಮಾಹೆಯ ಸದೃಢ ಶೈಕ್ಷಣಿಕ ಮತ್ತು ಕ್ಲಿನಿಕಲ್ ಪರಿಸರ ವ್ಯವಸ್ಥೆಯನ್ನು ಗ್ರಿಫಿತ್ ವಿಶ್ವವಿದ್ಯಾಲಯದ ಜಾಗತಿಕವಾಗಿ ಗುರುತಿಸಲ್ಪಟ್ಟ ಸಂಶೋಧನಾ ಸಾಮರ್ಥ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಆರೋಗ್ಯ ರಕ್ಷಣೆ, ತಂತ್ರಜ್ಞಾನ, ಸುಸ್ಥಿರತೆ ಮತ್ತು ಸಮಾಜವನ್ನು ಒಳಗೊಂಡ ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ನೀಡುವ ಗುರಿಯನ್ನು ಈ ಪಾಲುದಾರಿಕೆ ಹೊಂದಿದೆ.

ಡ್ಯುಯಲ್ ಅವಾರ್ಡ್ ಡಾಕ್ಟರಲ್ ಕಾರ್ಯಕ್ರಮದ ಅಡಿಯಲ್ಲಿ ಅಭ್ಯರ್ಥಿಗಳ ಪ್ರವೇಶ ಮತ್ತು ಸಹಯೋಗದ ಬೀಜ ನಿಧಿ ಯೋಜನೆಗಳಿಗೆ ಮೊದಲ ಕರೆ ಕುರಿತು ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸ್ತ್ರೀ ಶಕ್ತಿಯ ಮತ ಒಲಿಸಿಕೊಂಡರೆ ಗೆಲುವು ಸುಲಭ: ಡಾ.ಬೈರಮಂಗಲ ರಾಮೇಗೌಡ

Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ. 

ಬಿಟ್‌ಡೆಲ್ಟಾ ಇಂಡಿಯಾ ವಿಶ್ವದ ಅತಿದೊಡ್ಡ ಕ್ರಿಪ್ಟೋ ಮಾರುಕಟ್ಟೆಗಾಗಿ ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ (VDA) ಮೂಲಸೌಕರ್ಯವನ್ನು ಪ್ರಾರಂಭಿಸಿದೆ.

ಭಾರತದಲ್ಲಿನ ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಗಳು ಮೊಬೈಲ್ ನಾವೀನ್ಯತೆಯ ಭವಿಷ್ಯವನ್ನು ಸಹ-ಸೃಷ್ಟಿಸಲು ಸ್ಟಾರ್ಟ್ಅಪ್ಗಳನ್ನು ಆಹ್ವಾನಿಸುತ್ತವೆ.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ         ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ

ಸಂಗೊಳ್ಳಿ ರಾಯಣ್ಣ  ಪ್ರಶಸ್ತಿಗೆ ಭಾಜನರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕೆಯುಡಬ್ಲೂಜೆ ಯಿಂದ ಅಭಿನಂದನೆ