--Ads--

ಸ್ತ್ರೀ ಶಕ್ತಿಯ ಮತ ಒಲಿಸಿಕೊಂಡರೆ ಗೆಲುವು ಸುಲಭ: ಡಾ.ಬೈರಮಂಗಲ ರಾಮೇಗೌಡ

On: May 15, 2026 8:40 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಸ್ತ್ರೀ ಶಕ್ತಿಯ ಮತ ಒಲಿಸಿಕೊಂಡರೆ ಗೆಲುವು ಸುಲಭ: ಡಾ.ಬೈರಮಂಗಲ ರಾಮೇಗೌಡ

ಬೆಂಗಳೂರು: ಸೀ ಶಕ್ತಿಯ ಒಗ್ಗಟ್ಟಿನ ಬಲ ಏನು ಎಂಬುದು ಈಗಾಗಲೇ ಸರ್ಕಾರಗಳಿಗೆ ಅರ್ಥವಾಗಿದೆ ಈ ಕಾರಣದಿಂದಲೇ ಸೀ ಶಕ್ತಿಯ ಸೆಬಲೀಕರಣದ ಹೆಸರಿನಲ್ಲಿ ಸರ್ಕಾರಗಳು ಗ್ಯಾರಂಟಿಗಳನ್ನು ಘೋಷಿಸುತ್ತಿರುವುದು ಸ್ತ್ರೀಶಕ್ತಿಗೆ ಸಲ್ಲುವ ವರದಾನ ಎಂದು ಸಾಹಿತ್ಯ ಡಾ.ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ಸಾಹಿತ್ಯ ಸಂಭ್ರಮ 2026ರ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸ್ತ್ರೀ ಶಕ್ತಿಯನ್ನು ಒಲಿಸಿಕೊಂಡರೆ ನಾವು ಐದು ವರ್ಷ ರಾಜಕಾರಣ ಮಾಡಬಹುದು ಎಂಬ ಉದ್ದೇಶದಿಂದಲೇ ಸ್ತ್ರೀಯರ ಪರ ಗ್ಯಾರಂಟಿಗಳು ಚಾಲ್ತಿಯಲ್ಲಿರುವುದು. ಹಾಗಾಗಿ ಸ್ತ್ರೀಶಕ್ತಿಯು ಕೇವಲ ಗ್ಯಾರಂಟಿ ಗಳಿಗೆ ಮಾತ್ರ ಸೀಮಿತವಾಗದೆ, ದೇಶವನ್ನು ಆಳುವ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದು ಅವರು ಅಭಿಮತ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಸಾಹಿತಿಗಳು ಬಹಳ ಇಂದಿನ ವಿದ್ಯಾರ್ಥಿಗಳ ಪರಿಸ್ಥಿತಿ ಒತ್ತಡದಲ್ಲಿದ್ದು, ತಂದೆ ತಾಯಿಗಳನ್ನು ತೃಪ್ತಿಪಡಿಸು ವುದರ ಜೊತೆಗೆ, ಉತ್ಕೃಷ್ಟ ಫಲಿತಾಂಶ ವನ್ನೂ ಸಹ ತೆಗೆದುಕೊಳ್ಳಬೇಕಾಗುತ್ತದೆ. ಈ ಒತ್ತಡದ ಪರಿಸ್ಥಿತಿ ಯಲ್ಲಿಯೂ ಸಹ ಸಾಕಷ್ಟು ಎಸ್ ಎಸ್ ಎಲ್‌ಸಿಯ ಜಿಗಣಿ ಬೃಂದಾವನ ಶಾಲೆಯ ವಿದ್ಯಾರ್ಥಿಗಳು ಟಾಪ್ ಫಲಿತಾಂಶವನ್ನು ಪಡೆದಿದ್ದು, ಅವರನ್ನ ಗುರುತಿಸಿ ಈ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಡಾ. ಮಂಜುಳಾ ಪಾವಗಡ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅವರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಗಣ್ಯರಾದ ಡಾ. ಧನಲಕ್ಷ್ಮಿ, ಡಾ. ಮಾಲತಿ, ಆಯೋಜಕಿ ಮಂಜುಳಾ ಪಾವಗಡ, ಡಾ. ಸುನಿಲ್ ಪವಾರ್, ಡಾ ಟಿ ಶ್ರೀನಿವಾಸ್ ಸೇರಿದಂತೆ 250ಕ್ಕೂ ಹೆಚ್ಚು ಜನ ಹಾಜರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯ ಮತ್ತು ಮಾಹೆಯ ಡ್ಯುಯಲ್ ಪಿಎಚ್ಡಿ ಕಾರ್ಯಕ್ರಮ ಮತ್ತು ಸಂಶೋಧನಾ ಶ್ರೇಷ್ಠತೆಯ ಉಪಕ್ರಮದೊಂದಿಗೆ ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ

Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ. 

ಬಿಟ್‌ಡೆಲ್ಟಾ ಇಂಡಿಯಾ ವಿಶ್ವದ ಅತಿದೊಡ್ಡ ಕ್ರಿಪ್ಟೋ ಮಾರುಕಟ್ಟೆಗಾಗಿ ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ (VDA) ಮೂಲಸೌಕರ್ಯವನ್ನು ಪ್ರಾರಂಭಿಸಿದೆ.

ಭಾರತದಲ್ಲಿನ ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಗಳು ಮೊಬೈಲ್ ನಾವೀನ್ಯತೆಯ ಭವಿಷ್ಯವನ್ನು ಸಹ-ಸೃಷ್ಟಿಸಲು ಸ್ಟಾರ್ಟ್ಅಪ್ಗಳನ್ನು ಆಹ್ವಾನಿಸುತ್ತವೆ.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ         ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ

ಸಂಗೊಳ್ಳಿ ರಾಯಣ್ಣ  ಪ್ರಶಸ್ತಿಗೆ ಭಾಜನರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕೆಯುಡಬ್ಲೂಜೆ ಯಿಂದ ಅಭಿನಂದನೆ