--Ads--

ತವರುಮನೆಗೆ ಬಂದ ಗೌರಿ ,  ಗಣಪನ ಆಗಮನ

On: September 14, 2026 12:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ತವರುಮನೆಗೆ ಬಂದ ಗೌರಿ ,  ಗಣಪನ ಆಗಮನ

ಗೌರಿ–ಗಣೇಶ ಸೌಹಾರ್ದದ ಹಬ್ಬ

*ಭಾದ್ರಪದದ ತಂಗಾಳಿ ಬೀಸಿದಾಗ
*ತದಿಗೆಯ ಬೆಳಕಲಿ ಹಬ್ಬ ಅರಳಿದಾಗ
*ತವರುಮನೆಗೆ ಬಂದ ಮಗಳಂತೆ
*ಗೌರಿಯನ್ನು ಬರಮಾಡಿಕೊಳ್ಳುವ ಸಂಭ್ರಮ ಕಾಣುತ್ತದೆ

*ಅರಿಶಿನದ ಬಣ್ಣದಲಿ ಮಮತೆ
*ಕುಂಕುಮದ ರಂಗಿನಲಿ ಸೌಭಾಗ್ಯ
*ಬಾಗಿನದ ಸಿಹಿಯಲಿ ಬಂಧುತ್ವ
*ತಲೆಮಾರುಗಳಿಂದ ಹರಿದು ಬಂದ
*ನಮ್ಮ ನಾಡಿನ ಸಂಸ್ಕೃತಿಯ ಸೊಗಡು

*ಮರುದಿನ ಚತುರ್ಥಿಯ ಶುಭದಿನ
*ಗಣೇಶ ಚತುರ್ಥಿಯ ಸಂಭ್ರಮ ಮನೆಮನೆ ತುಂಬುತ್ತದೆ
*ಮಕ್ಕಳ ನಗುವಿನ ಕಲರವದ ನಡುವೆ
*ಬೀದಿ ಬೀದಿಯೂ ಹಬ್ಬದ ಸೊಬಗಿನಿಂದ ನಲಿಯುತ್ತದೆ

*ನಂಬಿಕೆಗಳು ಬೇರೆ ಇರಬಹುದು,
*ಆಚರಣೆಗಳು ಬೇರೆ ಇರಬಹುದು
*ಹೃದಯದ ಭಾಷೆ ಒಂದೇ
*ಪ್ರೀತಿ ಗೌರವ ಮಾನವೀಯತೆ

*ನಾನು ನನ್ನ ನಂಬಿಕೆಯನ್ನು ಗೌರವಿಸುವಂತೆ
*ನಿಮ್ಮ ನಂಬಿಕೆಗೂ ಗೌರವ ನೀಡುತ್ತೇನೆ
*ನಿಮ್ಮ ಹಬ್ಬದ ಸಂತಸದಲ್ಲಿ
*ಒಬ್ಬ ಸಹೋದರನಾಗಿ ನನ್ನ ಶುಭಹಾರೈಕೆ ಸಲ್ಲಿಸುತ್ತೇನೆ

*ಗೌರಿ–ಗಣೇಶ ಹಬ್ಬ
*ನಿಮ್ಮ ಪಾಲಿಗೆ ಪವಿತ್ರ ಸಂಭ್ರಮ
*ನನ್ನ ಪಾಲಿಗೆ ಅದು
*ನಮ್ಮ ನೆಲದ ಸಂಸ್ಕೃತಿಯ ಸೊಗಡನ್ನು
*ಸಹಬಾಳ್ವೆಯ ಸೌಂದರ್ಯವನ್ನು ನೆನಪಿಸುವ ಸಂದರ್ಭ

*ಮಣ್ಣಿನ ಈ ನೆಲ ನಮ್ಮೆಲ್ಲರದು
*ಮಳೆಯ ಹನಿ ಎಲ್ಲರಿಗೂ ಒಂದೇ
*ಕಾವೇರಿಯ ನೀರು ಭೇದ ಮಾಡುವುದಿಲ್ಲ
*ಗಾಳಿಯೂ ಯಾರ ಧರ್ಮ ಕೇಳುವುದಿಲ್ಲ

*ಹಾಗೆಯೇ ನಮ್ಮ ಬದುಕಿನಲ್ಲೂ
*ದ್ವೇಷದ ಗೋಡೆಗಳು ಏಕೆ?
*ಪ್ರೀತಿಯ ಬಾಗಿಲು ತೆರೆದಿರಲಿ
*ಸೌಹಾರ್ದದ ದೀಪ ಸದಾ ಬೆಳಗಲಿ

*ಕಾವೇರಿ ಹರಿಯುವ ಕೊಡಗಿನ ಮಣ್ಣಲಿ
*ಸೌಹಾರ್ದದ ಹೊಳೆ ಎಂದೂ ಬತ್ತದಿರಲಿ
*ಮಂದಿರ ಮಸೀದಿ ಚರ್ಚುಗಳಾಚೆಯೂ
*ಮಾನವೀಯತೆಯ ಹೃದಯ ಸದಾ ಒಂದಾಗಿರಲಿ

*ಹಬ್ಬದ ಸಂಭ್ರಮ
*ಮನೆಗಳಲ್ಲಿ ನಗು ತರಲಿ
*ಕುಟುಂಬಗಳಲ್ಲಿ ನೆಮ್ಮದಿ ನೆಲೆಸಲಿ
*ನಮ್ಮ ನಾಡಿನಲ್ಲಿ ಸಹೋದರತೆ ಅರಳಲಿ

*ಹಬ್ಬಗಳು ಬೇರೆ ಇರಬಹುದು
*ಹಾರೈಕೆ ಮಾತ್ರ ಒಂದೇ
*ಪ್ರಾರ್ಥನೆಗಳು ಬೇರೆ ಇರಬಹುದು
*ಒಳ್ಳೆಯ ಬದುಕಿನ ಆಶಯ ಒಂದೇ

*ನಂಬಿಕೆ ನಮ್ಮ ಹೃದಯದ ಬೆಳಕು
*ಗೌರವ ನಮ್ಮ ನಡುವಿನ ಸೇತು
*ಮಾನವೀಯತೆ ನಮ್ಮೆಲ್ಲರ ಬಂಧ
*ಇದೇ ನಮ್ಮ ನಾಡಿನ ನಿಜವಾದ ಸೌಂದರ್ಯ

*ಗೌರಿ–ಗಣೇಶ ಹಬ್ಬ ಆಚರಿಸುವ
*ನಾಡಿನ ಸಮಸ್ತ ಹಿಂದೂ ಸಹೋದರ–ಸಹೋದರಿಯರಿಗೆ
*ನನ್ನ ಹೃದಯಪೂರ್ವಕ ಶುಭಾಶಯಗಳು

*ಈ ಪವಿತ್ರ ಹಬ್ಬದ ಸಂದರ್ಭದಲ್ಲಿ
*ಎಲ್ಲರ ಮನೆ–ಮನಗಳಲ್ಲಿ
*ಸಂತೋಷ ಶಾಂತಿ ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ
*ನಮ್ಮ ಕೊಡಗು ಹಾಗೂ ಕರ್ನಾಟಕ
*ಸೌಹಾರ್ದ ಸಹಬಾಳ್ವೆ ಮತ್ತು *ಮಾನವೀಯತೆಯಲ್ಲಿ
*ಇನ್ನಷ್ಟು ಬೆಳಗಲಿ

ಗೌರಿ–ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

✍️ ಎಂ.ಎಂ. ದಾವೂದ್
9945375180

WhatsApp

Join Now

Telegram

Join Now

Instagram

Join Now