--Ads--

ನರಕ

On: October 24, 2026 2:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ನರಕ

ತನ್ನ ಪುಟ್ಟಂಬದ ಸಂಸಾರಕ್ಕಾಗಿ ಹಗಲಿರುಳು ಬೆವರು ಸುರಿಸುವವನು ಹಸಿವನ್ನು ಮರೆತು ದುಡಿಯುವವನು ತನ್ನ ಕನಸುಗಳನ್ನೇ ಬಲಿಕೊಡುವವನು

ಮನೆಗೆ ಮರಳುವಾಗ ನಗುವ ಮುಖ ಮನದೊಳಗೆ ಸಾವಿರ ನೋವಿನ ಸುಳಿ ಮಕ್ಕಳ ನಾಳೆ ಬೆಳಗಲೆಂದು ತನ್ನ ಇಂದನ್ನೇ ಕತ್ತಲೆಗೆ ತಳ್ಳುವವನು

ಮನೆಗೆ ಮರಳಿದಾಗ ಪ್ರೀತಿ ಸಿಗದಿದ್ದರೆ ಮಾತಿಗೊಂದು ಮುಳ್ಳು ಚುಚ್ಚಿದರೆ ದಿನವಿಡೀ ಹೊತ್ತ ನೋವಿನ ಮೇಲೆ ಮತ್ತೊಂದು ನೋವು ಬಂದು ಕುಳಿತರೆ

ಅವನೂ ಮನುಷ್ಯನೇ ಅಲ್ಲವೇ? ಅವನಿಗೂ ಕನಸುಗಳಿಲ್ಲವೇ? ಕಣ್ಣೀರನ್ನು ಮರೆಮಾಚುವ ಎದೆಯೊಳಗೆ ನೋವಿನ ನದಿಯೇ ಹರಿಯುವುದಿಲ್ಲವೇ?

ಅವನು ದುಡಿಯುವ ಯಂತ್ರವಲ್ಲ ಭಾವನೆಗಳಿರುವ ಜೀವ ಅವನ ಮೌನವನ್ನು ದೌರ್ಬಲ್ಯವೆಂದು ಭಾವಿಸಬೇಡ ಅದರೊಳಗಿರಬಹುದು ಮುರಿದ ಬದುಕಿನ ಕೂಗು

ಸಂಸಾರವೆಂದರೆ ಒಬ್ಬರ ತ್ಯಾಗವಲ್ಲ ಇಬ್ಬರ ಪ್ರೀತಿ ಪರಸ್ಪರ ಗೌರವ ಒಬ್ಬರ ನೋವಿಗೆ ಮತ್ತೊಬ್ಬರು ಮದ್ದಾದಾಗ ಮನೆಯೇ ಸ್ವರ್ಗ ಬದುಕೇ ಸಾರ್ಥಕ

ಹೊರಗಿನ ಜಗತ್ತಿನಲ್ಲಿ ಸೋತರೂ ಪರವಾಗಿಲ್ಲ ಮನೆಗೆ ಬಂದಾಗ ಪ್ರೀತಿ ಸೋಲಬಾರದು ದುಡಿದು ದಣಿದ ಜೀವಕ್ಕೆ ನೆಮ್ಮದಿ ಸಿಗದಿದ್ದರೆ ಆ ಮನೆ ಗೋಡೆಗಳಿರುವ ನರಕವಾಗಬಾರದು

✍🏽 ಎಂ ಎಂ ದಾವುದ್

WhatsApp

Join Now

Telegram

Join Now

Instagram

Join Now