--Ads--

ಅಂದು ಚರಂಡಿ ನಿರ್ಮಿಸಲು ಒತ್ತಾಯಿಸಿದ್ದಕ್ಕೆ ಆರೋಪ ಇಂದು ಅದೇ ಪ್ರಶ್ನೆ ಮುನ್ನೆಲೆಗೆ“ಸತ್ಯಮೇವ ಜಯತೆ” ಅಂದು  ಹೇಳಿದ ಮಾತಿಗೆ ಇಂದು ಉತ್ತರ ಬೇಕಿದೆ: ಎಂ.ಎಂ. ದಾವುದ್

On: October 16, 2026 12:43 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಅಂದು ಚರಂಡಿ ನಿರ್ಮಿಸಲು ಒತ್ತಾಯಿಸಿದ್ದಕ್ಕೆ ಆರೋಪ ಇಂದು ಅದೇ ಪ್ರಶ್ನೆ ಮುನ್ನೆಲೆಗೆ“ಸತ್ಯಮೇವ ಜಯತೆ” ಅಂದು  ಹೇಳಿದ ಮಾತಿಗೆ ಇಂದು ಉತ್ತರ ಬೇಕಿದೆ: ಎಂ.ಎಂ. ದಾವುದ್

ಕುಶಾಲನಗರ: ಸಾರ್ವಜನಿಕರ ಹಿತಕ್ಕಾಗಿ ಧ್ವನಿ ಎತ್ತುವುದು ತಪ್ಪೇ? ಜನರ ತೆರಿಗೆ ಹಣದಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಪ್ರಶ್ನಿಸುವುದು ಅಪರಾಧವೇ? ಕುಶಾಲನಗರದ ಜಿ.ಎಲ್ ಆಚಾರ್ಯ ಹಿಂಭಾಗದಲ್ಲಿರುವ ಹಳೆಯ ರೈತ ಭವನ ರಸ್ತೆಯ ಕಾಂಕ್ರೀಟ್ ರಸ್ತೆ ಕಾಮಗಾರಿಯ ವಿಚಾರವಾಗಿ ಕೊಡಗು ಜನ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಎಂ.ಎಂ. ದಾವುದ್ ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ

ಅಂದು ಈ ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಹಾಗೂ ದಲಿತ ಸಂಘರ್ಷ ಸಮಿತಿ ಭೀಮ ಗರ್ಜನೆಯ ಅಧ್ಯಕ್ಷರಾದ ನಾಗರಾಜು ಎಲ್.ಎಂ. ಅವರು ಅಲ್ಲಿಯ ನಿವಾಸಿಗಳ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಮೊದಲು ರಸ್ತೆಯ ಎರಡೂ ಬದಿಗಳಲ್ಲಿ ಸಮರ್ಪಕ ಚರಂಡಿ ನಿರ್ಮಿಸಿ ನಂತರ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದೆವು ಇದು ಯಾರ ವಿರುದ್ಧದ ಹೋರಾಟವೂ ಆಗಿರಲಿಲ್ಲ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ದೂರದೃಷ್ಟಿಯಿಂದ ಮಾಡಿದ ಮನವಿಯಾಗಿತ್ತು.

ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವ ಬದಲು ಕೆಲವರು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪ್ರಯತ್ನಿಸಿದ್ದರು ಎಂಬುದು ನನ್ನ ಅಂದಿನ ಆರೋಪ ಸಾರ್ವಜನಿಕರ ಸಮಸ್ಯೆಯನ್ನು ಮುಂದಿಟ್ಟಿದ್ದಕ್ಕೆ ಇಂತಹ ಪರಿಸ್ಥಿತಿ ಎದುರಿಸಬೇಕಾದದ್ದು ದುರದೃಷ್ಟಕರ

ಇಂದು ಸಾರ್ವಜನಿಕರ ಗಮನಕ್ಕೆ ಬಂದಿರುವ ದೃಶ್ಯಗಳು ಅಂದು ನಾವು ಎತ್ತಿದ್ದ ಚರಂಡಿ ವ್ಯವಸ್ಥೆಯ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ ಅಂದು ನಾನು ಹೇಳಿದ್ದ ಮಾತು ಇಷ್ಟೇ: ಮೊದಲು ಚರಂಡಿ ನಿರ್ಮಿಸಿ ನಂತರ ರಸ್ತೆ ಕಾಮಗಾರಿ ಮಾಡಿ ಇದರಲ್ಲಿ ತಪ್ಪೇನಿತ್ತು? ಸಾರ್ವಜನಿಕರ ಹಿತಕ್ಕಾಗಿ ನೀಡಿದ ಸಲಹೆಯನ್ನು ತಪ್ಪಾಗಿ ಅರ್ಥೈಸಿ ಆರೋಪ ಮಾಡುವ ಬದಲು ಆ ಸಮಸ್ಯೆಯನ್ನು ಪರಿಶೀಲಿಸಿದ್ದರೆ ಇಂದಿನ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿರಲಿಲ್ಲವೇ?

ಸಂಬಂಧಪಟ್ಟವರು ಉತ್ತರಿಸಲೇಬೇಕು : ರಸ್ತೆ ಕಾಮಗಾರಿಯ ಯೋಜನೆ ರೂಪಿಸಿದವರು ಯಾರು? ಚರಂಡಿ ವ್ಯವಸ್ಥೆಯ ಅಗತ್ಯವನ್ನು ಪರಿಶೀಲಿಸಿದವರು ಯಾರು? ಕಾಮಗಾರಿಯ ಗುಣಮಟ್ಟ ಮತ್ತು ಅನುಷ್ಠಾನದ ಮೇಲ್ವಿಚಾರಣೆ ಮಾಡಿದವರು ಯಾರು? ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯ ಹೊಣೆಗಾರರು ಹಾಗೂ ಕುಶಾಲನಗರ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಈ ಕಾಮಗಾರಿಯ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು

ಸಾರ್ವಜನಿಕರ ಹಣದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟ ಪಾರದರ್ಶಕತೆ ಮತ್ತು ದೀರ್ಘಕಾಲೀನ ಉಪಯುಕ್ತತೆ ಇರಬೇಕಲ್ಲವೇ? ಜನರ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಪರಿಹರಿಸುವುದು ಆಡಳಿತದ ಜವಾಬ್ದಾರಿಯಲ್ಲವೇ? ಈ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರಿಸಬೇಕು.

ಜನರ ಪರವಾಗಿ ಪ್ರಶ್ನಿಸುವುದು ನಮ್ಮ ಹಕ್ಕು

ಕೊಡಗು ಜನ ಅಭಿವೃದ್ಧಿ ಸಮಿತಿ ಸಾರ್ವಜನಿಕರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ರಸ್ತೆ ಚರಂಡಿ ಕುಡಿಯುವ ನೀರು ವಿದ್ಯುತ್ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನಮ್ಮ ಕರ್ತವ್ಯ ತಪ್ಪು ಕಂಡರೆ ಪ್ರಶ್ನಿಸುವುದು ಸಮಸ್ಯೆ ಕಂಡರೆ ಪರಿಹಾರಕ್ಕಾಗಿ ಒತ್ತಾಯಿಸುವುದು ನಮ್ಮ ಸಂಘಟನೆಯ ನಿಲುವು

ಅಂದು ನಮ್ಮ ಮನವಿಗೆ ಸೂಕ್ತ ಸ್ಪಂದನೆ ನೀಡುವ ಬದಲು ಆರೋಪಗಳ ಮೂಲಕ ನಮ್ಮನ್ನು ಎದುರಿಸಲು ಪ್ರಯತ್ನಿಸಲಾಯಿತು ಎಂಬುದು ನನ್ನ ಅಳಲು ಆದರೆ ಇಂತಹ ಘಟನೆಗಳಿಂದ ಸಾರ್ವಜನಿಕರ ಪರವಾಗಿ ಪ್ರಶ್ನಿಸುವ ನನ್ನ ಧ್ವನಿ ನಿಲ್ಲುವುದಿಲ್ಲ ವ್ಯಕ್ತಿಗಳ ವಿರುದ್ಧ ದ್ವೇಷ ಸಾಧಿಸುವುದು ನನ್ನ ಉದ್ದೇಶವಲ್ಲ ಜನರಿಗೆ ನ್ಯಾಯ ದೊರಕಬೇಕು ಮತ್ತು ಸಾರ್ವಜನಿಕ ಕಾಮಗಾರಿಗಳು ಸರಿಯಾಗಿ ನಡೆಯಬೇಕು ಎಂಬುದೇ ನನ್ನ ಆಶಯ

ಸತ್ಯಮೇವ ಜಯತೆ ಸತ್ಯಕ್ಕೆ ಎಂದಿಗೂ ಜಯ

ಅಂದು ನಾನು ಹೇಳಿದ್ದೆ
ಸತ್ಯಮೇವ ಜಯತೆ ಎಂದು* *ಇಂದು ಕೂಡ ಅದೇ ಮಾತನ್ನು ಪುನರುಚ್ಚರಿಸುತ್ತೇನೆ ಸಾರ್ವಜನಿಕರ ಹಿತಕ್ಕಾಗಿ ಎತ್ತಿದ ಪ್ರಶ್ನೆಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಅಂದು ನಾವು ಮುಂದಿಟ್ಟಿದ್ದ ಚರಂಡಿ ವ್ಯವಸ್ಥೆಯ ಅಗತ್ಯದ ಕುರಿತು ಇಂದು ಮತ್ತೆ ಚರ್ಚೆಯಾಗುತ್ತಿರುವಾಗ ಸಂಬಂಧಪಟ್ಟವರು ಆತ್ಮಾವಲೋಕನ ಮಾಡಿಕೊಳ್ಳಬೇಕು

ನಾನು ಕೇಳಿದ ಪ್ರಶ್ನೆಗಳಿಗೆ ವೈಯಕ್ತಿಕ ಆರೋಪಗಳ ಮೂಲಕವಲ್ಲ ವಾಸ್ತವಾಂಶಗಳ ಮೂಲಕ ಉತ್ತರ ನೀಡಬೇಕು ಈ ರಸ್ತೆ ಕಾಮಗಾರಿಯ ಕುರಿತು ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ಲೋಪಗಳಿದ್ದರೆ ಸರಿಪಡಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಕಾಮಗಾರಿಯ ಗುಣಮಟ್ಟ ಮತ್ತು ಚರಂಡಿ ವ್ಯವಸ್ಥೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸುತ್ತೇನೆ

ಜನರ ಹಣಕ್ಕೆ ಲೆಕ್ಕ ಕೇಳುವುದು ತಪ್ಪಲ್ಲ ಜನರ ಸಮಸ್ಯೆಗೆ ಪರಿಹಾರ ಕೇಳುವುದು ಅಪರಾಧವಲ್ಲ ಸಾರ್ವಜನಿಕರ ಹಿತಕ್ಕಾಗಿ ನನ್ನ ಧ್ವನಿ ಸದಾ ಮುಂದುವರಿಯುತ್ತದೆ

ಸತ್ಯಮೇವ ಜಯತೆ

ಎಂ.ಎಂ. ದಾವುದ್
ಸಂಸ್ಥಾಪಕರು ಕೊಡಗು ಜನ ಅಭಿವೃದ್ಧಿ ಸಮಿತಿ

WhatsApp

Join Now

Telegram

Join Now

Instagram

Join Now