--Ads--

ಎಸ್.ಎಸ್.ಎಲ್.ಸಿ. ಫಲಿತಾಂಶ -2024 : ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ಶೇ. 83.67 ರಷ್ಟು ಫಲಿತಾಂಶ

On: May 9, 2024 5:05 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್ 

ಎಸ್.ಎಸ್.ಎಲ್.ಸಿ. ಫಲಿತಾಂಶ-2024

ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

ಬೆಂ.ಗ್ರಾ. ಜಿಲ್ಲೆ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 83.67 ರಷ್ಟು ಫಲಿತಾಂಶ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 09  : 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 83.67 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಒಂಬತ್ತನೆಯ ಸ್ಥಾನ ಪಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 14223 ವಿದ್ಯಾರ್ಥಿಗಳಲ್ಲಿ 11900 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ, ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿ ಸ್ನೇಹ.‌ಎಲ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಪಡೆಯುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಶಾಂತಿನಿಕೇತನ ಆಂಗ್ಲ ಶಾಲೆಯ ಮಹೇಶ್ವರಿ 625 ಕ್ಕೆ 620 ಅಂಕ ಪಡೆದು ದ್ವಿತೀಯ ಸ್ಥಾನ,

ದೊಡ್ಡಬಳ್ಳಾಪುರ ಟೌನ್ ನ ನಳಂದ ಪ್ರೌಢಶಾಲೆಯ ಪೂರ್ಣ ಶ್ರೀ 625 ಕ್ಕೆ 619 ಅಂಕಿಗಳು ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.

6988 ಬಾಲಕಿಯರ ಪೈಕಿ 6171 ಬಾಲಕಿಯರು ಉತ್ತೀರ್ಣರಾಗಿ ಶೇ. 88.31 ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಬಾಲಕರು 7235 ಕ್ಕೆ 5729 ಉತ್ತೀರ್ಣತೆ ಪಡೆದು ಶೇ. 79.18 ರಷ್ಟು ಫಲಿತಾಂಶ ಪಡೆದಿದ್ದಾರೆ.

ದೇವನಹಳ್ಳಿ ಶೇ. 88.2 ರಷ್ಟು, ದೊಡ್ಡಬಳ್ಳಾಪುರ ಶೇ. 83.13 ರಷ್ಟು, ಹೊಸಕೋಟೆ ತಾಲ್ಲೂಕು ಶೇ. 82.22 ರಷ್ಟು ಹಾಗೂ ನೆಲಮಂಗಲ ತಾಲ್ಲೂಕು ಶೇ. 79.51 ರಷ್ಟು ಫಲಿತಾಂಶ ಪಡೆದಿವೆ.

WhatsApp

Join Now

Telegram

Join Now

Instagram

Join Now