--Ads--

ಶ್ರೀಪಟಾಲಮ್ಮದೇವಿ ಮತ್ತು ಶ್ರೀವೀರಸೊಣ್ಣಮ್ಮ ದೇವಿಯ ರಥೋತ್ಸವ

On: April 9, 2025 11:58 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರೀಪಟಾಲಮ್ಮದೇವಿ ಮತ್ತು ಶ್ರೀವೀರಸೊಣ್ಣಮ್ಮ ದೇವಿಯ ರಥೋತ್ಸವ

ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀಪಟಾಲಮ್ಮದೇವಿ ಮತ್ತು ಶ್ರೀವೀರಸೊಣ್ಣಮ್ಮ ದೇವಿಯ 29ನೇ ವರ್ಷದ ರಥೋತ್ಸವ ಹಾಗೂ ಕಾಯಿ ಉಟ್ಟು ಮಹೋತ್ಸವವು ಭಕ್ತಿ ಹಾಗೂ ಉತ್ಸಾಹಭರಿತವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿದ ರಥಕ್ಕೆ ಜನಪದ ಕಲಾ ತಂಡಗಳಾದ ಕೀಲುಕುದುರೆ, ಗಾರುಡಿ ಗೊಂಬೆ, ಮರದ ಕಾಲುಗಳ ಮೇಲಿಂದ ನಡೆಯುವ ವೇಷಧಾರಿಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಯಿತು ದೇವಾಲಯದ ಪರಿಸರದಲ್ಲಿ ಜಾತ್ರೆಯ ವಾತಾವರಣ ಕಾಣಿಸಿತ್ತು.

ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರದಿಂದ ದೇವಿಯ ವಿಗ್ರಹಗಳನ್ನು ಶೃಂಗಾರಿಸಿ ಮಹಾ ಮಂಗಳಾರತಿ ಸಲ್ಲಿಸಲಾಯಿತು. ಆಗಮಿಸಿದ್ದ ಭಕ್ತರಿಗೆ ತೀರ್ಥ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. ನಂತರ ನಾದಸ್ವರ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಅಲಂಕೃತ ತೇರಿನಲ್ಲಿ ಆರೋಹಿಸಿ ದೇವಾಲಯದ ಸುತ್ತಲೂ ಭಕ್ತರ ಪಾಲಿಗೆ ಪ್ರದಕ್ಷಿಣೆ ಹಮ್ಮಿಕೊಳ್ಳಲಾಯಿತು.

ಭಕ್ತಾದಿಗಳು ಹಾಗು ಗ್ರಾಮಸ್ಥರು ತೇರನ್ನು ಎಳೆದರೆ, ಕೆಲವರು ತೇರಿನ ತುದಿಯ ಕಳಶಕ್ಕೆ ಬಾಳೆ ಹಣ್ಣು ಎಸೆದು ತಮ್ಮ ಇಷ್ಟಾರ್ಥಗಳ ಪೂರಣಕ್ಕಾಗಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮಕ್ಕಳ ಆಟಿಕೆ, ಸೌಂದರ್ಯವರ್ಧಕ ಸಾಮಗ್ರಿಗಳ ಅಂಗಡಿಗಳು, ಐಸ್ ಕ್ರೀಂ, ಎಳನೀರು, ತಂಪು ಪಾನೀಯ, ಕಲ್ಲಂಗಡಿ ಹಣ್ಣುಗಳ ವ್ಯಾಪಾರ ಜೋರಾಗಿ ನಡೆದವು.
ಭಕ್ತರಿಗೆ ಉಚಿತ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು,ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡು ಎತ್ತಿನ ಬಂಡಿಗಳಲ್ಲಿ ಪಾನಕ, ಮಜ್ಜಿಗೆ ಹಾಗೂ ಹೆಸರುಬೇಳೆ ತಂದು ಭಕ್ತರಿಗೆ ಪ್ರಸಾದವಾಗಿ ಹಂಚಿದರು.

ಸಾಯಂಕಾಲ ದೇವಿಯಲ್ಲಿ ಕ್ಷೀರ ಉಟ್ಟು ಹಾಗೂ ಕಾಯಿ ಉಟ್ಟು ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು, ಉತ್ಸವದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಮುಖಂಡರು ಹಾಗು ಭಕ್ತಾದಿಗಳು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now