--Ads--

ಆಕಾಶದಲ್ಲಿ ಮೂಡಲಿದೆ “ಸ್ಮೈಲಿ ಫೇಸ್’!”

On: April 24, 2025 6:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್ …

ಏಪ್ರಿಲ್ 25 ರಂದು ನಡೆಯಲಿದೆ ಖಗೋಳ ವಿಸ್ಮಯ

ಆಕಾಶದಲ್ಲಿ ಮೂಡಲಿದೆ
“ಸ್ಮೈಲಿ ಫೇಸ್’!”

ಅಪರೂಪಕ್ಕೊಮ್ಮೆ ಆಕಾಶದಲ್ಲಿ ಗ್ರಹಗಳ ಸಂಯೋಜನೆಯಿಂದ ಖಗೋಳ ವಿಸ್ಮಯಗಳು ನಡೆಯುವುದುಂಟು. ಅದೇ ರೀತಿ ಏಪ್ರಿಲ್‌ 25 ಅಂದರೆ ನಾಳೆ ಶುಕ್ರವಾರ ಕೂಡಾ ಖಗೋಳ ವಿಸ್ಮಯವೊಂದು ನಡೆಯಲಿದ್ದು, ತ್ರಿವಳಿ ಗ್ರಹಗಳ ಸಂಯೋಜನೆಯಿಂದ ಆಗಸದಲ್ಲಿ ನಗು ಮುಖ ಬೆಳಗಲಿದೆ. ಶುಕ್ರ, ಶನಿ ಮತ್ತು ಅರ್ಧ ಚಂದ್ರನ ಸಂಯೋಜನೆಯಿಂದ ಆಕಾಶದಲ್ಲಿ ‘ಸ್ಮೈಲಿ ಫೇಸ್’ ಗೋಚರಿಸಲಿದ್ದು, ಇದು ಯಾವ ಸಮಯದಲ್ಲಿ ಕಾಣಿಸಲಿದೆ, ಇದನ್ನು ಹೇಗೆ ವೀಕ್ಷಿಸುವುದು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಾಹ್ಯಾಕಾಶದಲ್ಲಿ ಆಗೊಮ್ಮೆ ಈಗೊಮ್ಮೆ ಅದ್ಭುತ ಪವಾಡಗಳು ನಡೆಯುತ್ತಿರುತ್ತವೆ. ಗ್ರಹಗಳ ಸಂಯೋಜನೆಯಿಂದ ಈ ಹಿಂದೆಯೂ ಇಂತಹ ಸಾಕಷ್ಟು ಅದ್ಭುತಗಳು ನಡೆದಿವೆ. ಅದೇ ರೀತಿ ಏಪ್ರಿಲ್‌ 25 ರಂದು ಅಂದರೆ ನಾಳೆ ಆಕಾಶದಲ್ಲಿ ಅದ್ಭುತ ಖಗೋಳ ವಿಸ್ಮಯವೊಂದು ಗೋಚರಿಸಲಿದೆ. ಹೌದು ನಾಳೆ ಶುಕ್ರ, ಶನಿ ಮತ್ತು ಅರ್ಧ ಚಂದ್ರನ ಸಹಯೋಗದಿಂದ ಆಕಾಶದಲ್ಲಿ ನಗು ಮುಖ ಬೆಳಗಲಿದೆ. ಈ ಮೂರು ಗ್ರಹಗಳ ಅಪರೂಪದ ಜೋಡಣೆಯಿಂದ ಆಗಸದಲ್ಲಿ ‘ಸ್ಮೈಲಿ ಫೇಸ್‘ (Smiley Face )ಗೋಚರಿಸಲಿದೆ.

*ಏಪ್ರಿಲ್‌ 25, 2025 ರಂದು ಅಂದರೆ ನಾಳೆ ಬೆಳಗಿನ ಜಾವ 5:30* ರ ಸುಮಾರಿಗೆ ಆಕಾಶದಲ್ಲಿ ‘ಸ್ಮೈಲಿ ಫೇಸ್’ ಕಾಣಿಸಲಿದೆ. ಬೆಳಗಿನ ಜಾವದ ವೇಳೆಗೆ ಈ ಖಗೋಳ ಅದ್ಭುತ ಗೋಚರಿಸಲಿದ್ದು, ಆಕಾಶದಲ್ಲಿ ಕಾಣಿಸುವ ಈ ನಗು ಮುಖವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದಾಗಿದೆ. ಕೇವಲ ಒಂದು ಗಂಟೆ ಮಾತ್ರ ಈ ಖಗೋಳ ಅಧ್ಬುತ ಗೋಚರಿಸಲಿದೆ. ಶುಕ್ರ, ಶನಿ ಗ್ರಹ ಮತ್ತು ಅರ್ಧ ಚಂದ್ರನ ಸಂಯೋಜನೆಯಿಂದ ಆಕಾಶದಲ್ಲಿ ಸ್ಮೈಲಿ ಫೇಸ್ ರಚನೆಯಾಗಲಿದೆ. ಶುಕ್ರ ಮತ್ತು ಶನಿ ಕಣ್ಣಿನಂತೆ ಇದ್ದರೆ, ಅರ್ಧ ಚಂದ್ರ ಬಾಯಿಯ ಆಕಾರದಲ್ಲಿ ಕಾಣಿಸಲಿದೆ.

ಏಪ್ರಿಲ್ 25, 2025 ರ ಮುಂಜಾನೆ ಶುಕ್ರ, ಶನಿ ಮತ್ತು ಅರ್ಧಚಂದ್ರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಸೂರ್ಯೋದಯಕ್ಕೂ ಮುನ್ನ ಪೂರ್ವ ದಿಕ್ಕಿನಲ್ಲಿ ಈ ಸ್ಮೈಲಿ ಫೇಸ್ ನ ಸ್ಪಷ್ಟ ನೋಟವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು. ಹೀಗೆ ಮೂರು ಗ್ರಹಗಳು ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ತ್ರಿವಳಿ ಸಂಯೋಗ ಅಂತಾನು ಕರಿತಾರೆ. ನಾಳೆ ಮುಂಜಾನೆ ಶುಕ್ರ, ಶನಿ ಗ್ರಹ ಮತ್ತು ಚಂದ್ರನ ತ್ರಿವಳಿ ಸಂಯೋಗದಿಂದ ಆಕಾಶದಲ್ಲಿ ಸ್ಮೈಲಿ ಫೇಸ್ ಕಾಣಿಸಲಿದೆ. ಇದನ್ನು ನೀವು ಬರಿಗಣ್ಣಿನಿಂದ ನೋಡಬಹುದು. ಜೊತೆಗೆ ಉತ್ತಮ ನೋಟಕ್ಕಾಗಿ ನೀವು ದೂರದರ್ಶಕ ಅಥವಾ ಬೈನಾಕ್ಯುಲರ್‌ನಿಂದ ವೀಕ್ಷಿಸಬಹುದು. ಇದಕ್ಕೂ ಮೊದಲು, 2008 ರಲ್ಲಿ ಶುಕ್ರ, ಗುರು ಮತ್ತು ಚಂದ್ರ ಒಟ್ಟಿಗೆ ಕಾಣಿಸಿಕೊಂಡಾಗ ಇದೇ ರೀತಿಯ ದೃಶ್ಯ ಆಕಾಶದಲ್ಲಿ ಕಂಡುಬಂದಿತ್ತು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಬಿಟ್‌ಡೆಲ್ಟಾ ಇಂಡಿಯಾ ವಿಶ್ವದ ಅತಿದೊಡ್ಡ ಕ್ರಿಪ್ಟೋ ಮಾರುಕಟ್ಟೆಗಾಗಿ ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ (VDA) ಮೂಲಸೌಕರ್ಯವನ್ನು ಪ್ರಾರಂಭಿಸಿದೆ.

ಭಾರತದಲ್ಲಿನ ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಗಳು ಮೊಬೈಲ್ ನಾವೀನ್ಯತೆಯ ಭವಿಷ್ಯವನ್ನು ಸಹ-ಸೃಷ್ಟಿಸಲು ಸ್ಟಾರ್ಟ್ಅಪ್ಗಳನ್ನು ಆಹ್ವಾನಿಸುತ್ತವೆ.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ         ರಾಷ್ಟ್ರೀಯ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ

ಸಂಗೊಳ್ಳಿ ರಾಯಣ್ಣ  ಪ್ರಶಸ್ತಿಗೆ ಭಾಜನರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರಿಗೆ ಕೆಯುಡಬ್ಲೂಜೆ ಯಿಂದ ಅಭಿನಂದನೆ 

ತಂದೆ, ತಾಯಿ, ಗುರು, ಸ್ನೇಹಿತರ ಆಶೀರ್ವಾದ ಸಾಧನೆಗೆ ದಾರಿ : ಕವಿ, ಗಾಯಕ ವೀರೇಶ್ ಯರಬಾಳು ಅಭಿಪ್ರಾಯ

ನಗರ ಜೀವನದ ಹೊಸ ಪರಿಕಲ್ಪನೆ: ದೈನಂದಿನ ಜೀವನದ ಸುತ್ತ ವಿನ್ಯಾಸಗೊಳಿಸಲಾದ ಸಮುದಾಯವನ್ನು ಪರಿಚಯಿಸುತ್ತಿದೆ ಪುಷ್ಕಲಂ ಡೆವಲಪರ್ಸ್